Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ರಾಜ್ಯದ ಗರುಡ ಕಮಾಂಡೋ ಪೊಲೀಸ್‌ ಪಡೆ ಸೇರಿದ ಮಹಿಳೆಯರು

ಸಂಪೂರ್ಣವಾಗಿ ಮಹಿಳೆಯರೆ ಇರುವ ರಾಜ್ಯದ ಮೊದಲ ಗರುಡ ಕಮಾಂಡೋ ತಂಡವನ್ನು ಭಯೋತ್ಪಾದನೆ ನಿಗ್ರಹ ದಳಕ್ಕೆ ನಿಯೋಜಿಸಲಾಗುವುದು.

ರಾಜ್ಯದ ಗರುಡ ಕಮಾಂಡೋ ಪೊಲೀಸ್‌ ಪಡೆ ಸೇರಿದ ಮಹಿಳೆಯರು

Tuesday February 09, 2021 , 2 min Read

ಹಾಗೆ ನೋಡಿದರೆ ಅದು ಒಂದು ಸಾಮಾನ್ಯದಿನದಂತೆಯೆ ಕಾಣುತ್ತದೆ, ಕೆಡೆಟ್‌ಗಳು ದಿನಕ್ಕೆ 12 ಗಂಟೆ ಗ್ರೆನೆಡ್‌ ಬಳಸುವುದು, ಶೂಟಿಂಗ್, ಬಂಡೆಗಳನ್ನು ಎರೆವುದು, ಹಗ್ಗದ ಮೇಲೆ ನಡೆಯುವುದರಂತಹ ಕಠಿಣ ತರಬೇತಿಯಲ್ಲಿ ನಿರತರಾಗಿರುತ್ತಾರೆ. ತುಸು ಗಮನವಿಟ್ಟು ನೋಡಿದರೆ ಕರ್ನಾಟಕದ ವಿವಿಧ ಹಳ್ಳಿಗಳಿಂದ ಬಂದ 17 ಯುವತಿಯರನ್ನು ಅದರಲ್ಲಿ ಕಾಣಬಹುದು. ಇವರೆ ರಾಜ್ಯದ ಪೊಲೀಸ್‌ ಇಲಾಖೆಯ ಪ್ರಥಮ ಗರುಡ ಕಮಾಂಡೋ ಪಡೆಯ ಮಹಿಳಾ ತಂಡವನ್ನು ಕಟ್ಟುತ್ತಿದ್ದಾರೆ.


“ಇವರು ಸಂಪೂರ್ಣ ಮಹಿಳೆಯರೆ ಇರುವ ಕಮಾಂಡೋ ತಂಡ ಕಟ್ಟುತ್ತಿದ್ದಾರೆ ಮತ್ತು ಯಾವುದೇ ರೀತಿಯ ಭಯೋತ್ಪಾದಕ ದಾಳಿಗಳನ್ನು ತಡೆಗಟ್ಟಲು ಮತ್ತು ದಾಳಿಯಲ್ಲಿ ಸಿಲುಕಿರುವವರನ್ನು ಕಾಪಾಡಲು ಪ್ರಸ್ತುತ ತರಬೇತಿ ಪಡೆಯುತ್ತಿದ್ದಾರೆ. ಎರಡು ತಿಂಗಳ ನಂತರ ಪರೀಕ್ಷೆ ಬರೆದ ಮೇಲೆ ಇವರನ್ನು ತಂಡದಲ್ಲಿ ನಿಯೋಜಿಸಲಾಗುವುದು,” ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಜತೆ ಮಾತನಾಡುತ್ತಾ ಪೊಲೀಸ್‌ ಇಲಾಖೆಯ ಭಯೋತ್ಪಾದನೆ ನಿಗ್ರಹ ಕೇಂದ್ರದ ಅಧೀಕ್ಷಕಿಯಾಗಿರುವ ಮಧುರಾ ವೀಣಾ ಹೇಳಿದರು.


2010ರಲ್ಲಿ ರಚಿಸಲಾಗಿರುವ ಗರುಡ ರಾಜ್ಯದ ವಿಶೇಷ ಕಾರ್ಯಾಚರಣೆ ತಂಡ ಮತ್ತು ಭಯೋತ್ಪಾದನೆ ನಿಗ್ರಹ ದಳವಾಗಿದೆ. ಇದೇ ಮೊದಲ ಬಾರಿಗೆ ಇಲಾಖೆ 50 ಮಹಿಳೆಯರಿಗೆ ದಳಕ್ಕೆ ಸೇರಿಕೊಳ್ಳಲು ತರಬೇತಿ ನೀಡುತ್ತಿದೆ.

ಕಡಿಮೆ ಆದಾಯವಿರುವ ಕುಟುಂಬದಿಂದ ಬಂದರು ಇವರಲ್ಲಿ ಶಸ್ತ್ರಾಸ್ತ್ರಗಳು, ಸುಧಾರಿತ ಸಿಡಯುವ ಸಾಧನಗಳು, ಸ್ಫೋಟಕಗಳ ನಿರ್ವಹಣೆ, ರೋಪವರ್ಕ್‌ ಮತ್ತು ಸಂವಹನೆ, ಕ್ಯಾಡ್‌ ಮತ್ತು ನ್ಯಾವಿಗೇಷನ್‌, ಪ್ರಾಥಮಿಕ ಆರೋಗ್ಯ ಚಿಕಿತ್ಸೆ ಮತ್ತು ಪಿಐಎನ್‌ನಂತಹ ಇತರ ವಿಶೇಷ ಭಯೋತ್ಪಾದನಾ ನಿಗ್ರಹ ಕೌಶಲ್ಯಗಳನ್ನು ಕಲಿತು ಕಮಾಂಡೋ ಆಗಲು ಸಾಕಷ್ಟು ಧೈರ್ಯವಿರುವ ಯುವತಿಯರನ್ನು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾದ ಭಾಸ್ಕರ್‌ ರಾವ್‌ ಶ್ಲಾಘಿಸಿದ್ದಾರೆ.


ದಿ ಲಾಜಿಕಲ್‌ ಇಂಡಿಯನ್‌ ಪ್ರಕಾರ ಭಯೋತ್ಪಾದನಾ ನಿಗ್ರಹ ಪಡೆಯು ಬೆಂಗಳೂರಿನಲ್ಲೆ ಇರುತ್ತದೆ ಮತ್ತು ನಗರದ ಯಾವುದೇ ಭಾಗವನ್ನು ಕೇವಲ 30 ನಿಮಿಷದಲ್ಲಿ ತಲುಪುತ್ತದೆ. ಸೂಕ್ಷ್ಮ ಪ್ರದೇಶಗಳು, ಕರಾವಳಿ ಭಾಗಗಳು ಸೇರಿದಂತೆ ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿರುವ ನಗರ ಪ್ರದೇಶಗಳಲ್ಲಿ ಕಮಾಂಡೋಗಳನ್ನು ನಿಯೋಜಿಸಲಾಗುತ್ತದೆ. ಆದರೆ ಕೆಲವರಿಗೆ ಈ ತರಬೇತಿ ಸುಲಭವಾಗಿದ್ದರೆ ಕೆಲವರಿಗೆ ಸವಾಲಾಗಿದೆ.


ಎರಡು ತಿಂಗಳ ಹಿಂದೆ ಪುರುಷರ ಜತೆಗೆ ಶುರುವಾದ ತರಬೇತಿಯಲ್ಲಿದ್ದ ಇಬ್ಬರು ಮಹಿಳೆಯರಲ್ಲಿ ನಾನು ಒಬ್ಬಳು. ತುರ್ತು ಸಂದರ್ಭದಲ್ಲಿ ನೀವು ಗಂಡೊ ಹೆಣ್ಣೊ ಅನ್ನುವ ಪ್ರಶ್ನೆ ಬರುವುದಿಲ್ಲ.


“ಇದೆಲ್ಲವನ್ನು ತಡೆದುಕೊಳ್ಳಲು ನಿಮಗೆ ಧೈರ್ಯ, ಗಮನ ಮತ್ತು ಶಕ್ತಿ ಬೇಕು. ತರಬೇತಿಗೆ ಬರುವ ಮಹಿಳೆಯರನ್ನು ನಾವು ಹುರಿದುಂಬಿಸುತ್ತೇವೆ,” ಎನ್ನುತ್ತಾರೆ 26 ವರ್ಷದ ಕಾನ್ಸ್ಟೇಬಲ್‌ ಉಮಾಶ್ರೀ.


ತರಬೇತಿ ಪಡೆಯುತ್ತಿರುವ ರಿಜ್ವಾನಾ ಅವರ ಪೋಷಕರು ಕಲ್ಪಬುರ್ಗಿಯಲ್ಲಿ ಕೃಷಿಕರು. ಪೊಲೀಸ್‌ ಸಮವಸ್ತ್ರದ ಮೇಲಿರುವ ನಕ್ಷತ್ರಗಳಿಗೆ ಮನಸೋತು ತಾನು ಪೊಲೀಸ್‌ ಆಗಬೇಕೆಂಬ ಕನಸು ಕಂಡವರು ಇವರು. “ನಾನಿಲ್ಲೆ ಏನನ್ನಾದರೂ ಸಾಧಿಸುತ್ತೇನೆ ಎಂದು ನನಗೆ ಗೊತ್ತು. ತರಬೇತಿಯಲ್ಲಿ ಮುಂದುವರೆಯುತ್ತೇನೆ,” ಎನ್ನುವುದು ಅವರ ಮಾತು.