ಪ್ರಕಾಶ್ ರಾಜ್, ಸಾಲುಮರದ ತಿಮ್ಮಕ್ಕ, ವಿಲಾಸ್ ನಾಯಕ ಸೇರಿದಂತೆ 7 ಸಾಧಕರಿಗೆ ಪ್ರೈಡ್ ಆಪ್ ಕರ್ನಾಟಕ ಪ್ರಶಸ್ತಿ ಗರಿ
ರೌಂಡ್ ಟೇಬಲ್ ಇಂಡಿಯಾ ಮತ್ತು ಲೇಡಿಸ್ ಸರ್ಕಲ್ ಇಂಡಿಯಾ ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತಂದ ಸಾಧಕರನ್ನು ಗೌರವಿಸಿ ನೀಡುವ ಫ್ರೈಡ್ ಆಪ್ ಕರ್ನಾಟಕ ಪ್ರಶಸ್ತಿ 2020ರ ಪಟ್ಟಿ ಪ್ರಕಟಗೊಂಡಿದ್ದು ವಿವಿಧ ಕ್ಷೇತ್ರಗಳ 7 ಸಾಧಕರಿಗೆ ಪ್ರಶಸ್ತಿ ಲಭಿಸಿದೆ.
ರೌಂಡ್ ಟೇಬಲ್ ಇಂಡಿಯಾ ಮತ್ತು ಲೇಡಿಸ್ ಸರ್ಕಲ್ ಇಂಡಿಯಾ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದವರನ್ನು ಗುರುತಿಸಿ ನೀಡುವ ಪ್ರೈಡ್ ಆಪ್ ಕರ್ನಾಟಕ ಪ್ರಶಸ್ತಿಯ 8ನೇ ಆವೃತ್ತಿ ಪಟ್ಟಿ ಪ್ರಕಟವಾಗಿದ್ದು ಮನರಂಜನೆ, ಕ್ರೀಡೆ, ವಣ್ಯಜೀವಿಗಳ ಸಂರಕ್ಷಣೆ, ಕಲೆ, ಸಂಗೀತ ಮತ್ತು ಪರಿಸರ ಸಂರಕ್ಷಣಾ ಕ್ಷೇತ್ರಗಳಿಂದ ಏಳು ಜನರನ್ನು ಆಯ್ಕೆ ಮಾಡಲಾಗಿದೆ.
ಚಲನಚಿತ್ರ ಮತ್ತು ಮನರಂಜನೆ ವಿಭಾಗದಿಂದ ಪ್ರಕಾಶ್ ರಾಜ್, ಕ್ರೀಡೆಯಲ್ಲಿನ ಸಾಧನೆಗಾಗಿ ವೆಂಕಟೇಶ್ ಬಾಬು ಮತ್ತು ರೋಹನ್ ಬೋಪಣ್ಣ, ವನ್ಯಜೀವಿ ಸಂರಕ್ಷಣೆಗಾಗಿ ಕೆ ಉಲ್ಲಾಸ ಕಾರಂತ್, ಕಲೆಗಾಗಿ ವಿಲಾಸ್ ನಾಯಕ್, ಸಂಗೀತ ಕ್ಷೇತ್ರದ ಸಾಧನೆಗಾಗಿ ಡಾ. ಅನೀಶ್ ವಿದ್ಯಾಶಂಕರ ಮತ್ತು ಪರಿಸರ ಸಂರಕ್ಷೆಣೆಗಾಗಿ ಸಾಲುಮರದ ತಿಮ್ಮಕ್ಕ ಅವರಿಗೆ 8 ನೇ ಸಾಲಿನ ಪ್ರೈಡ್ ಆಪ್ ಕರ್ನಾಟಕ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಬಂದ ಖುಷಿಯಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್ ಈ ಪ್ರಶಸ್ತಿಯನ್ನು ಗೆದ್ದಿರುವುದು ನನಗೆ ಹೆಮ್ಮೆಯ ಸಂಗತಿ. ನಾನು ನಾಟಕ ಮಾಡಿಕೊಂಡು ಬಂದವನು, ಈಗ ನನ್ನಿಂದ ರಾಜ್ಯಕ್ಕೆ ಹೆಮ್ಮೆ ಬಂದಿದೆ ಎನ್ನುವುದು ವಿವರಿಸಲಾರದಷ್ಟು ಖುಷಿಯ ವಿಚಾರ ಎಂದರು.
ವೇಗದ ಚಿತ್ರಕಾರ ವಿಲಾಸ್ ನಾಯಕ “ಕಲೆಯನ್ನು ತುಂಬಾ ಹಿಂದಿನಿಂದಲೂ ಹವ್ಯಾಸವೆಂದುಕೊಂಡಿದ್ದಾರೆ ಹೊರತು ವೃತ್ತಿ ಎಂದುಕೊಂಡಿಲ್ಲ. ಆದರೆ ಈ ಪ್ರಶಸ್ತಿ ನೀಡಿದ್ದನ್ನು ನೋಡಿದರೆ ಜನರ ಜೀವನದಲ್ಲಿ ಕಲೆಯುಂಟುಮಾಡುವ ಪರಿಣಾಮ ಮುಖ್ಯವೆಂದು ಮತ್ತು ಸಮಾಜಕ್ಕೆ ಕಲೆಯ ಕೊಡುಗೆಯಿದೆ ಎಂದು ಸೂಚಿಸುತ್ತದೆ,” ಎಂದರು.
ಸಂಗೀತಗಾರ ಅನೀಶ್ ವಿದ್ಯಾಶಂಕರ್ ಮಾತನಾಡಿ ಈ ಪ್ರಶಸ್ತಿ ಗೆದ್ದಿರುವುದು ತುಂಬಾ ಖುಷಿ ನೀಡುರುವುದಲ್ಲದೆ ನಾನು ಸರಿಯಾದ ದಾರಿಯಲ್ಲಿದ್ದೇನೆಂದು ತಿಳಿಯುತ್ತದೆ ಎಂದರು.
ವೃತ್ತಿಪರ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ, “ಅಂತರಾಷ್ಟ್ರೀಯ ವೇದಿಕೆಯಲ್ಲಿ ನಾನು ಆಡುವಾಗ ನಾನು ಕೇವಲ ಭಾರತವನ್ನು ಪ್ರತಿನಿಧಿಸದೆ ಅದ್ಭುತ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದೇನೆಂಬ ವಿಚಾರ ನನ್ನಲ್ಲಿರುತ್ತದೆ. ಈ ಪ್ರಶಸ್ತಿ ಹಲವು ಸ್ಥಳೀಯ ಪ್ರತಿಭೆಗಳಿಗೆ ತಮ್ಮ ಕನಸುಗಳ ಹಾದಿಯಲ್ಲಿ ನಡೆಯಲು ಪ್ರೇರೆಪಿಸುತ್ತದೆಂದು ಭಾವಿಸುತ್ತೇನೆ,” ಎಂದರು.
ರೌಂಡ್ ಟೇಬಲ್ ಇಂಡಿಯಾ ಮತ್ತು ಲೇಡಿಸ್ ಸರ್ಕಲ್ ಇಂಡಿಯಾ ತಮ್ಮ ಫ್ರೀಡಂ ಥ್ರೂ ಎಜ್ಯುಕೇಷನ್ ಯೋಜನೆಯ ಮೂಲಕ ದೇಶದೆಲ್ಲೆಡೆ 7,140 ಶಾಲಾ ಕೋಠಡಿಗಳನ್ನು ನಿರ್ಮಿಸುವ ಮೂಲಕ ಸೌಲಭ್ಯವಂಚಿತ 7.86 ಮಿಲಿಯನ್ ಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರಿದೆ.