ಶ್ರದ್ಧೆ ಇದ್ದರೆ ಯಶಸ್ಸು ಖಂಡಿತ- ಶ್ರಮವಹಿಸಿದರೆ ಲಾಭ ಖಚಿತ..!
ಟೀಮ್ ವೈ.ಎಸ್. ಕನ್ನಡ
ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದರೆ ಯಾವುದೇ ಉದ್ಯಮದಲ್ಲೂ ಬೇಕಾದರೆ ಯಶಸ್ಸು ಗಳಿಸಬಹುದು. ಈಗಾಗಲೇ ಇಂತಹ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಈ ಹಿನ್ನೆಲೆಯಲ್ಲಿ ಭಾರತದ ಮೂಲೆ ಮೂಲೆಯಲ್ಲಿ ಹೊಸ ಹೊಸ ಉದ್ಯಮಗಳು ದಿನಕ್ಕೊಂದರಂತೆ ಅಸ್ಥಿತ್ವ ಪಡೆಯುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರು ಕೂಡ ಇದಕ್ಕೆ ಹೊರತಲ್ಲ. ಅದೇ ರೀತಿ ಆರಂಭವಾಗಿರುವುದೇ ಝಾಪರ್ ಡಾಟ್. ಕಾಮ್.(zopper.com)
ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸುರ್ಜೇಂದು ಕ್ಯುಲ ಮತ್ತು ನೀರಜ್ ಜೈನ್ ಎಂಬ ಸ್ನೇಹಿತರು ಕೆಲ ವರ್ಷಗಳ ಹಿಂದೆ ಈ ವೆಬ್ಸೈಟ್ನ್ನು ಲಾಂಚ್ ಮಾಡಿದರು. ಪ್ರತಿಯೊಬ್ಬ ಗ್ರಾಹಕನ ಮನೆ ಬಾಗಿಲಿಗೂ ಸೇವೆ ಒದಗಿಸುವುದು ಝಾಪರ್ ಡಾಟ್ ಕಾಮ್ನ ಮುಖ್ಯ ಕೆಲಸ. ಗ್ರಾಹಕರಿಗೆ ಉತ್ತಮ ಸೇವೆಯ ಜೊತೆಗೆ ಸಾಕಷ್ಟು ಜನರಿಗೆ ಇದು ಉದ್ಯೋಗವನ್ನು ನೀಡಿದೆ. ಇದರ ಉತ್ತಮ ಸೇವೆಯಿಂದಾಗಿ ಝಾಪರ್ ಡಾಟ್ ಕಾಮ್ ಈಗಾಗಲೇ ಲಕ್ಷಾಂತರ ರೂಪಾಯಿಯ ವಹಿವಾಟು ನಡೆಸುತ್ತಿದೆ.
ಇದನ್ನು ಓದಿ: ದುಬಾರಿ ಬಾಡಿಗೆಯ ಚಿಂತೆ ಬಿಟ್ಟುಬಿಡಿ- ವೋಲಾರ್ ಕಾರ್ ಬುಕ್ ಮಾಡಿ
ಸಾಲ್ವಿ ಟೆಕ್ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ ಎಂಬ ಕಂಪನಿಯನ್ನು ಸುರ್ಜೆಂದು ಕ್ಯೂಲ ಮತ್ತು ನೀರಜ್ ಜೈನ್ ಸ್ಥಾಪಿಸಿದರು. ಅದರಡಿ ಆರಂಭವಾಗಿದ್ದೆ ಈ ಝೂಪರ್ ಡಾಟ್ ಕಾಮ್. ಇದಕ್ಕೂ ಮೊದಲು ಇದು ರಿವ್ಯೆ ೨೪ ಎಂದು ಇತ್ತು. ಬೆಂಗಳೂರು, ಪುಣೆ, ಚೆನ್ನೈ ಕೋಲ್ಕತ್ತಾ, ದೆಹಲಿ, ಮುಂಬೈ, ಅಹಮದಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸಂಸ್ಥೆ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ.
ಮೊಬೈಲ್ ಆ್ಯಪ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಝೂಪರ್, ನೀವು ಮನೆಯಲ್ಲಿ ಕುಳಿತು ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಅಥವಾ ಅಗತ್ಯವಿರುವ ವಸ್ತುಗಳನ್ನು ಬುಕ್ ಮಾಡಿದರೆ, ಅದು ನಿಮ್ಮ ಮನೆಗೆ ತಲುಪುತ್ತದೆ. ಇದು ಇತರ ಇ- ಕಾಮರ್ಸ್ ಸೈಟ್ಗಳಂತೆ ಕಾರ್ಯ ನಿರ್ವಹಿಸುತ್ತದೆಯಾದರೂ ಬೇರೆಯವರಂತೆ ಇವರದ್ದೇ ಒಂದು ಮಳಿಗೆ ಇಲ್ಲ. ಟೈಗರ್ ಗ್ಲೋಬಲ್ ಸಹಯೋಗದೊಂದಿಗೆ ಲಾಜಸ್ಟಿಕ್ಸ್ ವೇರ್ ಹೌಸಿಂಗ್ ಮತ್ತು ಎಲೆಕ್ಟ್ರಾನಿಕ್ ಸೇವೆಗಳನ್ನು ಝೂಪರ್ ಡಾಟ್ ಕಾಮ್ ಮೂಲಕ ಮಾಡಲಾಗುತ್ತಿದೆ. ಝೂಪರ್ ಡಾಟ್ ಕಾಮ್ನಲ್ಲಿ ಗ್ರಾಹಕರು ಬುಕ್ ಮಾಡಿದ ವಸ್ತುಗಳನ್ನು ಅಂದಿನ ದಿನವೇ ಪೂರೈಸಲು ಪ್ರಯತ್ನಿಸಲಾಗುತ್ತದೆ. ಶೇ 58ರಷ್ಟು ವಸ್ತುಗಳು ಅಂದಿನ ದಿನವೇ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಆರಂಭದ ದಿನಗಳಲ್ಲಿ ಹೈಪರ್ ಲೋಕಲ್ ಮಾಡೆಲ್ನಿಂದ ಮಿಂಚಿದ್ದ ಫ್ಲಿಫ್ಕಾರ್ಟ್ ಆನ್ಲೈನ್ ಶಾಪಿಂಗ್ ವೆಬ್ಸೈಟ್ನಂತೆಯೇ ಝೂಪರ್ ಡಾಟ್ ಕಾಮ್ ಇ ಕಾಮರ್ಸ್ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ.
ಏರ್ ಕಂಡಿಷನರ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಸೇರಿದಂತೆ ಇನ್ನೂ ಅನೇಕ ಎಲೆಕ್ಟ್ರಾನಿಕ್ ವಸ್ತುಗಳನ್ನು ಬೇರೆ ಮಳಿಗೆಗಳಿಗಿಂತ ಅತೀ ಕಡಿಮೆ ಬೆಲೆಯಲ್ಲಿ ಈ ಝೂಪರ್ ಡಾಟ್ ಕಾಮ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಬೆಲೆ ಕಡಿಮೆ, ಆದರೆ ಗುಣಮಟ್ಟದಲ್ಲಿ ಮಾತ್ರ ಯಾವುದೇ ರಾಜಿ ಇಲ್ಲ. ಸದ್ಯ ಇಲ್ಲಿ ಎಲಕ್ಟ್ರಾನಿಕ್ ವಸ್ತುಗಳು, ವೇರ್ ಹೌಸಿಂಗ್ , ಲಾಜಿಸ್ಟಿಕ್ ವಸ್ತುಗಳು ಮಾತ್ರ ಲಭ್ಯ.
ಈಗಾಗಲೇ ಹದಿನೈದು ಸಾವಿರ ಸ್ಥಳೀಯ ವ್ಯಾಪಾರಸ್ಥರನ್ನು ಹೊಂದಿರುವ ಝೂಪರ್, ಗ್ರಾಹಕರಿಗೆ ಉತ್ತಮ ಸೌಲಭ್ಯ ನೀಡುತ್ತಿದೆ. ಗ್ರಾಹಕರು ವಸ್ತುಗಳನ್ನು ಬುಕ್ ಮಾಡಿದ 24 ಗಂಟೆಯೊಳಗೆ ಡೆಲಿವರಿ ಮಾಡಲು ಯತ್ನಿಸಲಾಗುತ್ತದೆ. ಅಂದಿನ ದಿನ ತಪ್ಪಿದಲ್ಲಿ ಎರಡನೇ ದಿನ ಖಂಡಿತವಾಗಿಯೂ ಗ್ರಾಹಕರಿಗೆ ತಲುಪುತ್ತದೆ. ಇದೇ ಕಾರಣಕ್ಕೆ ಸಾಕಷ್ಟು ಮಂದಿ ಝೂಪರ್ನ್ನು ನಂಬಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.
ಈ ರೀತಿ ಉತ್ತಮ ಸೇವೆ ನೀಡುವ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರುವ ಝೂಪರ್ ಡಾಟ್. ಕಾಮ್ ಈಗಾಗಲೇ ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ ಮತ್ತು ವಿಶ್ವ ಬ್ಯಾಂಕ್ ಮಾಹಿತಿ ಪ್ರಕಾರ 50 ಬಿಲಿಯನ್ ಡಾಲರ್ ಆದಾಯ ಗಳಿಸುತ್ತಿದೆ. 2020ರ ವೇಳೆಗೆ ಇದು 100 ಬಿಲಿಯನ್ ದಾಟುವ ಎಲ್ಲಾ ಲಕ್ಷಣಗಳು ಇದೆ. ಈ ನಿಟ್ಟಿನಲ್ಲಿ ಝೂಪರ್ಮ ಸಂಸ್ಥಾಪಕರು ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಶ್ರಮವಹಿಸಿ ಗ್ರಾಹಕರಿಗೆ ಉತ್ತಮ ವಸ್ತುಗಳನ್ನು ನೀಡಿದರೆ ಯಾವುದೇ ಉದ್ಯಮದಲ್ಲೂ ಬೇಕಾದರೆ ಯಶಸ್ಸು ಗಳಿಸಬಹುದು ಎಂಬುದಕ್ಕೆ ಝೂಪರ್ ಡಾಟ್ ಕಾಮ್ ಸಾಕ್ಷಿ.
1. ಟೆಕ್ಕಿ ಹೈನುಗಾರನಾದ ಯಶೋಗಾಥೆ..!
2. ಕಮಲ್ ಹಾಸನ್, ರಾಜಮೌಳಿಗೆ ಆಗದೇ ಇದ್ದಿದ್ದನ್ನು ಇವರು ಮಾಡಿದ್ರು: ಸಿನಿಮಾದ ಮುಂದಿನ ಭವಿಷ್ಯ ಇಂದೇ ತಿಳಿಯಿರಿ..!
3. "ಕಬಾಲಿ’’ಗೆ ಮೆಗಾ ಬ್ರಾಂಡಿಂಗ್: ಅಧಿಕೃತ ಪಾಲುದಾರನಾದ ಏರ್ ಏಷ್ಯಾ : ಚಿತ್ರದ ಪ್ರಮೋಷನ್ಗೆ ಸಖತ್ ಪ್ಲಾನ್