ಯೋಗದಿಂದ ರೋಗ ನಿರೋಧಕ ಶಕ್ತಿ..!
ಟೀಮ್ ವೈ.ಎಸ್.ಕನ್ನಡ
ಭಾರತಕ್ಕೂ ಯೋಗಕ್ಕೂ ಬಿಡಲಾರದ ನಂಟು. ಯೋಗ ಮಾಡುವುದರಿಂದ ದೇಹ ಆರೋಗ್ಯವಾಗಿರುವುದಲ್ಲದೇ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿ ಯೋಗಕ್ಕಿದೆ. ಮಾನಸಿಕ ಚೈತನ್ಯಕ್ಕೂ ಯೋಗವೇ ಮದ್ದು. ಇಂತಹ ಯೋಗವನ್ನು ಪ್ರಚುರ ಪಡಿಸುವ ಉದ್ದೇಶದಿಂದ ಜೂನ್ 21ಕ್ಕೆ ವಿಶ್ವ ಯೋಗದಿನ ಆಚರಿಸಲಾಗುತ್ತದೆ. ಕಾಯಿಲೆ ಹತ್ತಿರ ಸುಳಿಯದಂತೆ ಚೈತನ್ಯ ತುಂಬುವ, ಮನಸ್ಸು ಸದೃಢಗೊಳಿಸಬಲ್ಲ ಶಕ್ತಿ ಯೋಗಕ್ಕಿದೆ. ಯೋಗದ ಪರಿಣಾಮ ಖಚಿತ. ಯೋಗದಿಂದ ಸಾಧನೆ ಆಗಬೇಕಾದರೆ ಅದು ಸ್ವಲ್ಪ ತಡವಾಗುತ್ತದೆ. ಹಾಗಾಗಿ ಯೋಗ ಮಾಡುವವರಿಗೆ ತಾಳ್ಮೆ ಬೇಕಾಗುತ್ತದೆ.
ಜಿಮ್ನಲ್ಲಿ ದೈಹಿಕ ಕಸರತ್ತು ನಡಿಸಿದರೂ ಫಿಟ್ ಆಗಬಹುದು. ಆದರೆ ಯೋಗದಿಂದ ಆಗುವ ಉಪಯೋಗ ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ಹೀಗಾಗಿ ಯೋಗ ಮಾಡಿ ಆರೋಗ್ಯ ಪಡೆಯಿರಿ ಎಂದು ದೊಡ್ಡವರು ಹೇಳುತ್ತಾರೆ ಹೇಳುತ್ತಾರೆ.
ಸಾಮಾನ್ಯವಾಗಿ ಮನುಷ್ಯನಿಗೆ ಸಮಯದ ಕೊರತೆ ಕಾಡುತ್ತದೆ. ಹೀಗಾಗಿ ಯೋಗ ಜಿಮ್ ಮಾಡಲು ಸಮಯವೇ ಸಿಗುವುದಿಲ್ಲ. ಕಡಿಮೆ ಸಮಯದಲ್ಲಿ ಯೋಗ ಮಾಡಿ ಅದರಿಂದ ಹೆಚ್ಚಿನ ರಿಸಲ್ಟ್ ಬರಬೇಕು ಎನ್ನುತ್ತಾರೆ. ಆದರೆ ಅದು ಸಾಧ್ಯವಿಲ್ಲ. ಕೆಲ ಆಸನಗಳನ್ನಷ್ಟೇ ಅಭ್ಯಾಸ ಮಾಡಿ, ನಾನೂ ಯೋಗ ಮಾಡ್ತೇನೆ ಎಂದು ಸಾಷಕ್ಟು ಮಂದಿ ಹೇಳುತ್ತಾರೆ. ಆದೆ ಯೋಗದಲ್ಲಿ ಸಾಕಷ್ಟು ವಿಭಾಗಗಳಿವೆ. ಅವುಗಳಲ್ಲಿ ಕರ್ಮಯೋಗ (ಅಷ್ಟಾಂಗ ಯೋಗ), ಕ್ರಿಯಾಯೋಗ (ಹಠ ಯೋಗ), ಧ್ಯಾನ ಯೋಗ, ಭಕ್ತಿ ಯೋಗ.
ಅಷ್ಟಾಂಗ ಎಂದರೆ ಎಂಟು ವಿಭಾಗ ಅಥವಾ ಸಾಧನೆಯ ಮೆಟ್ಟಿಲುಗಳು ಎಂದರ್ಥ. ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ. ಸಮಾಧಿ ಸ್ಥಿತಿಯಲ್ಲಿ ಧ್ಯಾನಸ್ಥ ಮನಸ್ಸಿನ ಮೂಲಕ ಆತ್ಮ ಚೈತನ್ಯವು ದೇಹವನ್ನು ತೊರೆದು ಅನಂತಾತೀತದೆಡೆಗೆ ಸಾಗುವ ಸ್ಥಿತಿ ಮುಟ್ಟಲು ಸಾಧ್ಯವಿದೆ. ಈ ಸ್ಥಿತಿ ಮುಟ್ಟುವುದು ಯೋಗದ ಮುಖ್ಯ ಉದ್ದೇಶ.
ಹತ್ತಾರು ಬಗೆಯ ಯೋಗ
"ಇಲ್ಲೇ ಡ್ರಾ, ಈಗಲೇ ಬಹುಮಾನ" ಎನ್ನುವಂತೆ ಎಲ್ಲದಕ್ಕೂ ತಕ್ಷಣಕ್ಕೆ ಪ್ರತಿಫಲ ನಿರೀಕ್ಷೆ ಇಂದಿನ ಯುವಜನರಲ್ಲಿದೆ. ಇದರ ಬೆನ್ನುಬಿದ್ದಿರುವ ಯುವ ಜನರನ್ನು ಹಾಗೂ ವಿದೇಶಿಯರನ್ನು ಯೋಗದತ್ತ ಸೆಳೆಯುವ ನಿಟ್ಟಿನಲ್ಲಿ ಹಲವು ಬಗೆಯ ಯೋಗಾಸನ ವಿಧಾನಗಳು ಟಿಸಿಲೊಡೆಯುತ್ತಿವೆ. ಪರಂಪರಾಗತವಾಗಿ ಜ್ಞಾನ ಯೋಗ, ಭಕ್ತಿಯೋಗ, ಕರ್ಮಯೋಗ ಹಾಗೂ ರಾಜಯೋಗಗಳು ಆಚರಣೆಯಲ್ಲಿವೆ. ಜ್ಞಾನ, ಭಕ್ತಿ, ಕರ್ಮ ಈ ಹೆಸರುಗಳೇ ಅವುಗಳ ಅರ್ಥವನ್ನು ಸೂಚಿಸಿವೆ. ಪತಂಜಲಿ ಮುನಿ ಸೂಚಿಸಿರುವ ಅಷ್ಟಾಂಗ ಯೋಗದ ಆಚರಣೆಯೇ ರಾಜಯೋಗ.
ಇದನ್ನು ಓದಿ: ಉತ್ತರ ಕರ್ನಾಟಕದ ಸವಿರುಚಿ ಬಯಸುವವರಿಗೆ ಸ್ವರ್ಗ ಹೊಟೇಲ್ ನಳಪಾಕ..
ಇದರ ಜೊತೆಗೆ "ಡೈನಾಮಿಕ್" ಯೋಗ, "ಪವರ್" ಯೋಗ, "ಮ್ಯೂಸಿಕ್" ಯೋಗ, "ಆರ್ಟಿಸ್ಟಿಕ್" ಯೋಗ, "ಮೈಂಡ್ ಬ್ಲೋ" ಯೋಗ, "ಪ್ರಾಣಿಕ್" ಯೋಗ, "ನೃತ್ಯ" ಯೋಗ, "ಬ್ರೈನ್" ಯೋಗ -ಹೀಗೆ, ಹಲವು ಬಗೆಯ ಯೋಗಗಳು ಚಾಲ್ತಿಯಲ್ಲಿವೆ. ಇವುಗಳ ಉದ್ದೇಶ ಆರೋಗ್ಯ ಕಾಳಜಿ. ಆದರೆ, ಯೋಗದ ಹೆಸರಿನಲ್ಲಿ ಬರೀ ಆಸನಗಳ ಅಭ್ಯಾಸವನ್ನು ವೇಗವಾಗಿ ಹಾಗೂ ಶ್ರಮದಿಂದ ಕೂಡಿರುವಂತೆ ಮಾಡಿಸುವ ದೈಹಿಕ ಕಸರತ್ತು ಹೊಸ ವಿಧಾನದಲ್ಲಿ ಎದ್ದು ಕಾಣುತ್ತದೆ.
ಬೆಂಗಳೂರಿನ 200 ಸ್ಥಳಗಳಲ್ಲಿ ಯೋಗ
ವಿಶ್ವ ಯೋಗದಿನದ ಅಂಗವಾಗಿ ವಿವಿಧ ಯೋಗ ಶಿಕ್ಷಣ ಸಂಸ್ಥೆಗಳು, ಯೋಗಾಸಕ್ತರು ಒಗ್ಗೂಡಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಒಕ್ಕೂಟ ರಚಿಸಿಕೊಂಡುಡಿವೆ. ಒಕ್ಕೂಟವು ನಗರದ 200 ಸ್ಥಳದಲ್ಲಿ ಏಕಕಾಲಕ್ಕೆ ಯೋಗಾಭ್ಯಾಸ ಕಾರ್ಯಕ್ರಮ ಆಯೋಜಿಸಿವೆ.
ಬೆಂಗಳೂರಿನಲ್ಲಿ 1 ಸಾವಿರಕ್ಕೂ ಹೆಚ್ಚು ಯೋಗ ಕೇಂದ್ರಗಳು
ನಗರದಲ್ಲಿ ಯೋಗ ಕೋರ್ಸ್ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಯೋಗ ಕಲಿಕಾ ಕೇಂದ್ರಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿವೆ. ಇದರಲ್ಲಿ ಬಹುಮುಖ್ಯವಾಗಿ ಆರ್ಟ್ ಆಫ್ ಲಿವಿಂಗ್, ಪತಂಜಲಿ ಯೋಗ ಕೇಂದ್ರ, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ, ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಸೇರಿದಂತೆ ಹಲವು ಸಂಸ್ಥೆಗಳ ಯೋಗ ಕೇಂದ್ರಗಳು ಉಚಿತವಾಗಿ ಯೋಗ ತರಗತಿಗಳನ್ನು ನಡೆಸುತ್ತಿವೆ.
ಕೆಲ ಯೋಗ ಶಿಕ್ಷಕರ ಪ್ರಕಾರ ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡಿದರೆ ದಿನದ 23 ಗಂಟೆಯನ್ನು ಹೇಗೆ ನಿರ್ವಹಿಸಬೇಕು ಎಂಬ ಶಕ್ತಿ ಬರುತ್ತದೆ. ಹಾಗಾಗಿ ಪ್ರತಿಯೊಬ್ಬರು ಯೋಗವನ್ನು ತಮ್ಮ ದಿನನಿತ್ಯದ ಕೆಲಸವನ್ನಾಗಿ ಮಾಡಿಕೊಂಡರೆ ಅವರಿಗೆ ಆರೋಗ್ಯ ಮನಸ್ಸಿನ ಶಾಂತಿಯೂ ದೊರೆಯುತ್ತದೆ.
1. ಕೊಳಗೇರಿ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಜನಾಗ್ರಹ ಸಂಸ್ಥೆ
2. ಅಂದು 150 ರೂಪಾಯಿ ಸಂಬಳ, ಇಂದು 150 ಕೋಟಿ ರೂಪಾಯಿ ವಹಿವಾಟು ನಡೆಸುವ ಚಾಣಕ್ಯ..!