Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಲಿಂಗ ಪರಿವರ್ತನೆ ಮಾಡಿಸಿಕೊಂಡ ಅಂಜಲಿ ಆಮಿರ್ ಈಗ ಮಮ್ಮುಟ್ಟಿ ಚಿತ್ರಕ್ಕೆ ನಾಯಕಿ..!

ಟೀಮ್​ ವೈ.ಎಸ್​. ಕನ್ನಡ

ಲಿಂಗ ಪರಿವರ್ತನೆ ಮಾಡಿಸಿಕೊಂಡ ಅಂಜಲಿ ಆಮಿರ್ ಈಗ ಮಮ್ಮುಟ್ಟಿ ಚಿತ್ರಕ್ಕೆ ನಾಯಕಿ..!

Saturday January 21, 2017 , 2 min Read

ಭಾರತೀಯ ಸಮಾಜದಲ್ಲಿ ಲಿಂಗ ಭೇದ ಅನ್ನುವುದು ಇನ್ನೂ ಹೋಗಿಲ್ಲ. ಗಂಡು ಮತ್ತು ಹೆಣ್ಣಿನ ನಡುವೆಯೇ ಸಾಕಷ್ಟು ಭೇದ ಭಾವಗಳಿರುವಾಗ ಲಿಂಗ ಪರಿವರ್ತನೆ ಮಾಡಿಸಿಕೊಂಡವರ ಸ್ಥಿತಿಗತಿಯ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಆದ್ರೆ ಮಲೆಯಾಳಂ ಸಿನಿಮಾ ರಂಗದ ಸೂಪರ್ ಸ್ಟಾರ್ ಮಮ್ಮುಟ್ಟಿ ಈ ವಿಚಾರದಲ್ಲಿ ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ. ಮುಮ್ಮುಟ್ಟಿ ತನ್ನ ಮುಂದಿನ ಚಿತ್ರದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡ ಅಂಜಲಿ ಅಮೀರ್​ರನ್ನು ತನ್ನ ನಾಯಕಿಯನ್ನಾಗಿ ಮಾಡಿಕೊಂಡಿದ್ದಾರೆ. ಮಾಲಿವುಡ್​ನಲ್ಲಿ ಮಾತ್ರವಲ್ಲ ಭಾರತೀಯ ಸಿನೆಮಾ ರಂಗದಲ್ಲೇ ಇದು ಹೊಸ ಪ್ರಯತ್ನವಾಗಲಿದೆ.

image


ಅಂಜಲಿ ಅಮೀರ್ 21 ವರ್ಷ ವಯಸ್ಸಿನ ಮಾಡೆಲ್. ತಮಿಳುನಾಡಿನ ಕೊಯಂಬತ್ತೂರು ಮೂಲದ ಅಂಜಲಿ 2 ವರ್ಷದ ಹಿಂದೆ ಲಿಂಗ- ಪರಿವರ್ತನೆ ಮಾಡಿಸಿಕೊಂಡಿದ್ದರು. ಈಗ "ಪೆರ್ನಬು" ಅನ್ನುವ ಮಾಲಿವುಡ್ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಬಗ್ಗೆ ಸ್ವತಃ ಮಮ್ಮುಟ್ಟಿ ತನ್ನ ಫೇಸ್​ಬುಕ್ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.

2 ವರ್ಷದ ಹಿಂದೆ ಅಂಜಲಿ, ಲಿಂಗ ಪರಿವರ್ತನೆ ಅನ್ನುವ ಅಗ್ನಿ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿದ್ದರು. ಇದು ಆಕೆಯ ಬದುಕಿಗೆ ದೊಡ್ಡ ತಿರುವು ನೀಡಿತು. ಲೆಸ್ಬಿಯನ್, ಗೇ, ಬೈ ಸೆಕ್ಸುವಲ್ ಮತ್ತು ಟ್ರಾನ್ಸ್​ಜಂಡರ್ (LGBT)ಗಳ ಬಗ್ಗೆ ನಮ್ಮ ಸಮಾಜದಲ್ಲಿ ಇನ್ನೂ ಮಡಿವಂತಿಕೆ ಹೋಗಿಲ್ಲ. ಇಂತಹ ಸಮಯದಲ್ಲೇ 19 ವರ್ಷ ವಯಸ್ಸಿನವಳಾಗಿದ್ದ ಅಂಜಲಿ, ಬೆಂಗಳೂರಿನಲ್ಲಿ ಪದವಿ ಪಡೆಯುತ್ತಿರುವಾಗ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದರು. ಲಿಂಗ ಪರಿವರ್ತನೆಗೆ ಮುಂಚೆ ಅಂಜಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು.

ಇದನ್ನು ಓದಿ: ಒಣಕಸ-ಹಸಿಕಸ ಬೇರ್ಪಡಿಸಿ ಕೊಡದಿದ್ರೆ ಹುಷಾರ್..!ಹೊಸ ಗಾರ್ಬೇಜ್ ನೀತಿ ಜಾರಿಗೆ ತರಲಿದೆ ಬಿಬಿಎಂಪಿ

ಲಿಂಗ ಪರಿವರ್ತನೆಯ ಬಳಿಕ ಅಂಜಲಿ ತನ್ನ ಕನಸಿನಂತೆ ಮಾಡೆಲಿಂಗ್ ಲೋಕಕ್ಕೆ ಎಂಟ್ರಿಕೊಟ್ಟು ಮಿಂಚಿದ್ರು. ಈಗ ಮಮ್ಮುಟ್ಟಿಯ ಚಿತ್ರವೊಂದಕ್ಕೆ ನಾಯಕಿಯಾಗಿ ಸುದ್ದಿ ಮಾಡಿದ್ದಾರೆ. ಅವಕಾಶಕೊಟ್ಟ ಮಮ್ಮುಟ್ಟಿಗೆ ಅಂಜಿ ಧನ್ಯವಾದಗಳನ್ನು ಕೂಡ ಹೇಳಿದ್ದಾರೆ.

"ಪೆರ್ನಬು" ಸಿನಿಮಾವನ್ನು ಸೀನು ರಾಮಸಾಮಿ ನಿರ್ದೇಶಿಸಿದ್ದಾರೆ. ತಮಿಳು ಭಾಷೆಯಲ್ಲಿ ಈ ಸಿನಿಮಾ ಈ ವರ್ಷ ತೆರೆ ಕಾಣಲಿದೆ. ಮಮ್ಮುಟ್ಟಿ ಮಾಡಿರುವ ಸಾಹಸಕ್ಕೆ ಪ್ರೇಕ್ಷಕರು ಯಾವ ರೀತಿಯಲ್ಲಿ ಸ್ಪಂಧಿಸುತ್ತಾರೆ ಅನ್ನುವುದು ಕುತೂಹಲ ಕೆರಳಿಸಿದೆ.

ಅಂಜಲಿ ಅಮೀರ್​ಗಿಂತ ಮುನ್ನ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದ ಅಂಜಲಿ ಲಾಮಾ ಅನ್ನುವ ಮಾಡೆಲ್ ಲ್ಯಾಕ್ಮೆ ಫ್ಯಾಷನ್ ವೀಕ್​ನಲ್ಲಿ ರ್ಯಾಂಪ್​ ವಾಕ್ ಮಾಡಿ ದಾಖಲೆ ಬರೆದಿದ್ದಳು. ಈಗ ಅಂಜಲಿ ಅಮೀರ್ ಮತ್ತೊಂದು ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ. ಇಂತಹ ಸಾಹಸಗಳು ಲಿಂಗ ಪರಿವರ್ತನೆ ಮಾಡಿಸಿಕೊಂಡವರಿಗೆ ಹೆಚ್ಚು ಸ್ಪೂರ್ತಿ ತುಂಬಬಹುದು.

ಇದನ್ನು ಓದಿ:

1. ಶಿಕ್ಷಣ ಸಂಸ್ಥೆಗಳಿಗೆ ಸಾಲ ಸೌಲಭ್ಯ- "ವರ್ಥನ"ದಿಂದ ಬದಲಾವಣೆಯ ಗಾಳಿ 

2. ಸಿಗರೇಟ್ ತ್ಯಾಜ್ಯಕ್ಕೂ ಕೊಡ್ತಾರೆ ಹಣ : ವೇಸ್ಟ್ ರಿಸೈಕಲ್ ಮಾಡಿ ಉಳಿಸ್ತಿದ್ದಾರೆ ಪರಿಸರ

3. ಅಂದು ಒಂದು ಹೊತ್ತಿನ ಊಟಕ್ಕೂ ಪರದಾಡುವ ದುಸ್ಥಿತಿ- ಇಂದು 2500 ಕೋಟಿ ಉದ್ಯಮದ ಒಡೆಯ