Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಲಾಕ್ ಡೌನ: ಮಗನನ್ನು ಕರೆತರಲು ಬರೋಬ್ಬರಿ 1,400 ಕಿಮೀ ಸ್ಕೂಟಿ ಓಡಿಸಿದ ಮಹಾತಾಯಿ

48 ವರ್ಷದ ರಜಿಯಾ ಬೇಗಂ ಸ್ಥಳೀಯ ಪೋಲೀಸರ ಅನುಮತಿ ಪಡೆದು ಸೋಮವಾರ ಬೆಳಿಗ್ಗೆ ತೆಲಂಗಾಣದ ನಿಜಾಮಾಬಾದ್ ನಲ್ಲಿರುವ ಬೊಧಾನ್ ಎಂಬ ಊರಿನಿಂದ ನೆಲ್ಲೂರಿಗೆ ಪ್ರಯಾಣಿಸಿ ತಮ್ಮ ಮಗನನ್ನು ಮನೆಗೆ ಕರೆತಂದಿದ್ದಾರೆ.

ಲಾಕ್ ಡೌನ: ಮಗನನ್ನು ಕರೆತರಲು ಬರೋಬ್ಬರಿ 1,400 ಕಿಮೀ ಸ್ಕೂಟಿ ಓಡಿಸಿದ ಮಹಾತಾಯಿ

Saturday April 11, 2020 , 2 min Read

ದೇಶದಾದ್ಯಂತ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಎಷ್ಟೋ ಜನ ತಮ್ಮ ಕುಟುಂಬದವರಿಂದ ದೂರವಿರುವಂತಾಗಿದೆ. ಹೇಗಾದರೂ ಮನೆಗೆ ಹೋಗಲೇಬೇಕೆನ್ನುವ ಕೆಲವರು ನಡೆದುಕೊಂಡೇ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಿದ್ದಾರೆ. ಮತ್ತೆ ಅನೇಕರು ತಮ್ಮ ಮನೆಗಳಿಗೆ ಹೋಗಲಾರದೆ ಸಿಕ್ಕಿಹಾಕಿಕೊಂಡು ಪರದಾಡುವಂತಾಗಿದೆ.


ಇದರ ನಡುವೆ ತಾಯಿಯೊಬ್ಬಳು ತನ್ನ ಮಗನನ್ನು ಮನೆಗೆ ಕರೆತರಲು ಬರೋಬ್ಬರಿ 700 ಕಿಮೀ ಸ್ಕೂಟಿ ಓಡಿಸಿಕೊಂಡು ಹೋಗಿದ್ದಾಳೆ. ಈ ಸಾಹಸ ಮಾಡಿದ 48 ವರ್ಷದ ಆ ಮಹಾತಾಯಿ ರಜಿಯಾ ಬೇಗಂ ಸ್ಥಳೀಯ ಪೋಲೀಸರ ಅನುಮತಿ ಪಡೆದು ಸೋಮವಾರ ಬೆಳಿಗ್ಗೆ ತೆಲಂಗಾಣದ ನಿಜಾಮಾಬಾದ್ ನಲ್ಲಿರುವ ಬೊಧಾನ್ ಎಂಬ ಊರಿನಿಂದ ನೆಲ್ಲೂರಿಗೆ ಪ್ರಯಾಣಿಸಿದ್ದಾಳೆ. ಹೆದ್ದಾರಿ ರಸ್ತೆಯ ಮುಖಾಂತರವೇ ಪ್ರಯಾಣಿಸಿದ ಮಹಿಳೆ ಬುಧವಾರ ಸಂಜೆ ಮಗನೊಟ್ಟಿಗೆ ಮನೆ ತಲುಪಿದ್ದಾಳೆ ಎಂದು ಸ್ಕ್ರೊಲ್ ವರದಿ ಮಾಡಿದೆ.


q

ರಜಿಯಾ ಬೇಗಂ ಮತ್ತು ಮಗ ನಿಜಾಮುದ್ದೀನ್ (ಚಿತ್ರಕೃಪೆ: ಹಿಂದೂಸ್ತಾನ ಟೈಮ್ಸ್)




2019 ರಲ್ಲಿ 12 ನೇ ತರಗತಿ ಪೂರ್ಣಗೊಳಿಸಿದ ನಿಜಾಮುದ್ದೀನ್, ಹೈದರಾಬಾದ್‌ನ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗೆ ಸೇರುವ ಮೂಲಕ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ. ಮಾರ್ಚ್ 12 ರಂದು, ನಿಜಾಮುದ್ದೀನ್ ಆಸ್ಪತ್ರೆಗೆ ದಾಖಲಾಗಿರುವ ತನ್ನ ಸ್ನೇಹಿತನ ತಂದೆಯನ್ನು ನೋಡಲು ಅವನೊಟ್ಟಿಗೆ ನೆಲ್ಲೂರಿಗೆ ಹೋಗಿದ್ದ ಅದೇ ಸಮಯಕ್ಕೆ ಲಾಕ್ ಡೌನ್ ಆಗಿದ್ದು ಅವರಿಗೆ ಆಶ್ಚರ್ಯಗೊಳಿಸಿದ್ದಲ್ಲದೆ, ಮಾರ್ಚ್ 23 ರಂದು ರಾಜ್ಯದಲ್ಲಿ ವಿಧಿಸಲಾದ ಲಾಕ್ ಡೌನ್ ಕಾರಣದಿಂದಾಗಿ ಟ್ರೈನ್ ಗಳನ್ನು ರದ್ದುಗೊಳಿಸಲಾಗಿತ್ತು, ಹೀಗಾಗಿ ತನ್ನ ಸ್ನೇಹಿತನೊಂದಿಗೆ ಅಲ್ಲಿಯೇ ಸಿಲುಕಿಕೊಂಡರು.


ವಿ ಜೈಪಾಲ್ ರೆಡ್ಡಿ (ಎಸಿಪಿ) ಅವರನ್ನು ಎರಡು ಬಾರಿ ಸಂಪರ್ಕಿಸಿ ತನ್ನ ಮಗನನ್ನು ಹೇಗೆ ಮರಳಿ ಕರೆತರುವುದು ಎಂಬುದರ ಕುರಿತು ಸಲಹೆ ಪಡೆದು ಏಪ್ರಿಲ್ 5 ರ ಭಾನುವಾರ, ಲಾಕ್ ಡೌನ್ ವಿಸ್ತರಿಣೆಯಾಗುವ ಸಾಧ್ಯತೆಗಳಿರುವುದನ್ನು ನೋಡಿ ರಜಿಯಾ ಬೇಗಂ ನೆಲ್ಲೂರಿಗೆ ಹೋಗಿ ತನ್ನ ಮಗನನ್ನು ಮರಳಿ ಕರೆತರಲು ನಿರ್ಧರಿಸಿದರು. ಇದಕ್ಕೆ ಕಾರಿನವರನ್ನು ಬಾಡಿಗೆಗೆ ಕೇಳಿದಾಗ ಯಾರು ಆಸಕ್ತಿ ತೋರಿಸದಿದ್ದದ್ದು ಕಂಡು ಸ್ಕೂಟಿಯಲ್ಲಿಯೇ ಪ್ರಯಾಣ ಆರಂಭಿಸಿದರು.


ಪೊಲೀಸರು ರಜಿಯಾ ಬೇಗಂ ಅವರನ್ನು ಹಲವಾರು ಸ್ಥಳಗಳಲ್ಲಿ ತಡೆದರು, ಆದರೆ ಬೋಧನ್ ಎಸಿಪಿಯಿಂದ ಪಡೆದ ಕರ್ಪ್ಯು ಪತ್ರವನ್ನು ನೋಡಿದ ಅವರು ಮುಂದುವರಿಯಲು ಅವಕಾಶ ನೀಡಿದರು. ದಿನವೊಂದಕ್ಕೆ ಸರಾಸರಿ 470 ಕಿಮೀ ನಂತೆ ಮೂರೂ ದಿನ 1,400 ಕಿಮೀಗಳ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ.


"ಅಂತರ್-ರಾಜ್ಯ ಗಡಿಗಳಲ್ಲಿ, ನನಗೆ ಯಾವುದೇ ಸಮಸ್ಯೆಗಳಿರಲಿಲ್ಲ, ಏಕೆಂದರೆ ಪೊಲೀಸರು ನನಗೆ ಸಹಕಾರ ನೀಡದರು ಮತ್ತು ಆಯಾಸಗೊಳ್ಳದಂತೆ ಪ್ರತಿ ಎರಡು ಗಂಟೆಗಳ ನಂತರ ವಿರಾಮ ತೆಗೆದುಕೊಳ್ಳುವಂತೆ ಅವರು ನನಗೆ ಸಲಹೆ ನೀಡಿದರು,” ಎಂದು ಅವರು ಹೇಳಿದರು.


"ನಾನು 25 ವರ್ಷಗಳಿಂದ ದ್ವಿಚಕ್ರ ವಾಹನವನ್ನು ಓಡಿಸುತ್ತಿದ್ದೇನೆ. ನನ್ನ ಪತಿ 14 ವರ್ಷಗಳ ಹಿಂದೆ ನಿಧನರಾದರು, ಆ ಸಮಯದಲ್ಲಿ ನಾನು ಡಯಾಲಿಸಿಸ್‌ಗೆ ಒಳಗಾಗಬೇಕಾದಾಗ ದ್ವಿಚಕ್ರ ವಾಹನದಲ್ಲಿ ಹೈದರಾಬಾದ್‌ಗೆ ಓಡಾಡುತ್ತಿದ್ದೆ ಹಾಗಾಗಿ ದೂರವು ಜಾಸ್ತಿಯಿದ್ದರು ನಾನು ಹೆದರದೆ ದೂರವನ್ನು ಕ್ರಮಿಸಿದೆ,” ಎಂದು ಅವರು ಇಂಡಿಯನ್ ಎಕ್ಸ್ಪ್ರೆಸ್ ಗೆ ಹೇಳಿದ್ದಾರೆ.