ಆರಂಭಿಕ ಹಂತದ ಉದ್ದಿಮೆಗಳಿಗೆ ಹೊಸ ಚೈತನ್ಯ ನೀಡಲಿರುವ ಕೆ-ಸ್ಟಾರ್ಟ್.. !
ಟೀಮ್ ವೈ.ಎಸ್. ಕನ್ನಡ
ಬ್ಯುಸಿನೆಸ್ ನಲ್ಲಿ ಈಗೇನಿದ್ರೂ ಸ್ಟಾರ್ಟ್ ಅಪ್ ಗಳದ್ದೇ ದುನಿಯಾ. ವಿಭಿನ್ನ ಐಡಿಯಾ ಹಾಗೂ ದೃಷ್ಠಿಕೋನಗಳೊಂದಿಗೆ ಮಾರುಕಟ್ಟೆಗೆ ಅಡಿ ಇಡುತ್ತಿರುವ ಹೊಸ ಕಂಪನಿಗಳು ಹಾಗೂ ಸಣ್ಣ ಉದ್ದಿಮೆಗಳು ದೊಡ್ಡ ಮಟ್ಟದ ಹೂಡಿಕೆಯ ನಿರೀಕ್ಷೆಯಲ್ಲಿರುತ್ತವೆ. ಒಂದೊಮ್ಮೆ ಅವುಗಳಿಗೆ ಅಗತ್ಯವಿರೋ ಬಂಡವಾಳ ಸಿಕ್ಕಿದ್ದೇ ಆದ್ರೆ ಅವುಗಳು ದೊಡ್ಡ ಮಟ್ಟದಲ್ಲಿ ಬೆಳೆಯುತ್ತವೆ. ಇಂತಹ ಆರಂಭಿಕ ಹಂತದಲ್ಲಿರೋ ಕಂಪನಿಗಳಿಗೆ ಇತರೆ ಸಂಸ್ಥೆಗಳು ಮೂಲ ಸಂಪನ್ಮೂಲವನ್ನ ಒದಗಿಸುವುದರಲ್ಲಿ ಯಶಸ್ಸು ಕಾಣುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರೋದು ಕೇರಳ ಮೂಲದ ಕಲರಿ ಕ್ಯಾಪಿಟಲ್. ಭಾರತದ ಸಮೂಹ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಿರುವ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕಲರಿ ಕ್ಯಾಪಿಟಲ್ ಇದೀಗ ಕೆಸ್ಟಾರ್ಟ್ ಅನ್ನೋ ಕಾನ್ಸೆಪ್ಟನ್ನ ಶುರುಮಾಡಿದೆ. ಭಾರತದಲ್ಲಿ ಶುರುವಾಗಲಿರುವ ಸೆಕೆಂಡ್ ಜನರೇಶನ್ ನ ವಿಭಿನ್ನ ಐಡಿಯಾಗಳ ಉದ್ದಿಮೆಗಳಿಗೆ ನೆರವು ನೀಡೋದು ಇದರ ಮೂಲ ಉದ್ದೇಶ. ಈ ಮೂಲಕ ಸ್ಟಾರ್ಟ್ ಅಪ್ ಗಳಿಗೆ ಚೈತನ್ಯ ತುಂಬುವುದು ಹಾಗೂ ಮಾರುಕಟ್ಟೆಯಲ್ಲಿ ಅವುಗಳು ಇತರೆ ಪ್ರಬಲ ಕಂಪನಿಗಳ ವಿರುದ್ಧ ಪೈಪೋಟಿ ನಡೆಸಲು ಬೇಕಾದ ನೆರವು ನೀಡಲು ಕೆಸ್ಟಾರ್ಟ್ ಸಜ್ಜಾಗಿದೆ.
ಕಲರಿ ಕ್ಯಾಪಿಟಲ್ ನ ಮ್ಯಾನೇಜಿಂಗ್ ಡೈರೆಕ್ಟರ್ ವಾಣಿ ಕೊಲ 2006ರಲ್ಲಿ ಈ ಕಂಪನಿಯನ್ನ ಆರಂಭಿಸಿದ್ದು ಮೊದಲು ಟೆಕ್ನಾಲಜಿ ಮೂಲದ ಉದ್ದಮೆಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ರು. ಇದೀಗ ವಿವಿಧ ಕಂಪನಿಗಳಲ್ಲಿ ಕಲರಿ ಕ್ಯಾಪಿಟಲ್ ಹೊಂದಿರುವ ಒಟ್ಟು ಮೊತ್ತ $650 ಮಿಲಿಯನ್. ಹೂಡಿಕೆಯ ಜೊತೆಗೆ ಕಲರಿ ಸಂಸ್ಥೆ ಇತರೆ ಉದ್ಯಮಗಳೊಂದಿಗೆ ದೀರ್ಘಕಾಲದ ಪಾರ್ಟನರ್ ಶಿಪ್ ಗಳನ್ನೂ ಹೊಂದಿದೆ. ಅಲ್ಲದೆ 2015ರಲ್ಲಿ ಕಲರಿ ಹೂಡಿಕೆ ಮಾಡಿರೋ ಮೊತ್ತ $290. ಯುವರ್ ಸ್ಟೋರಿ ರಿಸರ್ಚ್ ಪ್ರಕಾರ 2015 ವರ್ಷದ ಆರಂಭದ ಹಂತದಲ್ಲೇ 14 ಡೀಲ್ ಗಳನ್ನ ಕಲರಿ ಮಾಡಿಕೊಂಡಿದೆ. ಇನ್ನು ಕಲರಿ ತಾನು ಹೂಡಿಕೆ ಮಾಡಿ ಆರ್ಥಿಕ ಬೆಂಬಲ ನೀಡಿರೋ ಕೆಲವು ಪ್ರಮುಖ ಕಂಪನಿಗಳ ಪಟ್ಟಿಯನ್ನೂ ನೀಡಿದೆ. ಇದೀಗ ಅವುಗಳು ಮಾರುಕಟ್ಟೆಯಲ್ಲಿ ದೈತ್ಯಾಕಾರವಾಗಿ ಬೆಳೆದಿರುವುದು ವಿಶೇಷ..
ಈ ಕಾಮರ್ಸ್ – ಮಿಂತ್ರಾ, ಸ್ನ್ಯಾಪ್ ಡೀಲ್, ಪವರ್2 ಎಸ್ ಎಂಇ, ಇಂಡಸ್ಟ್ರೀಬೈಯಿಂಗ್ ಹಾಗೂ ಅರ್ಬನ್ ಲಾಡ್ಡರ್
ಫಿನ್ಟೆಕ್ – ಇನ್ಸ್ಟಾಮೋಜೋ, ಆರ್ ಕೆಎಸ್ ವಿ ಹಾಗೂ ರುಬಿಕ್
ಡಿಜಿಟಲ್ ಮೀಡಿಯಾ – ಯುವರ್ ಸ್ಟೋರಿ, ಸ್ಕೂಪ್ ವೂಪ್, ಪೋಪ್ ಕ್ಸೋ
ಮೊಬೈಲ್ – ರೋಬೋಸಾಫ್ಟ್, ಹ್ಯಾಪ್ಟಿಕ್, ಆಪ್ಸ್ ಡೈಲಿ, ಮ್ಯಾಗ್ ಸ್ಟೆರ್ ಮತ್ತು ಸ್ವೈಪ್
ಇನ್ನು ಭಾರತದಲ್ಲಿ ಆರಂಭದಲ್ಲಿ ಕೆಲವೇ ಕೆಲವು ಸ್ಟಾರ್ಟ್ ಅಪ್ ಗಳು ಮುಂಚೂಣಿಯಲ್ಲಿ ಇದ್ದವು. ಅವುಗಳಲ್ಲಿ ಖೋಸ್ಲಾ ಲ್ಯಾಬ್ಸ್, ಕೈರೋಮ್ ಗ್ಲೋಬಲ್ ಆಕ್ಸೆಲರೇಟರ್, ಮೈಕ್ರೋಸಾಫ್ಟ್ ಅಕ್ಸಲರೇಟರ್ ಮತ್ತು ಗೂಗಲ್ ನ ಕೆಲವು ಪ್ರೋಗ್ರಾಂಗಳು ಮಾತ್ರ ಮುಂಚೂಣಿಯಲ್ಲಿದ್ದವು. ಅದ್ರಲ್ಲಿ ಬಹುಪಾಲು ಶಿಕ್ಷಣಕ್ಕೆ ಸಂಬಂಧಿಸಿದ್ದು ಅನ್ನೋದು ವಿಶೇಷ. ಇನ್ನು ಭಾರತ ಜಾಗತಿಕ ಮಟ್ಟದಲ್ಲಿ ಆರ್ಥಿಕ ನಾಯಕನಾಗುವತ್ತ ಹೆಜ್ಜೆ ಇಟ್ಟಿದ್ದು, ಮುಂದಿನ ತಲೆಮಾರಿನ ಸ್ಟಾರ್ಟ್ ಅಪ್ ಗಳು ಹೊಸ ಐಡಿಯಾಗಳೊಂದಿಗೆ ದೊಡ್ಡ ಮಟ್ಟದ ಮಾರುಕಟ್ಟೆಯೊಂದಿಗೆ ಕಾಣಿಸಿಕೊಳ್ಳಲಿದೆ ಅನ್ನೋದು ಕಲರಿ ಗ್ರೂಪ್ ನ ನಂಬಿಕೆ.
ಲಾಂಡ್ರಿಗೂ ಬಂತು ಲೇಟೆಸ್ಟ್ ಆ್ಯಪ್..!ಇಲ್ಲಿ ಬಟ್ಟೆ ಒಗೆದು, ಐರನ್ ಮಾಡಿ ಕೊಡ್ತಾರೆ...!
ಆದ್ರೆ ಹೊಸದಾಗಿ ಹುಟ್ಟಿಕೊಳ್ಳುವ ಕಂಪನಿಗಳು ಯಶಸ್ಸು ಹೊಂದಬೇಕಾದ್ರೆ ಸೂಕ್ತವಾಗುವ ಬ್ಯುಸಿನೆಸ್ ಕಮ್ಯುನಿಟಿಯನ್ನ ಗುರುತಿಸಿಕೊಳ್ಳುವುದು ಅನಿವಾರ್ಯ. ಜೊತೆಗೆ ಸಂಪನ್ಮೂಲಗಳಿಗೆ ತಕ್ಕಂತೆ ಪಾರ್ಟನರ್ ಶಿಪ್ ಹೊಂದುವುದೂ ಆರಂಭಿಕ ಹಂತದಲ್ಲಿ ಗಮನಿಸಬೇಕಾದ ಅತ್ಯಂತ ಪ್ರಮುಖವಾದ ಅಂಶ. ಈ ಅಂಶಗಳನ್ನ ಪತ್ತೆ ಹಚ್ಚಿ ಅವಕ್ಕೆ ಬೇಕಾಗಿರುವ ಬೆಂಬಲವನ್ನ ನೀಡುವುದು ಅತ್ಯಗತ್ಯ. ಹೀಗಾಗಿ ಕಲರಿಯ ಕೆಸ್ಟಾರ್ಟ್ ಕೆಲವು ಅಂಶಗಳಿಗೆ ಒತ್ತು ನೀಡಿ ಬ್ಯುಸಿನೆಸ್ ನಡೆಸುತ್ತಿದೆ.
ಸೂಕ್ತ ಬಂಡವಾಳ :
ಉದ್ದಿಮೆಗಳ ಪಯಣದಲ್ಲಿ ಬಂಡವಾಳವನ್ನ ಉತ್ಪತ್ತಿ ಮಾಡುವುದು ದೊಡ್ಡ ಸವಾಲು. ಹೀಗಾಗಿ ಉದ್ದಿಮೆಗಳ ಸಂಸ್ಥಾಪಕರು ಉತ್ತಮ ಆಯ್ಕೆಗಳನ್ನ ಗುರುತಿಸಿಕೊಂಡು ಮುಂದುವರಿಯುವುದು ಉತ್ತಮ. ಇನ್ನು ಕೆಸ್ಟಾರ್ಟ್ ಈಗಾಲೇ $500,000 ನಷ್ಟು ಮೂಲ ಬಂಡವಾಳವನ್ನ ಹೂಡಿಕೆ ಮಾಡಿದೆ.
ವೇಗವರ್ಧಕಗಳು :
ಕಂಪನಿಗಳ ಸಂಸ್ಥಾಪಕರು ಅನುಭವಕ್ಕೆ ತಕ್ಕಂತೆ ಸಲಹೆಗಳನ್ನ ಪಡೆಯಲು ಮುಂದಾಗುವುದು ಯಾವತ್ತಿಗೂ ಅಪಾಯಕಾರಿ. ಜೊತೆಗೆ ಒಂದೇ ರೀತಿಯ ಸಿದ್ಧ ಸೂತ್ರಗಳು ಹಾಗೂ ಓಪನ್ ನೆಟ್ ವರ್ಕ್ ಗಳಿಂದ ಸಲಹೆಗಳನ್ನ ಪಡೆಯುವುದೂ ಸೂಕ್ತವಲ್ಲ. ಹೀಗಾಗಿ ಕೆಸ್ಟಾರ್ಟ್ ಇದ್ರ ಬಗ್ಗೆ ಸಾಕಷ್ಟು ಮುನ್ನಚ್ಚರಿಕೆಗಳನ್ನ ವಹಿಸಿದೆ. ಕೆಸ್ಟಾರ್ಟ್ ಕ್ಯಾಟಲಿಸ್ಟ್ ಅನ್ನೋ ಕಾನ್ಸೆಪ್ಟ್ ಜೊತೆಗೆ ಸಹ ಹೂಡಿಕೆದಾರರನ್ನೂ ಕಂಪನಿ ಹೊಂದಿರುವುದು ವಿಶೇಷ.
ಪಾರ್ಟನರ್ಸ್ :
ಆರಂಭಿಕ ಹಂತದ ಉದ್ಯಮಿಗಳು ಸಂಪನ್ಮೂಲ ಹಾಗೂ ತಾಂತ್ರಿಕತೆಯ ಬೆಂಬಲವನ್ನ ನಿರೀಕ್ಷಿಸುತ್ತಾರೆ. ಹೀಗಾಗಿ ಇಲ್ಲೂ ಸಹವರ್ತಿಗಳ ಪಾತ್ರ ತುಂಬಾ ದೊಡ್ಡದು. ಹೀಗಾಗಿ ಕೆಸ್ಟಾರ್ಟ್ ಇಕೋ ಸಿಸ್ಟಮ್ ಬೆಂಬಲ ಪಡೆದಿದ್ದು ತನ್ನ ಇತರೆ ಅಂಗ ಸಂಸ್ಥೆಗಳ ಮೂಲಕ ತಾಂತ್ರಿಕತೆ ಹಾಗೂ ಇತರೆ ಸಲಹೆಗಳನ್ನ ಪಡೆಯುತ್ತಿದೆ.
ಕೆಸ್ಟಾರ್ಟ್ ಇನ್ಸ್ಟಿಟ್ಯೂಟ್ :
ದೊಡ್ಡ ಮಟ್ಟದ ಬೆಳವಣಿಗೆ ಹೊಂದಿರುವ ಸ್ಟಾರ್ಟ್ ಅಪ್ ಗಳು ಸತತವಾಗಿ ಕೌಶಲ್ಯ ವೃದ್ಧಿಯತ್ತ ಗಮನಕೊಡಲೇ ಬೇಕು. ಹೀಗಾಗಿ ಕೆಸ್ಟಾರ್ಟ್ ಸ್ವಂತ ಇನ್ಸ್ಟಿಟ್ಯೂಟ್ ಹೊಂದಿರುವುದು ವಿಶೇಷ. ಇಲ್ಲಿ ತಾಂತ್ರಿಕತೆ ಅಭಿವೃದ್ಧಿಗೆ ಹೆಚ್ಚು ಒತ್ತುಕೊಡಲಾಗಿದೆ. ಇನ್ನು ಯುನಿವರ್ಸಿಟಿ ಆಫ್ ಮೇರಿ ಲ್ಯಾಂಡ್ ನ ಪ್ರೊಫೇಸರ್ ಡಾ. ಅನಿಲ್ ಕೆ ಗುಪ್ತಾ ಕೆಸ್ಟಾರ್ಟ್ ಇನ್ಸ್ಟಿಟ್ಯೂಟ್ ನ ಇತರೆ ಕಾರ್ಯ ಚಟುವಟಿಕೆಗಳ ಬಗ್ಗೆ ಹೆಚ್ಚು ಗಮನವಹಿಸಿದ್ದಾರೆ.
ಹೀಗೆ ಆರಂಭಿಕ ಹಂತದ ಉದ್ದಿಮೆಗಳು ನಿರೀಕ್ಷೆ ಮಾಡುವ ಆರ್ಥಿಕ ಮತ್ತು ಅನುಭವದ ಸಲಹೆಗಳನ್ನ ನೀಡುವುದರಲ್ಲಿ ಕೆಸ್ಟಾರ್ಟ್ ಮುಂಚೂಣಿಯಲ್ಲಿದೆ. ಸದ್ಯ ಭಾರತದಲ್ಲೇ ಸ್ಟಾರ್ಟ್ ಅಪ್ ಗಳಿಗೆ ಜೀವನಾಡಿಯಂತಿರುವ ಕಲರಿ ಗ್ರೂಪ್ ಭವಿಷ್ಯದ ಮಾರುಕಟ್ಟೆಯಲ್ಲಿ ಅಧಿಪತ್ಯ ಹೊಂದಲು ವಿನೂತ ಯೋಜನೆಗಳನ್ನ ರೂಪಿಸಿದೆ.
ಲೇಖಕರು – ಹರ್ಷಿತ್ ಮಲ್ಯ
ಅನುವಾದ – ಬಿ ಆರ್ ಪಿ, ಉಜಿರೆ
ಅಂದು ಕಡು ಬಡವ...ಇಂದು ಎರಡು ಕಂಪನಿಗಳ ಮಾಲೀಕ..!