ಮಹಿಳೆಯರ ಸ್ವಯಂ ಅನುಭೂತಿಯ ಪರಿಕಲ್ಪನೆ : ಇದು ಬ್ಯುಸಿನೆಸ್ನಲ್ಲೂ ಅಡಕವಾದ ಚಿಂತನೆ
ಟೀಮ್ ವೈ.ಎಸ್. ಕನ್ನಡ
ಆಕೆ ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಜಾಗದಲ್ಲಿದ್ದ ಶಾಪಿಂಗ್ ಸೆಂಟರ್ ಒಂದರಲ್ಲಿ ಎಲ್ಲಾ ಬಾಕ್ಸ್ ಗಳನ್ನ ಪರಿಶೀಲಿಸುತ್ತಿದ್ದಳು. ಸರಿಯಾದ ಬಾಕ್ಸ್ ಗಳಿಗಾಗಿ ಹುಡುಕಾಡುತ್ತಿದ್ದಳು. ಆಕೆ ಹೆಸರು ಅನು ಅನಂತ ಕೃಷ್ಣನ್. ಇದೀಗ ಅದ್ಭುತ ಸಾಧಕಿಯಾಗಿ ಗುರುತಿಸಿಕೊಂಡಿರುವ ಅನು ಒಂದು ಕಾಲದಲ್ಲಿ ಖಾಲಿತನ, ಒಂಟಿತನಗಳನ್ನ ಅನುಭವಿಸಿದ್ದಾಕೆ. ಆದ್ರೆ ಅವುಗಳಿಗೆ ತಕ್ಕ ಪರಿಹಾರಗಳನ್ನ ಕಂಡುಕೊಂಡಿರೋ ಅನು ಅನಂತ ಕೃಷ್ಣನ್ ಇದೀಗ ಅಪರೂಪದ ಉದ್ಯಮಿ. ಮಹಿಳೆಯರು ಕಂಫರ್ಟ್ ಫೀಲ್ ಮಾಡುವಂತ ಒಳ ಉಡುಪುಗಳನ್ನ ತಯಾರಿಸುವ ಅನು, ಇದೀಗ ಹೆಂಗಳೆಯರ ನೆಮ್ಮದಿ ಹಿಂದಿರುವ ಕಾರಣವಾಗಿ ಗುರುತಿಸಿಕೊಂಡಿರೋದು ವಿಶೇಷ. ಇನ್ನು ಒಂದು ಹುಡುಗಿಯ ಬದುಕಿನಲ್ಲಿ ಹಲವು ಮಹತ್ವದ ಹಂತಗಳು ಹಾಗೂ ಆಕೆಯ ದೈಹಿಕ ಅಂಶಗಳು ಸಾಕಷ್ಟು ಪ್ರಾಮುಖ್ಯತೆ ಪಡೆಯುತ್ತದೆ. ಅದ್ರಲ್ಲೂ ಹುಡುಗಿಯರಿಗೆ ಸ್ತನಗಳ ಬಗ್ಗೆ ಇನ್ನಿಲ್ಲದ ಎಚ್ಚರಿಕೆ, ಕಾಳಜಿ ಅತ್ಯಗತ್ಯ. ಆದ್ರೆ ಅದೆಷ್ಟೋ ಮಹಿಳೆಯರಿಗೆ ತಮ್ಮ ಸ್ತನಗಳ ಮಹತ್ವ ಹಾಗೂ ಅದರ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಗಮನವೇ ಇರೋದಿಲ್ಲ. ಅದ್ರಲ್ಲೂ ತಾವು ಬಳಸುವ ಬ್ರಾಗಳು ಯಾವ ಗುಣಮಟ್ಟ ಹಾಗೂ ಅಳತೆ ಹೊಂದಿರುತ್ತೆ ಅನ್ನುವುದರ ಪರಿಕಲ್ಪನೆ ಹಲವರಿಗಿಲ್ಲ. ಕೆಲವರಿಗೆ ಇದು ಮುಜುಗರ ತರಿಸುವ ವಿಷ್ಯವಾದ್ರೆ ಇನ್ನು ಕೆಲವರಿಗೆ ಕೇವಲ ನಿರ್ಲಕ್ಷ್ಯತನ. ಭಾರತದ ಮಹಿಳೆಯರಿಗಂತೂ ಇದ್ರ ಬಗ್ಗೆ ಇನ್ನಿಲ್ಲದ ನಿರ್ಲಕ್ಷ್ಯತನ. ಆದ್ರೆ ಅನು ಅನಂತಕೃಷ್ಣನ್ ತಮ್ಮ ಸವಾಲಿನ ಉದ್ಯಮನದ ಮೂಲಕ ಮಹಿಳೆಯರ ನಂಬಿಕೆಗೆ ಕಾರಣವಾಗಿದ್ದಾರೆ. ಅಲ್ಲದೆ ವೈಯುಕ್ತಿಕ ವಿಶ್ವಾಸ ಹೆಚ್ಚಿಸಿಕೊಳ್ಳಲು ಪ್ರೇರಣೆಯಾಗಿದ್ದಾರೆ.
ಇನ್ನು ಉದ್ಯಮದಲ್ಲಿ ತಮ್ಮನ್ನು ತಾವು ಆಳವಾಗಿ ತೊಡಗಿಸಿಕೊಂಡಿರುವ ಅನು ಅವರಿಗೆ ದಿನ ಗಂಟೆಗಳ ಪರಿವೇ ಇರೋದಿಲ್ಲ. ಭಾನುವಾರ ರಾತ್ರಿಯಿಂದ ಹಿಡಿದು ಮುಂದಿನ ಸೋಮವಾರದ ಬೆಳಗಿನ ಜಾವಿನವರೆಗೂ ಸಮಯ ಕಡೆ ಪ್ರಜ್ಞೆ ಇರೋದಿಲ್ಲ. ಆದ್ರೆ ಇದ್ರಲ್ಲಿ ತಮ್ಮ ಕೆಲಸದ ಸ್ವಾತಂತ್ರ್ಯ ಅನುಭವಿಸುವ ಅನು ಇದೀಗ ತಮ್ಮ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಅವರು ಸುಮಾರು 20 ವರ್ಷದ ಪ್ರಯದವರಾಗಿದ್ದಾಗ ಕೆಲವು ಸ್ವಂತ ಅನುಭವಗಳಾಗಿದ್ದವು. ಅಲ್ಲದೆ ಕೆಲವು ಹೊರಬರಲಾಗದ ಸಮಸ್ಯೆಗಳು ಕಾಡಿದ್ದವು. “ ನಾನು ನನ್ನನ್ನು ಮೊದಲು ಅರ್ಥಮಾಡಿಕೊಳ್ಳಬೇಕಿತ್ತು. ಅದನ್ನ ಮಾಡಿಕೊಂಡೆ. ನಾನು ಏನು ಮಾಡಬೇಕು ಅನ್ನೋದನ್ನ ಲೆಕ್ಕಾಚಾರ ಹಾಕಿದೆ. ಇದು ನನ್ನ ಮುಂದಿನ ಹಾದಿಯನ್ನ ಸುಗಮಗೊಳಿಸಿತು ” ಅಂತ ಅನು ತಮ್ಮ ಉದ್ಯಮದ ಆರಂಭದ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ. ಇವರು ತಮ್ಮ ಉದ್ಯಮದ ಬಗ್ಗೆ ಧೈರ್ಯವಾದ ನಿರ್ಧಾರ ಕೈಗೊಂಡು ಅದನ್ನ ತಮ್ಮ ಪತಿಯ ಬಳಿ ಪ್ರಸ್ತಾಪಿಸಲು ಬಹಳಷ್ಟು ಸಮಯ ತೆಗೆದುಕೊಂಡ್ರು. ಆದ್ರೆ ಇವರ ಕೆಲಸಕ್ಕೆ ಸಾಕಷ್ಟು ತಾಳ್ಮೆ ಹಾಗೂ ಅಧ್ಯಯನದ ಅಗತ್ಯತೆ ಇತ್ತು. ಹೀಗಾಗಿ ಮುಂಬೈ ಮೂಲದ ಕೆಲವು ಗೆಳೆಯರನ್ನ ಸಂಪರ್ಕಿಸಿದ ಅನು ಅನಂತಕೃಷ್ಣನ್ ನಂತ್ರ ತಮ್ಮ ಯೋಜನೆಯನ್ನ ಕಾರ್ಯರೂಪಕ್ಕೆ ತರಲು ಯೋಜಿಸಿದ್ರು. ಆದರೆ ಇವರ ಕುಟುಂಬ ಹಾಗೂ ಗಂಡ ವಿದೇಶದಲ್ಲಿ ನೆಲೆಸಿದ್ರೂ ಇವರು ಮಾತ್ರ ಮುಂಬೈನಲ್ಲೇ ನೆಲೆಸಬೇಕಾದ ಅನಿವಾರ್ಯತೆ ಇತ್ತು.
ಇಷ್ಟೆಲ್ಲಾ ಸಂಕಷ್ಟಗಳೆಲ್ಲಾ ಸಾಲು ಸಾಲಾಗಿದ್ರೂ, ಅನು ಮಾತ್ರ ಯಾವುದೇ ರೀತಿಯಲ್ಲೂ ಧೃತಿಗೆಡಲಿಲ್ಲ. ತಮ್ಮ ಸಹೋದರ ಸಂಬಂಧಿಗಳನ್ನ ತಮ್ಮ ಬ್ಯುಸಿನೆಸ್ ನತ್ತ ಸೆಳೆದುಕೊಂಡ್ರು. ಅಲ್ಲದೆ ತಮ್ಮ ವಾಸ ಹಾಗೂ ಉದ್ಯಮದ ಬಗ್ಗೆ ತಕ್ಕ ಯೋಜನೆಗಳನ್ನ ರೂಪಿಸಿದ ಅವರು ಮೂರು ವಾರಗಳನ್ನ ಮುಂಬೈನಲ್ಲಿ, ಮೂರು ವಾರಗಳನ್ನ ಹಾಂಗ್ ಕಾಂಗ್ ನಲ್ಲಿ ಕಳೆಯಲು ನಿರ್ಧರಿಸಿದರು. ಇಂತಹ ಒತ್ತಡ ಪರಿಸ್ಥಿತಿಯಲ್ಲೂ ಅವರಿಗೆ ತಮ್ಮ ವೈಯುಕ್ತಿಕ ಬದುಕಿನ ಮಹತ್ವವನ್ನ ಕಾಪಾಡಿಕೊಳ್ಳಲೇಬೇಕಾದ ಅನಿವಾರ್ಯತೆಯೂ ಇತ್ತು. “ ನನ್ನ ಪತಿ ಯಾವಾಗಲೂ ಹೇಳುತ್ತಿದ್ದರು, ಯಾವಾಗ ಇಬ್ಬರೂ ಜೊತೆಯಾಗಿ ಬೆಳೆಯಲು ಸಾಧ್ಯವಿಲ್ಲವೋ, ಇಬ್ಬರು ಜೊತೆಯಾಗಿ ಸಾಗಲು ಸಾಧ್ಯವಿಲ್ಲವೋ ಆಗ ಇಬ್ಬರು ಪರಸ್ಪರ ಸೂಕ್ತ ದಾರಿಯನ್ನ ಹುಡುಕಿಕೊಳ್ಳಬೇಕು. ಆಗ ಇಬ್ಬರೂ ನೆಮ್ಮದಿ ಮತ್ತು ಖುಷಿಯಿಂದ ಇರಲು ಸಾಧ್ಯ ” ಅಂತ ಅವರ ಪತಿ ಸದಾ ಹೇಳುತ್ತಿದ್ದುದ್ದನ್ನ ಅನು ನೆನಪಿಸಿಕೊಳ್ಳುತ್ತಾರೆ.
ಇನ್ನು ಎಲ್ಲಾ ಉದ್ಯಮ ಹಾಗೂ ಉದ್ಯಮಿಗಳ ಹಾಗೇ ಅನು ಅನಂತಕೃಷ್ಣನ್ ಒತ್ತಡ ಹಾಗೂ ಗೊಂದಲಗಳ ನಡುವೆಯೇ ತಮ್ಮ ಉದ್ಯಮವನ್ನ ಆರಂಭಿಸಿದ್ರು. ಇನ್ನು ಸಾಮಾನ್ಯವಾಗಿ ಮಹಿಳೆಯರು ತಮ್ಮ ಉಡುಪು ಹಾಗೂ ಒಳ ಉಡುಪುಗಳ ಆಯ್ಕೆಯಲ್ಲಿ ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ಯಾಕಂದ್ರೆ ಕೆಲವೊಂದು ಸೆಕ್ಸಿಯಾಗಿ ಕಂಡರೂ ಅದನ್ನ ಕೆಲವೊಂದು ಕಾರಣಗಳಿಂದ ಧರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವುಗಳ ಕಡೆಗೆ ಹೆಚ್ಚು ಗಮನ ಕೊಟ್ಟಿರುವ ಅನು ಸಂದರ್ಭಕ್ಕೆ ತಕ್ಕಂತೆ ಒಪ್ಪುವ ವಿನ್ಯಾಸಗಳ ಕಡೆ ಗಮನ ಕೊಟ್ಟಿದ್ದಾರೆ. “ ಬಟ್ಟೆಗಳ ಉತ್ಪಾದನಾ ಹಂತ ನನಗೆ ಹೆಚ್ಚು ಪಾಠ ಕಲಿಸಿತು. ಇಲ್ಲದೆ ವೈಯುಕ್ತಿಕ ಅನುಭವಗಳನ್ನ ಉದ್ಯಮದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಪಟ್ಟೆ. ಫಿಟ್ಟಿಂಗ್, ಫ್ಯಾಶನ್ ಹಾಗೂ ಗುಣಮಟ್ಟದ ಕಡೆ ಹೆಚ್ಚು ಗಮನ ಕೊಟ್ಟೆ. ಇದೇ ನನಗೆ ಯಶಸ್ಸು ತಂದುಕೊಟ್ಟಿತು. ” ಅಂತ ಅನು ಅನಂತ ಕೃಷ್ಣನ್ ತಮ್ಮ ಬ್ಯುಸಿನೆಸ್ ಬಗ್ಗೆ ವಿವರಿಸುತ್ತಾರೆ. ಹೀಗೆ ಮಹಿಳೆಯರು ಒಳಉಡುಪುಗಳ ಆಯ್ಕೆಯ ವಿಚಾರದಲ್ಲಿ ಹಿಂಜರಿಕೆತನ ಹೊಂದಿರುವ ಪರಿಸ್ಥಿತಿಯಲ್ಲಿ ಅನು ಅನಂತ ಕೃಷ್ಣನ್ ಅವರು ಅದನ್ನೇ ಉದ್ಯಮವನ್ನಾಗಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರೋದು ವಿಶೇಷ.
1.ಡಿಸ್ನಿಲ್ಯಾಂಡ್ ಮಾದರಿಯ ಪಾರ್ಕ್ಗೆ ಚಿಂತನೆ- ಬೆಂಗಳೂರಿನಲ್ಲಿ ತಲೆ ಎತ್ತಲಿದೆ ವಂಡರ್ಲ್ಯಾಂಡ್