Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಸಕಲ ಕಲಾ ವಲ್ಲಭನಿಗಿಲ್ಲ ಸಾಟಿ- ಸೂಪರ್​ ಆರ್ಟಿಸ್ಟ್​, ಖಡಕ್​ ವಿಲನ್​..!

ಟೀಮ್​ ವೈ.ಎಸ್​. ಕನ್ನಡ

ಸಕಲ ಕಲಾ ವಲ್ಲಭನಿಗಿಲ್ಲ ಸಾಟಿ- ಸೂಪರ್​ ಆರ್ಟಿಸ್ಟ್​, ಖಡಕ್​ ವಿಲನ್​..!

Monday October 24, 2016 , 3 min Read

ಹಾರ್ಡ್​ವರ್ಕ್​. ಇದು ಗೊತ್ತಿದ್ದವನಿಗೆ ಜಗತ್ತಿನಲ್ಲಿ ಸಾಧ್ಯವಾಗದೇ ಇರುವುದು ಯಾವುದೂ ಇಲ್ಲ. ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಅದೃಷ್ಟವನ್ನು ಕೂಡ ಬದಲಾಯಿಸುವ ತಾಕತ್ತು ಹೊಂದಿದೆ. ಛಲ ಮತ್ತು ಕಠಿಣ ಪರಿಶ್ರಮದಿಂದ ಗೆದ್ದವರ ಕಥೆ ಎಷ್ಟು ಬೇಕಾದ್ರೂ ಸಿಗುತ್ತದೆ. ಅವೆಲ್ಲವೂ ಎಲ್ಲರಿಗೂ ಮಾದರಿ. ಆದ್ರೆ ಈಗ ನಾವು ಹೇಳ ಹೊರಟಿರುವ ಕಥೆಯೇ ವಿಭಿನ್ನ.

image


ಬಡತನ ಹೆಚ್ಚಾದಾಗ ಕೈ ಬೀಸಿ ಕರೆದದ್ದು ಕಲೆ. ಕಲೆಯನ್ನೇ ಉಸಿರಾಗಿಸಿಕೊಂಡವನಿಗೆ ಜೀವತುಂಬಿದ್ದು ಆ್ಯಕ್ಟಿಂಗ್. ಕೈನಲ್ಲಿ ಕುಂಚ ಹಿಡಿದ್ರೆ ಅದ್ಬುತ ಕಲಾವಿದ. ಕ್ಯಾಮೆರಾ ಮುಂದೆ ನಿಂತ್ರೆ ಎಲ್ಲರನ್ನೂ ಮೆಚ್ಚಿಸುವಂತೆ ಅಭಿನಯಿಸುವ ನಟ. ಚಿತ್ರರಂಗದಲ್ಲೂ ಹಾಗೂ ಕಲಾವಿದನಾಗಿ ಗುರಿತಿಸಿಕೊಂಡಿರೋ ಸುಧಿ ಬೆಳೆದು ಬಂದಿರೋ ಹಾದಿ ನಿಜಕ್ಕೂಆಶ್ಚರ್ಯಕರ ಮತ್ತು ಅಚ್ಚರಿ.

ಇದನ್ನು ಓದಿ: ಕೇವಲ 10 ಸಾವಿರ ಮೂಲಧನದಿಂದ ಭಾರತದ ಅತಿ ದೊಡ್ಡ ಪವರ್ ಬ್ಯಾಕ್ ಅಪ್ ಸಂಸ್ಥೆ ನಿರ್ಮಿಸಿದ ವಾಣಿಜ್ಯೋದ್ಯಮಿ

ಸುಧಿ ಮೂಲತ ಮಂಡ್ಯದವರು. ಹುಟ್ಟಿಬೆಳೆದದ್ದು ಬೆಂಗಳೂರಿನಲ್ಲಿ. ಸುಮಾರು 15ವರ್ಷ ಇರುವಾಗಲೇ ತಮ್ಮ ಕಲಾ ಜೀವನವನ್ನ ಪ್ರಾರಂಭ ಮಾಡಿದ್ರು. ಕುಟುಂಬದ ಅನಿವಾರ್ಯತೆ ಸುಧೀಯನ್ನ ಬಣ್ಣದಜಗತ್ತಿಗೆ ಬರುವಂತೆ ಮಾಡಿತ್ತು. ಆರಂಭದಲ್ಲಿ ಬೇರೆಯವರ ಬಳಿ ಕೆಲಸವನ್ನ ಮಾಡ್ತಿದ್ದ ಸುದೀ ತನಗೆ ಗೊತ್ತಿಲ್ಲದ ಹಾಗೆ ಒಂದೊಂದು ಮೆಟ್ಟಿಲನ್ನ ಏರುತ್ತಾ ಹೋದ್ರು. ಕೆಲಸಕ್ಕಾಗಿ ಓದನ್ನು ತ್ಯಾಗ ಮಾಡಿದ ಸುಧಿಯನ್ನ ಸರಸ್ವತಿ ಕೈ ಹಿಡಿದು ನಡೆಸಿದಳು. ಸುಮಾರು 20ವರ್ಷದಿಂದ ಬಣ್ಣದಿಂದಲೇ ತನ್ನ ಜೀವನವನ್ನ ಕಟ್ಟಿಕೊಂಡ ಸುಧೀ ಇವತ್ತು ಬೆಂಗಳೂರಿನಲ್ಲಿ ಅತ್ಯಂತ ಬೇಡಿಕೆ ಇರುವ ಕಲಾವಿದ.

image


ಶ್ರೀ ಆರ್ಟ್​ ಮೂಲಕ ಹೊರಹೊಮ್ಮಲಿದೆ ಬಣ್ಣದ ಜಗತ್ತು

8ವರ್ಷ ಬೇರೆಯವ್ರ ಬಳಿ ಕೆಲಸ ಮಾಡಿದ ಸುಧೀ ಫೈನಲಿ ಒಂದು ದಿನ ತನ್ನದೇಯಾದ ಸ್ವಂತ ನೆಲೆಯನ್ನುಕಟ್ಟಿಕೊಂಡ್ರು. ಚಿಕ್ಕವಯಸ್ಸಿನಲ್ಲೇ ಎಲ್ಲಾ ಕೆಲಸಗಳನ್ನ ಕಲಿತ ನಂತರ ವಿಜಯನಗರದಲ್ಲಿ ಶ್ರೀ ಆರ್ಟ್ಸ್​ ಅನ್ನೋ ಅಂಗಡಿಯನ್ನ ಓಪನ್ ಮಾಡಿದ್ರು. ಬ್ಯಾನರ್ ಪೇಯಿಟಿಂಗ್​ನಿಂದ ಪ್ರಾರಂಭವಾದ ಬದುಕು ಈಗ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಕರೆದುಕೊಂಡು ಬಂದಿದೆ. ಸದ್ಯ ನಟನೆ ಮತ್ತು ಕಲಾವಿದನ ಕೆಲಸ ಎಲ್ಲವನ್ನೂ ಒಟ್ಟೋಟ್ಟಿಗೆ ನಿಭಾಯಿಸುತ್ತಿರುವ ಸುಧೀ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ,ಪಬ್​ಗಳಲ್ಲಿ ಇಂಟೀರಿಯರ್​ ಪೇಯಿಂಟಿಂಗ್ ಕೆಲಸವನ್ನ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾರಂಗದ ಪ್ರಚಾರದ ಕೆಲಸ ಮತ್ತು ಪೋಸ್ಟರ್​ ಡಿಸೈನ್​ಗಳನ್ನು ಮಾಡೋವುದರಲ್ಲಿ ಎತ್ತಿದ ಕೈ. ಇನ್ನು ಚಿತ್ರಗಳಲ್ಲಿ ಬಳಸೋ ಅದೆಷ್ಟೋ ಮಾಡಿಫೈಡ್​ ಬೈಕ್​ಗಳನ್ನ ಮಾಡಿದ್ದು ಇದೇ ಸುಧೀ. ಇತ್ತೀಚಿನ ದಿನಗಳಲ್ಲಿ ಟ್ರೇಂಡಿ ಆಗಿರುವ ಬೈಕ್ ಪೇಯಿಂಟಿಂಗ್, ಕಾರ್ ಮಾಡಿಫೈ ಕಲರ್​ಫುಲ್ ಪೇಯಿಂಟಿಂಗ್​ ಕೂಡ ಡಿಫ್ರೆಂಟ್ ಸ್ಟೈಲ್ ನಲ್ಲಿ ಮಾಡಿಕೊಡೋದ್ರಲ್ಲಿ ಇವ್ರು ಫೇಮಸ್. ತಾವಷ್ಟೇ ಅಲ್ಲದೆ ತಮ್ಮ ಸ್ನೇಹಿತರನ್ನು ಸೇರಿಸಿಕೊಂಡು ಒಟ್ಟೋಟ್ಟಿಗೆ ಕೆಲಸ ಮಾಡೋ ಸುಧೀ ಇಂದಿಗೂ ಸ್ನೇಹಿತರೊಟ್ಟಿಗೆ ಕೆಲಸ ಮಾಡುತ್ತಾರೆ.

image


ಕಲಾವಿದನಾಗಿ ಸಿನಿಮಾ ಪಯಣ

ಸುಧೀ ಸ್ಟೈಲ್ ಮತ್ತು ಲುಕ್ಅನ್ನ ನೋಡಿ ಬಯಸದೇ ನಾಯಕನಾಗೋ ಅವಕಾಶವೂ ಕೂಡ ಒಲಿದು ಬಂದಿತ್ತು. ಕಾರಣಾಂತರದಿಂದ ಸಿನಿಮಾ ತೆರೆಗೆ ಬರಲಿಲ್ಲ ಅನ್ನೋದನ್ನ ಬಿಟ್ಟರೆ ಸುಧೀ ಅವ್ರಿಗೆ ಮಾತ್ರ ಬಣ್ಣದ ನಂಟು ಬಿಡಲಿಲ್ಲ. ನಾಯಕನಾಗಿ ಕ್ಯಾಮೆರಾ ಎದುರಿಸಿದ ನಂತ್ರ ಮತ್ತೆ ಅಭಿನಯಿಸಬೇಕು ಅನ್ನೋ ಹಂಬಲ ಹೆಚ್ಚಾಯ್ತು. ದುನಿಯಾ ಸೂರಿ ಅವ್ರನ್ನ ಮನಸ್ಸಿನಲ್ಲಿ ಗುರುಗಳಾಗಿ ಸ್ವೀಕರಿಸಿದ ಸುಧೀ ಅವ್ರ ಬಳಿಯೇ ಕೆಲಸ ಮಾಡಬೇಕು ಅನ್ನೋ ಕನಸು ಕಂಡಿದ್ರು. ಹತ್ತು ವರ್ಷಗಳ ಪರಿಶ್ರಮದಿಂದ ಸೂರಿ ಅವ್ರ ಮಡಿಲು ಸೇರಿರೋ ಸುಧೀ ಈಗಾಗ್ಲೆ ಸೂರಿ ಅವ್ರ ಬಳಿ ಕೆಲಸ ಮಾಡೋದಕ್ಕೆ ಶುರು ಮಾಡಿದ್ದಾರೆ. 2007 ರಲ್ಲಿ ಸಿನಿಮಾರಂಗವನ್ನ ಸೀರಿಯಸ್ ಆಗಿ ತೆಗೆದುಕೊಂಡ ಸುಧೀ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ತಮ್ಮಅಭಿನಯದ ಕರಾಮತ್ತನ್ನ ತೋರಿಸಿದ್ದಾರೆ. ಮಿಸ್ಟರ್ ಐರಾವತಾ,ಕೆಂಡಸಂಪಿಗೆ,ಮಾಮೂ ಟೀಅಂಗಡಿ ,ದೊಡ್ಡಮನೆ ಹುಡ್ಗ, ಟಗರು ಹೀಗೆ ಇನ್ನೂ ಅನೇಕ ಚಿತ್ರಗಳನ್ನ ಇವ್ರ ಅಭಿನಯವಿದೆ. ಕಲಾವಿದನಾಗಿ ಸಕ್ಸಸ್​ ಆಗಿರುವ ಇವರು ಸದ್ಯ ಚಿತ್ರರಂಗದಲ್ಲೂ ಅದೇ ರೀತಿ ಯಶಸ್ಸಿನ ಮೆಟ್ಟಿಲನ್ನ ಏರುತ್ತಿದ್ದಾರೆ.

image


ಎಲ್ಲದಕ್ಕೂ ಸೈ ಈ ಸುಧೀ..!

ಬದುಕು ಮತ್ತು ಬಣ್ಣದ ಜಗತ್ತನ್ನು ಪ್ರೊಫೆಷನಲ್ ಆಗಿ ಸ್ವೀಕರಿಸಿರುವ ಸುಧೀ ಸದ್ಯಕನ್ನಡ ಸಿನಿಮಾರಂಗದಲ್ಲಿ ದೊಡ್ಡ ಹಿಟ್​ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅಭನಯದ ದೊಡ್ಮನೆ ಹುಡ್ಗ ಸಿನಿಮಾದಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಸೂರಿ ಅವ್ರದ್ದೇ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಟಗರು ಚಿತ್ರದಲ್ಲೂ ಸುಧೀ ಅವ್ರ ಅಭಿನಯವಿದೆ. ಚಿತ್ರರಂಗದಲ್ಲಿ ಏನಾದ್ರು ಸಾಧನೆ ಮಾಡಬೇಕು ಅಂತ ಇರುವ ಇವರಿಗೆ ಈ ಎರಡು ಚಿತ್ರಗಳು ದೊಡ್ಡ ಮೆಟ್ಟಿಲಾಗಿ ಸಾಥ್​ಕೊಡುವ ಎಲ್ಲಾ ಲಕ್ಷಣಗಳು ಇವೆ. ಈ ಸಕಲ ಕಲೆಯನ್ನು ಭಲ್ಲವನಿಗೆ ಯಶಸ್ಸುಆದಷ್ಟು ಸುಲಭವಾಗೋದ್ರಲ್ಲಿ ಡೌಟ್​ ಇಲ್ಲ.

ಒಂದು ಕೆಲಸ ಮಾಡಿ ಸಾಕಪ್ಪಾ ಇಷ್ಟು, ಬದುಕು ಹೆಂಗೋ ಸಾಗುತ್ತೆ ಅನ್ನುವರ ಮಧ್ಯೆ ಸುಧೀಯಂತಹ ವ್ಯಕ್ತಿಗಳು ಕೂಡ ಸಿಗುತ್ತಾರೆ. ಕಷ್ಟ ಹಲವು ಮಗ್ಗುಲುಗಳಲ್ಲಿ ಪರೀಕ್ಷೆ ಒಡ್ಡಿದರೂ ಅದನ್ನು ಮೆಟ್ಟಿನಿಂತು ಯಶಸ್ಸನ್ನು ಕೈಯಲ್ಲಿಟ್ಟುಕೊಳ್ಳುವ ತಾಕತ್ತು ಸುಧೀ ಮತ್ತು ಅವರ ಶ್ರದ್ಧೆಗೆ ಇದೆ.

ಇದನ್ನು ಓದಿ:

1.160 ಕಿ.ಮೀ.ನದಿಗೆ ಮರುಜೀವ ನೀಡಿದ ಸಂತ - ಹಲವು ಹಳ್ಳಿಗಳ ಪಾಲಿಗೆ ಈತ ಆಧುನಿಕ ಭಗೀರಥ

2. ಆನ್​ಲೈನ್​ನಲ್ಲಿ "ಭಕ್ತಿ"ಗೆ ಟಚ್​- ಗ್ರಾಹಕರನ್ನು ಸೆಳೆಯುತ್ತಿದೆ ಸತೀಶ್​ ಸ್ಟೋರ್ಸ್​

3. ನಿರುದ್ಯೋಗದ ಚಿಂತೆ ಬಿಡಿ- ಆಸಾನ್​ಜಾಬ್ಸ್​​.ಕಾಂನಲ್ಲಿ ಕೆಲಸಕ್ಕೆ ಟ್ರೈ ಮಾಡಿ..!