ಮಗುವಿನ ಕೈಯಲ್ಲಿ ವಾಚ್ ಇದ್ರೆ, ಟೆನ್ಶನ್ನ ಮಾತೇ ಇಲ್ಲ..!
ವಿಸ್ಮಯ
ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ್ತಿವೆ. ಆದ್ರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದೌರ್ಜನ್ಯಗಳಿಗೇನು ಕಡಿಮೆ ಇಲ್ಲ. ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗ್ತಿವೆ. ಮಕ್ಕಳ ರಕ್ಷಣೆ ಮಾಡೋದೆ ದೊಡ್ಡ ಸವಾಲಾಗಿದೆ. ಆದ್ರಲ್ಲೂ ಶಾಲಾ-ಕಾಲೇಜುಗಳಿಗೆ ತೆರಳೋ ಮಕ್ಕಳ ಮೇಲೆ ಪೋಷಕರು ಹದ್ದಿನ ಕಣ್ಣೇ ಇಟ್ಟರಬೇಕು. ಮಕ್ಕಳಿಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಹೆಚ್ಚು-ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿರುವುದರಿಂದ ಸಹಜವಾಗಿಯೇ ಪೋಷಕರು ನಿದ್ದೆ ಕಳೆದುಕೊಂಡಿದ್ದಾರೆ. ಶಾಲೆಗೆ ಮಕ್ಕಳನ್ನು ಕಳುಹಿಸಿದ ಅಮ್ಮಂದಿರಿಗಂತೂ ಸದಾ ಮಕ್ಕಳದ್ದೇ ಚಿಂತೆ. ಒಂದಕಡೆ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಅದ್ರೆ, ಮತ್ತೊಂದು ಕಡೆ ಮಕ್ಕಳು ಎಲ್ಲಿ ಅಡ್ಡದಾರಿ ಹಿಡಿಯುತ್ತಾರೋ ಎಂಬ ಆತಂಕ ಪೋಷಕರಲ್ಲಿ ಮನೆ ಮಾಡಿರುತ್ತೆ. ಹೀಗಾಗಿ ಇದಕ್ಕೆಲ್ಲ ಪರಿಹಾರ ಎಂಬಂತೆ ಆತ್ಮ ರಕ್ಷಕ ಕೈಗಡಿಯಾರವೊಂದನ್ನು ಅಭಿವೃದ್ಧಿ ಪಡಿಸಲಾಗಿದೆ. ಅದೇ ಸ್ಪ್ಯಾಚ್ ವಾಚ್.
ಮಕ್ಕಳ ರಕ್ಷಣೆ ಹಾಗೂ ಅವರ ಚಲನವಲನದ ಮೇಲೆ ನಿಗಾ ಇಡಲು ಅನುಕೂಲವಾಗುವಂತೆ ಕೈ ಗಡಿಯಾರ ಅಂದ್ರೆ ಸ್ಪ್ಯಾಚ್ ಎಂಬ ಹ್ಯಾಂಡ್ ವಾಚ್‍ವೊಂದನ್ನು ತರಲಾಗಿದೆ. ಟ್ರೈಕೂ ಟೆಕ್ ಸಂಸ್ಥೆ ಇಂತಹದೊಂದು ವಾಚ್ ಅನ್ನು ಅಭಿವೃದ್ಧಿ ಪಡಿಸಿದೆ. ಟ್ರೈಕೂ ಟೆಕ್ ಸಂಸ್ಥೆಯ ಸಹ ಸಂಸ್ಥಾಪಕಿ ಶ್ರುತಿ ಹೆಗಡೆ ಹೇಳುವಂತೆ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಅವರ ರಕ್ಷಣೆಗಾಗಿ ಸ್ಪ್ಯಾಚ್ ವಾಚ್ ಅನ್ನು ಆವಿಷ್ಕರಿಸಲಾಗಿದೆ ಅಂತಾರೆ.
ಈ ಕೈಗಡಿಯಾರದ ವಿಶೇಷತೆ ಏನು?
ಸ್ಪ್ಯಾಚ್ ವಾಚ್ ನೋಡಲು ಸಿಂಪಲ್ ಆಗಿದ್ರೂ, ಅದು ಹೆಚ್ಚು ಅದ್ಭುತ ಕೆಲಸವನ್ನು ಮಾಡುತ್ತೆ. ಟ್ರೈಕೂ ವಾಚ್‍ನಲ್ಲಿ ಸ್ಮಾರ್ಟ್ ಲೊಕೇಟರ್ ಮತ್ತು ಬಿಲ್ಟ್ ಇನ್‍ಫೋನ್ ಇರುತ್ತೆ. ಇದು ದಿನವಿಡೀ ಮಗು ಎಲ್ಲಿದೆ, ಏನೇನು ಮಾಡುತ್ತಿದೆ ಎಂಬುದುನ್ನು ಪೋಷಕರಿಗೆ ತಿಳಿಸುತ್ತೆ. ಬಿಲ್ವ್ ಇನ್ ಫೋನ್ ದುರ್ಬಳಕೆ ಆಗುವ ಚಿಂತೆ ಮಾಡಬೇಕಿಲ್ಲ. ಏಕೆಂದ್ರೆ ಇದು ಮೊಬೈಲ್ ಫೋನ್ ಅಲ್ಲ. ಹೀಗಾಗಿ ಇದನ್ನು ಮಗು ದುರುಪಯೋಗ ಮಾಡಿಕೊಳ್ಳಲು ಸಾಧ್ಯವಿಲ್ಲ.
ವಾಚ್‍ನಲ್ಲಿ ಜಿಪಿಎಸ್ ವ್ಯವಸ್ಥೆ ಇದ್ದು, ತಂದೆ, ತಾಯಿ ಹಾಗೂ ಕುಟುಂಬದವರು ಅಥವಾ ಶಾಲೆಯ ಒಬ್ಬ ಅಧ್ಯಾಪಕನಿಗೆ ಮಾತ್ರ ಮಗುವಿನ ಸಂಪರ್ಕ ಸಾಧಿಸಬಹುದಾದ ದ್ವಿಮುಖ ಸಂವಹನ ವ್ಯವಸ್ಥೆ ಕಲ್ಪಿಸಲಾಗಿದೆ. ಮೊಬೈಲ್‍ನ ಬ್ಲೂಟೂತ್ ಷೇರಿಂಗ್ ಮೂಲಕವೂ ಮಕ್ಕಳೊಂದಿಗೆ ಸದಾ ಸಂಪರ್ಕದಲ್ಲಿರಬಹುದು. ಮಗು ನಿಮ್ಮ ಮೊಬೈಲ್‍ನ ಬ್ಲೂಟೂತ್ ವ್ಯಾಪ್ತಿಯಿಂದ ಹೊರಗೆ ಹೋದ ತಕ್ಷಣ ಎಚ್ಚರಿಕೆ ಗಂಟೆ ಮೊಳಗುತ್ತದೆ. ವಾಯ್ಸ್ ಕಾಲ್ ಮತ್ತು ಜಿಪಿಎಸ್ ಲೊಕೇಷನ್ ಮೂಲಕ ಮಗು ಎಲ್ಲಿದೆ ಎಂಬ ಮಾಹಿತಿ ಮೊಬೈಲ್‍ಗೆ ರವಾನೆಯಾಗುತ್ತದೆ. ಮಗು ಸಂಕಷ್ಟದಲ್ಲಿದ್ದಾಗ ವಾಚ್‍ನಲ್ಲಿನ ಬಟನ್ ಒತ್ತುವ ಮೂಲಕ ಸಂದೇಶವನ್ನು ತಂದೆ, ತಾಯಿಗೆ ತಲುಪಿಸುತ್ತೆ . ಇದ್ರಿಂದಾಗಿ ಮಗುವನ್ನು ರಕ್ಷಿಸಬಹುದಾಗಿದೆ. ಈ ವಾಚ್‍ನಿಂದ ಮಕ್ಕಳ ದೈನಂದಿನ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ. ತರಗತಿಯಲ್ಲಿದ್ದಾಗ ಸ್ಕೂಲ್ ಮೋಡ್‍ನಲ್ಲಿಟ್ಟರೆ ಕಾಲ್ ರಿಸೀವ್ ಆಗುವುದಿಲ್ಲ.
ಈ ಸ್ಪ್ಯಾಚ್ ವಾಚ್ ಎಲ್ಲರಿಗೂ ಅನುಕೂಲ
ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ. ಹೊರಗೆ ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ, ಕಾಲ್ ಸೆಂಟರ್ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಅಷೇಅಲ್ಲದೇ ಹಿರಿಯ ನಾಗರಿಕರಿಗೂ ಮತ್ತು ಅವರ ರಕ್ಷಣೆಗೂ ಸ್ಪ್ಯಾಚ್ ವಾಚ್ ಬಹುಉಪಯೋಗಿ ಆಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಹಾಗೂ ವೆಬ್ ಆಧರಿತ ಟ್ರ್ಯಾಕಿಂಗ್ ಆ್ಯಪ್ ಬಳಸಬಹುದು. ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಜನರು ತಮ್ಮ ಬ್ಯೂಸಿ ಲೈಫ್‍ನಲ್ಲಿ ಮಕ್ಕಳನ್ನು ಪೋಪಿಸುವುದು ದೊಡ್ಡ ಸವಾಲು. ಮಕ್ಕಳನ್ನು ನೋಡಿಕೊಳ್ಳೋದು ಕಷ್ಟ ಇಂತಹ ಸಮಯದಲ್ಲಿ ಈ ವಾಚ್ ಸಹಾಯ ಮಾಡುತ್ತೆ. ಮಕ್ಕಳು ಎಲ್ಲಿರುತ್ತಾರೋ ಅವ್ರ ಬಗ್ಗೆ ಕ್ಷಣ ಕ್ಷಣ ಮಾಹಿತಿ ನೀಡುತ್ತೆ. ಕೇವಲ ಒಂದೇ ಬಟ್‍ನಲ್ಲಿ ಮೂರು ಮಂದಿಯನ್ನ ಏಕಕಾಲದಲ್ಲಿ ತಲುಪಲು ಸಾಧ್ಯ. ಇವೆಲ್ಲ ಸೌಲಭ್ಯ ಸಿಗೋದ್ರಿಂದ ಈ ವಾಚ್ ಆತ್ಮ ರಕ್ಷಕ ಅನ್ನೋದ್ರಲ್ಲಿ ಎರಡು ಮಾತಿಲ್ಲ.