100 ದಿನಗಳಲ್ಲಿ 100 ಡಿಜಿಟಲ್ ಗ್ರಾಮ- ಇದು ಐಸಿಐಸಿಐ ಬ್ಯಾಂಕ್ ಪಣ
ಟೀಮ್ ವೈ.ಎಸ್.ಕನ್ನಡ
ಡಿಜಿಟಲ್ ಇಂಡಿಯಾ, ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ತಾಂತ್ರಿಕತೆಯ ಜೊತೆಗೆ ಭಾರತದ ಪ್ರತಿಯೊಂದು ಹಳ್ಳಿಗಳನ್ನು ಬೆಳೆಸುವುದು ಇದರ ಮೂಲ ಉದ್ದೇಶ. ಈಗಾಗಲೇ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ಆದ್ರೆ ಬ್ಯಾಂಕಿಂಗ್ ವಲಯದ ದೊಡ್ಡ ಹೆಸರು ಐಸಿಐಸಿಐ ಬ್ಯಾಂಕ್ ಹೊಸ ಭರವಸೆ ನೀಡಿದೆ. ಕೇವಲ 100 ದಿನಗಳಲ್ಲಿ ಭಾರತದ 100 ಗ್ರಾಮಗಳನ್ನು ಡಿಜಿಟಲ್ ಗ್ರಾಮಗಳನ್ನಾಗಿ ಪರಿವರ್ತಿಸುವ ಗುರಿಯನ್ನಿಟ್ಟುಕೊಂಡಿದೆ. 60ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಐಸಿಐಸಿಐ ಬ್ಯಾಂಕ್ ಈಗಾಗಲೇ ಗುಜರಾತ್ನ ಸಬರ್ಕಾಂತಾ ಜಿಲ್ಲೆಯ ಅಕೊಡರಾ ಗ್ರಾಮವನ್ನು ಈಗಾಗಲೇ ಸಂಪೂರ್ಣವಾಗಿ ಡಿಜಿಟಲ್ ಗ್ರಾಮವನ್ನಾಗಿಸಿದೆ.
500 ಮತ್ತು 1000 ರೂಪಾಯಿ ನೋಟುಗಳ ನಿಷೇಧದಿಂದ ಡಿಜಿಟಲ್ ಗ್ರಾಮದ ಕಾನ್ಸೆಪ್ಟ್ಗೆ ಹೊಸ ತಿರುವು ಸಿಕ್ಕಿದೆ. ಐಸಿಐಸಿಐ ಬ್ಯಾಂಕ್ ಗ್ರಾಮದ ನಿವಾಸಿಗಳಿಗೆ ಡಿಜಿಟಲ್ ಚಾನೆಲ್ಗಳ ಮುಖಾಂತರ ವ್ಯವಹಾರ ಮಾಡುವುದನ್ನು ತಿಳಿಸಿಕೊಡಲಿದೆ. ಅಷ್ಟೇ ಅಲ್ಲಾ ಆಧಾರ್ ಕಾರ್ಡ್ ಆಧಾರಿತ ಇ-ಕೆವೈಸಿ ಮೂಲಕ ಖಾತೆಗಳನ್ನು ಕೂಡ ತೆರೆಯಲಿದೆ. ವಿವಿಧ ಕ್ಯಾಶ್ಲೆಸ್ ಪೇಮೆಂಟ್ಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿಕೊಡಲಿದೆ.
ಇದನ್ನು ಓದಿ: ಪೇಪರ್ ಮಾರುವ ಹುಡುಗಿಯ ಯಶೋಗಾಥೆ
ಐಸಿಐಸಿಐ ಫೌಂಡೇಷನ್ ಮೂಲಕ ಬ್ಯಾಂಕ್ ಈ ಯೋಜನೆಯನ್ನು ಕೈಗೊಂಡಿದೆ. ಸುಮಾರು 10,000ಕ್ಕೂ ಅಧಿಕ ಆರ್ಥಿಕ ಅಶಕ್ತರು, ಮಹಿಳೆರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಡಿಜಿಟಲ್ ಯೋಜನೆಯ ಮೂಲಕ ಸ್ವ ಉದ್ಯೋಗ ಅವಕಾಶವೂ ಹೆಚ್ಚಲಿದೆ.
“ ಭಾರತದಲ್ಲಿ ಅಭಿವೃದ್ಧಿಗಾಗಿ ಐಸಿಐಸಿಐ ಬ್ಯಾಂಕ್ ವಿಶೇಷ ಪ್ರಯತ್ನವನ್ನು ಮಾಡುತ್ತಿದೆ. ತಾಂತ್ರಿಕವಾಗಿ ಮುಂದುವರೆಯುವುದು ದೇಶವನ್ನು ಅಭಿವೃದ್ಧಿ ಪಥದತ್ತ ಬೇಗನೆ ಕೊಂಡೊಯ್ಯುತ್ತದೆ ಅನ್ನೋದು ನಮ್ಮ ನಂಬಿಕೆ. ಇದಕ್ಕೊಂದು ಉದಾಹರಣೆ ಭಾರತದ ಮೊದಲ ಡಿಜಿಟಲ್ ಗ್ರಾಮ ಅಕೋಡಾರ. ಅದನ್ನೇ ಮಾದರಿಯನ್ನಾಗಿಟ್ಟುಕೊಂಡು ನಾವು ಕೆಲಸ ಮಾಡುತ್ತೇವೆ ”
- ಚಂದಾ ಕೊಚ್ಚರ್, ಎಂಡಿ, ಸಿಇಒ, ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ ಡಿಜಿಟಲ್ ಗ್ರಾಮದ ವಿಚಾರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದೆ. ಮುಂದಿನ 100 ದಿನಗಳಲ್ಲಿ ದೇಶದ 100 ಗ್ರಾಮಗಳನ್ನು ಐಸಿಐಸಿಐ ಬ್ಯಾಂಕ್ ಡಿಜಿಟಲ್ ಗ್ರಾಮವನ್ನಾಗಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕನಸಿಗೆ ಐಸಿಐಸಿಐ ಬ್ಯಾಂಕ್ ಕೂಡ ಕೈ ಜೋಡಿಸುತ್ತಿದೆ.
ಡಿಜಿಟಲ್ ಗ್ರಾಮಗಳಲ್ಲಿ ಐಸಿಐಸಿಐ ಬ್ಯಾಂಕ್ ಟ್ಯಾಬ್ಲೆಟ್ ಫೋನ್ ಮುಖಾಂತರ, ಆಧಾರ್ ಆಧರಿತ ಇ ಕೆವೈಸಿ ಮೂಲಕ ಕೆಲವೇ ಘಂಟೆಗಳಲ್ಲಿ ಗ್ರಾಮಸ್ಥರಿಗೆ ಬ್ಯಾಂಕ್ ಅಕೌಂಟ್ ಒದಗಿಸಲಿದೆ. ಗ್ರಾಮದಲ್ಲಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಅಕೌಂಟ್ ಪಡೆದು, ಇದೇ ಅಕೌಂಟ್ ಮೂಲಕ ಸರಕಾರದ ಅನುದಾನ ಮತ್ತು ಇತರೆ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಡಿಜಿಟಲ್ ಗ್ರಾಮಕ್ಕಾಗಿಯೇ ವಿಶೇಷ ಎಟಿಂ ಮತ್ತು ಬ್ಯಾಂಕ್ನ ಒಂದು ಬ್ರಾಂಚ್ ಕೂಡ ಇರಲಿದೆ. ಒಟ್ಟಿನಲ್ಲಿ ಡಿಜಿಟಲ್ ಇಂಡಿಯಾ ಈಗ ಎಲ್ಲಾ ಕಡೆ ವ್ಯಾಪಿಸುತ್ತಿದೆ. ಭಾರತ ಬದಲಾಗುತ್ತಿದೆ.
1. ಗ್ರಾಮಕ್ಕೆ ಗ್ರಾಮವೇ ಫುಲ್ ಡಿಜಿಟಲ್ -ಇವರೆಲ್ಲರು ಟೆಕ್ಫ್ರೆಂಡ್ಲಿಗಳು..!
2. ಮೊಬೈಲ್ ಲೋಕದಲ್ಲೂ ಸ್ಟಾರ್ಟ್ಅಪ್ ಉದ್ಯಮ- ಮೊಬೈಲ್ ಸ್ಪಾರ್ಕ್ನಲ್ಲಿ ಕಾಣಸಿಕ್ಕಿದ ಭವಿಷ್ಯದ ಉದ್ಯಮಗಳು
3. ಸ್ಮಾರ್ಟ್ ಇದ್ದರಷ್ಟೇ ಸಾಕಾಗೋದಿಲ್ಲ- ದೆಹಲಿ-ಎನ್ಸಿಆರ್ನಲ್ಲಿ ಹುಟ್ಟಿದ ಮೊಬೈಲ್ ಆ್ಯಪ್ಗಳ ಕಥೆಯನ್ನೂ ಕೇಳಿ..!