Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಬೆಂಗಳೂರನ್ನು ಕೈ ಬಿಟ್ಟು ಉದ್ಯಮ ಆರಂಭಿಸಿ- ಸ್ಟಾರ್ಟ್​ಅಪ್​ ಲೋಕದಲ್ಲಿ ಯಶಸ್ಸು ಪಡೆಯಿರಿ

ಟೀಮ್​ ವೈ.ಎಸ್​. ಕನ್ನಡ

ಬೆಂಗಳೂರನ್ನು ಕೈ ಬಿಟ್ಟು ಉದ್ಯಮ ಆರಂಭಿಸಿ- ಸ್ಟಾರ್ಟ್​ಅಪ್​ ಲೋಕದಲ್ಲಿ ಯಶಸ್ಸು ಪಡೆಯಿರಿ

Wednesday August 10, 2016 , 3 min Read

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗಾಗಲೇ ನೂರಾರು ಸ್ಟಾರ್ಟ್​ಅಪ್​ಗಳು ಹುಟ್ಟಿ, ಅವುಗಳಲ್ಲಿ ಸಾಕಷ್ಟು ಯಶಸ್ಸನ್ನು ಸಹ ಕಂಡಿವೆ. ಬೆಂಗಳೂರಿನಲ್ಲಿರುವ ಸ್ಟಾರ್ಟ್​ಅಪ್​ಗಳಿಗೆ ಸಾಕಷ್ಟು ಬಂಡವಾಳವೂ ಹರಿದು ಬಂದಿದೆ. ಈ ಎಲ್ಲಾ ಕಾರಣಗಳಿಂದಾಗಿ ಬೆಂಗಳೂರು ಸ್ಟಾರ್ಟ್​ಅಪ್​ಗಳ ರಾಜಧಾನಿಯಾಗಿ ಪರಿಣಮಿಸಿದೆ. ಆದರೆ ಈಗ ಬೆಂಗಳೂರಿನ ಹೊರಗೆ ಅಂದರೆ ರಾಜ್ಯದ ಇತರೆ ನಗರಗಳಲ್ಲಿಯೂ ಸ್ಟಾರ್ಟ್​ಅಪ್​ ಆರಂಭವಾಗಿ ಬಂಡವಾಳವನ್ನು ಆಕರ್ಷಿಸುತ್ತಿವೆ.

image


ಇಲ್ಲಿ ತನಕ ಅಭಿವೃದ್ಧಿ ಅಂದ್ರೆ ಬೆಂಗಳೂರು ಎಂಬಂತಾಗಿತ್ತು. ಯಾವುದಾದರೂ ವಾಣಿಜ್ಯ ಪ್ರಾಜೆಕ್ಟ್​ಗಳ ಆರಂಭದ ಬಗ್ಗೆ ಯೋಚನೆ ಮಾಡಿದ್ರೂ ಬೆಂಗಳೂರೇ ಸೆಂಟರ್​ ಆಗ್ತಾ ಇತ್ತು. ಆದ್ರೆ ಈಗ ಕಾಲ ಬದಲಾಗುತ್ತಿದೆ. ಬೆಂಗಳೂರನ್ನು ಹೊರಗಿಟ್ಟು ಉದ್ಯಮ ಆರಂಭಿಸುವ ಚಿಂತನೆಗಳು ಹೆಚ್ಚಾಗುತ್ತಿದೆ.​ ಬೆಂಗಳೂರಿನ ಹೊರಗೆ ಅಂದರೆ ಅಂದರೆ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಉಡುಪಿ ಮತ್ತು ಮೈಸೂರಿನಲ್ಲಿ ಸ್ಟಾರ್ಟ್​ಅಪ್​ಗಳು ಪ್ರಾರಂಭವಾಗಿ ಹೊಸ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿವೆ.

image


ಬೆಂಗಳೂರು ಬಿಟ್ಟು ರಾಜ್ಯದ ಹಲವೆಡೆ ಸ್ಟಾರ್ಟ್​ಅಪ್​ಗಳು ವೇಗವಾಗಿ ಬೆಳೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿಗೆ 400 ಕಿಲೋಮೀಟರ್​ ದೂರದಲ್ಲಿರುವ ಕರಾವಳಿ ನಗರಿ ಉಡುಪಿಯಲ್ಲಿನ ರೋಬೊಸಾಫ್ಟ್ ಕಂಪನಿ. ರೋಬೋಸಾಫ್ಟ್​ ಮೊಬೈಲ್ ಆ್ಯಪ್ ಮತ್ತು ಗೇಮ್​ಗಳ ಡೆವಲಪರ್ ಕಂಪನಿ. ಇಂದು ಈ ಕಂಪನಿ 1.57 ಕೋಟಿ ಡಾಲರ್ ಬಂಡವಾಳವನ್ನು ಸೆಳೆದಿದೆ. ಉಡುಪಿಯ ಮೂಲ ನಿವಾಸಿಯಾಗಿದ್ದ ರೋಹಿತ್​ಭಟ್ ಮುಂಬೈನಲ್ಲಿ ತಮ್ಮ ಉದ್ಯಮವನ್ನು ವಿಸ್ತರಣೆ ಮಾಡಿದ್ದರು. ಆದರೆ ಅಲ್ಲಿಯ ಎಲ್ಲಾ ವ್ಯಾಪಾರ ವ್ಯವಹಾರಗಳು ಆನ್​ಲೈನ್ ಮೂಲಕ ನಡೆಯುತ್ತಿದ್ದ ಪರಿಣಾಮ ಅವರೆಂದೂ ಗ್ರಾಹಕರನ್ನು ನೋಡಿರಲಿಲ್ಲ. ಹಾಗಾಗಿ ಉದ್ಯಮ ಉಡುಪಿಗೆ ಶಿಫ್ಟ್ ಆದರೆ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಅರಿತ ಅವರು ತಮ್ಮ ಸ್ವಂತ ಸ್ಥಳಕ್ಕೆ ರೋಬೋ ಸ್ಟಾಫ್ ಕಂಪನಿಯನ್ನು ಸ್ಥಳಾಂತರ ಮಾಡಿದ್ದಾರೆ. ರೋಹಿತ್​ ಭಟ್​​ ಇಲ್ಲಿಗೆ ತಮ್ಮ ಉದ್ಯಮವನ್ನು ಸ್ಥಳಾಂತರಿಸಿದ ಪರಿಣಾಮ ಅವರಿಗೆ ಬ್ಯಾಂಕ್​ನ ಸಾಲ ಸೌಲಭ್ಯಗಳು ಸುಲಭವಾಗಿ ದೊರೆಯುವಂತಾಯಿತು.

image


ಇನ್ನು ಬೆಂಗಳೂರಿನಲ್ಲಿ ಸ್ವಲ್ಪ ಮಟ್ಟಿಗೆ ವಿಸ್ತರಣೆಗೊಂಡಿದ್ದ ವಾಯುವ್ಯ ಲ್ಯಾಪ್ಸ್ ಕಂಪನಿಯನ್ನು ಅದರ ಮಾಲೀಕರಾದ ಉಮಾ ಬೊಂಡಾಡ ಅವರು ಕೂಡ ಬೆಂಗಳೂರಿನಿಂದ ಸುಮಾರು 500 ಕಿಲೋಮೀಟರ್​ ದೂರದಲ್ಲಿರುವ ಬೆಳಗಾವಿಗೆ 2006ರಲ್ಲೇ ಸ್ಥಳಾಂತರ ಮಾಡಿದ್ದರು. ಆದ್ರೆ ಬೆಳಗಾವಿಯಲ್ಲಿನ ಮಹಾಮಳೆ ಅವರಿಗೆ ಸಾಕಷ್ಟು ತೊಂದರೆ ಉಂಟು ಮಾಡಿತ್ತು. ಬೆಳಗಾವಿಯಲ್ಲಿ ಉಮಾ ಅವರಿಗೆ ಕಚೇರಿಗಾಗಿ ಉತ್ತಮ ಸ್ಥಳ ಹುಡುಕುವುದು ಕೂಡ ಸಾಕಷ್ಟು ಕಷ್ಟವಾಗಿತ್ತು. ಆದರೆ ಅದಾಗಿ ಹತ್ತು ವರ್ಷಗಳೊಳಗಾಗಿ ಎಲ್ಲವೂ ಬದಲಾಗಿದೆ. ಎಂಬೆಡೆಡ್ ಸಾಫ್ಟ್​ವೇರ್ ಟೂಲ್​ಗಳನ್ನು ಪೂರೈಸುವ ಉಮಾ ಅವರ ವಾಯುವ್ಯ ಲ್ಯಾಬ್ ಯಶಸ್ಸು ಗಳಿಸಿದ್ದು, ಇಂಡಿಯನ್ ಏಂಜೆಲ್ ನೆಟ್​ವರ್ಕ್​ನಿಂದ ಇದು 2011ರಲ್ಲಿ ಸುಮಾರು ಹತ್ತು ಲಕ್ಷ ಡಾಲರ್ ಬಂಡವಾಳವನ್ನು ಆಕರ್ಷಿಸಿದೆ.

image


ಧರಿಸಬಹುದಾದ ಸಾಧನಗಳ ರೂಪಿಸುವ ಸೆನ್ಸ್​ಜಿಜ್ ಸ್ಟಾರ್ಟಪ್​​ ಸಹ ಸಂಸ್ಥಾಪಕ ಅಭಿಷೇಕ್ ಲಡ್ಡೆ , ತಮ್ಮ ತವರು ಬೆಳಗಾವಿಯಲ್ಲೇ ಉದ್ಯಮವನ್ನು ವಿಸ್ತರಿಸಿದ್ದಾರೆ. ಇಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸ್ಟಾರ್ಟಪ್ ತನ್ನ ಉತ್ಪನ್ನಗಳಲ್ಲಿ ಶೇ.80ರಷ್ಟನ್ನು ಅಮೆರಿಕ ಮತ್ತು ಜಪಾನ್​ಗೆ ರಫ್ತು ಮಾಡುತ್ತದೆ.

ಇವರ ಉದ್ಯಮದಲ್ಲಿ ತಯಾರಾಗುವ ವಸ್ತುಗಳು ಬೇರೆ ಬೇರೆ ದೇಶಗಳಲ್ಲಿ ಮಾರಾಟ ಮಾಡುವ ಪರಿಣಾಮ ಅವರಿಗೆ ಬೆಳಗಾವಿ , ಬೆಂಗಳೂರು ಎರಡು ಒಂದೇ ಆಗಿರುತ್ತದೆ. 2013ರಲ್ಲಿ ಆರಂಭವಾದ ಸೆನ್ಸ್​ಜಿಜ್​, 5 ಲಕ್ಷ ಡಾಲರ್ ಹೂಡಿಕೆಯನ್ನು ಆಕರ್ಷಿಸಿದೆ. ಹುಬ್ಬಳ್ಳಿಯಲ್ಲಿನ ದೇಶಪಾಂಡೆ ಫೌಂಡೇಶನ್​ನ ಸ್ಯಾಂಡ್​ಬಾಕ್ಸ್​ ಸ್ಟಾರ್ಟಪ್, ಬೆಳಗಾವಿಯಲ್ಲೂ ತನ್ನ ಶಾಖೆಯನ್ನು ತೆರೆದಿದೆ.

image


ಕಾಸ್ಟ್ ಆಫ್​ ಲಿವಿಂಗ್ ಕಡಿಮೆ

ಸ್ಥಳೀಯವಾಗಿ ಸಿಗುವ ಸಾಕಷ್ಟು ಅನುಕೂಲತೆಗಳನ್ನು ಪಡೆಯಲು ಈ ರೀತಿ ಬೆಂಗಳೂರು ಬಿಟ್ಟು ಬೇರೆ ಬೇರೆ ನಗರಗಳಲ್ಲಿ ಸ್ಟಾರ್ಟ್​ಅಪ್​ ಸ್ಥಾಪನೆಗೊಳ್ಳುತ್ತಿವೆ. ಅಷ್ಟೇ ಅಲ್ಲದೆ ಬೆಂಗಳೂರಿಗೆ ಹೋಲಿಸಿದರೆ ಕಟ್ಟಡದ ಬಾಡಿಗೆ, ಸಾಗಣೆ ವೆಚ್ಚದ ದರ ಎಲ್ಲವೂ ಇತರ ನಗರಗಳಲ್ಲಿ ಕಡಿಮೆ ಇದೆ. ಆ ಕಾರಣದಿಂದ ಸಾಕಷ್ಟು ಮಂದಿ ಬೆಂಗಳೂರು ಬಿಟ್ಟು ಬೇರೆ ನಗರಗಳಲ್ಲಿ ಸ್ಟಾರ್ಟ್​ಅಪ್​ ಸ್ಥಾಪಿಸಲು ಹಾತೋರಿಯುತ್ತಿದ್ದಾರೆ. ಬ್ರಿಟಿಷರ ಕಂಟೋನ್ಮೆಂಟ್ ಆಗಿದ್ದ ಬೆಳಗಾವಿಯು ಮರಾಠರ ಪ್ರಮುಖ ಪ್ರಾಂತ್ಯ. ಈ ಐತಿಹಾಸಿಕ ನಗರಿಯು ರಾಜ್ಯದ ಎರಡನೇ ರಾಜಧಾನಿಯಂತಿದೆ. ಉತ್ತಮ ಮೂಲ ಸೌಕರ್ಯ, ತ್ವರಿತ ವೇಗದ ಇಂಟರ್ನೆಟ್, ಬೆಂಗಳೂರಿನಿಂದ ಬೆಳಗಾವಿಗೆ ಸೇರಿದಂತೆ ಇತರೆ ನಗರಗಳನ್ನು ಬೆಸೆಯುವ ವಿಮಾನ ನಿಲ್ದಾಣ ಮತ್ತಿತರ ಸೌಲಭ್ಯಗಳು ಐಟಿ ಮತ್ತು ಸ್ಟಾರ್ಟ್​ಅಪ್​ಗಳ ಅಭಿವೃದ್ಧಿಗೆ ಪೂರಕವಾಗಿವೆ.

ಬೆಳಗಾವಿಯಲ್ಲಿ ಎಂಟು ಎಂಜಿನಿಯರಿಂಗ್ ಕಾಲೇಜುಗಳಿವೆ. ಉಡುಪಿಯಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸೂರತ್ಕಲ್​ನಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದ್ದು, ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಳ್ಳಲು ಇಲ್ಲಿನ ಸ್ಟಾರ್ಟ್​ಅಪ್​ಗಳಿಗೆ ಅನುಕೂಲವಾಗುತ್ತದೆ. 

ಇದನ್ನು ಓದಿ:

1. ಶೂನ್ಯ ಹೂಡಿಕೆಯೊಂದಿಗೆ ಉದ್ಯಮ ಆರಂಭಿಸುವುದು ಹೇಗೆ?

2. ಇಂಟರ್​ನೆಟ್ ಇಲ್ಲದೆಯೂ ಮೊಬೈಲ್​ನಲ್ಲಿ ಹಣದ ವರ್ಗಾವಣೆ-ಇನ್ಫೋಸಿಸ್​ನ ಮಾಜಿ ಉದ್ಯೋಗಿಯ ವಿಭಿನ್ನ, ವಿನೂತನ ತಂತ್ರಜ್ಞಾನ

3. ಪ್ರಯಾಣಿಕರ ಮನ ಗೆಲ್ಲೋದಿಕ್ಕೆ ಹೊಸ ಪ್ಲಾನ್​- ಬಿಎಂಟಿಸಿಯಿಂದ ಹೊಸ ಟೆಕ್ನಾಲಜಿ