Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಸತತ ಸೋಲುಗಳಿಂದ ಪಾಠ ಕಲಿತು ಯಶಸ್ವಿ ಉದ್ಯಮಿಯಾದ ರಾಜಸ್ಥಾನದ ಯುವಕ

ಉಷಾ ಹರೀಶ್​

ಸತತ ಸೋಲುಗಳಿಂದ ಪಾಠ ಕಲಿತು ಯಶಸ್ವಿ ಉದ್ಯಮಿಯಾದ ರಾಜಸ್ಥಾನದ ಯುವಕ

Monday January 25, 2016 , 3 min Read

ವ್ಯಾಪಾರ ಮಾಡುವುದು ಲಾಭಕ್ಕಾಗಿ ತಾವು ಮಾಡುವ ವ್ಯಾಪಾರದಿಂದ ಲಾಭ ಬರದೆ ಹೋದರು ಕಡೇ ಪಕ್ಷ ಹಾಕಿದ ಬಂಡವಾಳಕ್ಕೆ ಮೊಸವಾಗಬಾರದು ಎಂಬ ಉದ್ದೇಶ ಇನ್ವೆಸ್ಟ್ ಮಾಡುವವರಿಗೆ ಇರುತ್ತದೆ. ಸಧ್ಯಕ್ಕೆ ತಾವು ಹಾಕಿದ ಬಂಡವಾಳ ಬಂದು ಮುಂದಿನ ದಿನಗಳಲ್ಲಿ ಲಾಭಾದಾಯಕವಾಗಿ ನಡೆಯುತ್ತದೆ ಎಂಬ ಉದ್ದೇಶವು ಅವರದ್ದಾಗಿರುತ್ತದೆ. ಆದರೆ ರಾಜಸ್ಥಾನದಲ್ಲೊಬ್ಬರು ಒಂದರ ಹಿಂದೊಂದರಂತೆ ಆರಂಭಿಸಿದ ಉದ್ಯಮಗಳೆಲ್ಲಾ ಲಾಭವಾಗುವುದಿರಲಿ ಹಾಕಿದ ಬಂಡವಾಳವೂ ವಾಪಾಸ್ ಬರಲಿಲ್ಲ. ಆದರೆ ಅವರಲ್ಲಿನ ತಾನೊಬ್ಬ ಉದ್ಯಮಿಯಾಗಲೇ ಬೇಕೆಂಬ ಛಲ, ಛಾತಿ ಮಾತ್ರ ಕಡಿಮೆಯಾಗಲಿಲ್ಲ. ಪ್ರಾರಂಭಿಸಿದ ನಾಲ್ಕೈದು ಉದ್ಯಮಗಳು ಒಂದರ ಹಿಂದೊಂದರಂತೆ ನಷ್ಟವಾದರೂ ಕಡೆಗೆ ಪ್ರಯತ್ನ ಪಟ್ಟು ಕಡೆಗೂ ಒಂದು ಉದ್ಯಮದಲ್ಲಿ ಲಾಭಗಳಿಸಿ ಈಗ ಯಶಸ್ವಿ ಉದ್ಯಮಿಗಳ ಸಾಲಿಗೆ ಅವರು ಸೇರಿಕೊಂಡಿದ್ದಾರೆ.

image


ರಾಜಸ್ಥಾನದ ಹೃತೇಶ್‌ಲೋಹಿಯಾ ಎಂಬ ಯುವಕನಿಗೆ ಉದ್ಯಮಿಯಾಗಬೇಕು ಕನಸು ಮತ್ತು ಗುರಿಯಾಗಿತ್ತು. ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ಹೃತೇಶ್ ರಾಜಸ್ಥಾನದವರ ಸಾಂಪ್ರಾದಾಯಿಕ ಉದ್ದಿಮೆ ಜವಳಿ ಉದ್ಯಮವನ್ನು ತೆರೆದರು ಆರಂಭದಲ್ಲಿ ಪರವಾಗಿಲ್ಲ ಎಂಬಂತೆ ನಡೆದ ಉದ್ದಿಮೆ ಸ್ವಲ್ಪ ದಿನಗಳ ನಂತರ ಹೃತೇಶ್ ಅವರ ಕೈ ಕಚ್ಚಲು ಆರಂಭಿಸಿತು. ಪ್ರಾರಂಭಿಸಿ ಉದ್ದಿಮೆ ನಿಲ್ಲ ಬಾರದು ಎಂಬ ಕಾರಣಕ್ಕೆ ಅವರು ಇನ್ನು ಸ್ವಲ್ಪ ದಿನ ಮುಂದುವರೆಸಿದರು ಅದರೆ ಅದು ತೀರಾ ನಷ್ಟವಾದಗ ಅನಿವಾರ್ಯವಾಗಿ ನಿಲ್ಲಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ರಾಸಾಯಿನಿಕ ಕಂಪನಿಗಳಿಗೆ ಕಚ್ಛಾ ಕೆಮಿಕಲ್ ಅನ್ನು ಮಾರಾಟ ಮಾಡುವ ಹೊಸ ಬ್ಯುಸಿನೆಸ್ ಆರಂಭಮಾಡಿದರು. ಇವರ ದುರಾದೃಷ್ಟವೆಂಬಂತೆ ರಾಜಸ್ಥಾನದಲ್ಲಿದ್ದ ಯಾರೊಬ್ಬ ಕಂಪನಿಯೂ ಇವರ ರಾಸಾಯನಿಕವನ್ನು ಕೊಳ್ಳಲು ಮುಂದೆ ಬರಲಿಲ್ಲ. ಇದರಿಂದ ಮತ್ತೆ ನಷ್ಟದ ಹಾದಿಯಲ್ಲಿ ನಡೆಯಲು ಆರಂಭ ಮಾಡಿದ ಹೃತೇಶ್‌ಗೆ ಏನಾದರೂ ಮಾಡಲೇಬೇಕು ಎಂಬುದು ಮನಸ್ಸಿನಲ್ಲಿ ಕೊರೆಯುತ್ತಿತ್ತು.

ಮರಳಿ ಯತ್ನವ ಮಾಡು ಎಂಬಂತೆ ಹೃತೇಶ್ ಹರಳಿನ ವ್ಯಾಪಾರ ಪ್ರಾರಂಭಿಸಿದರು ಸಾಮಾನ್ಯವಾಗಿ ಭಾರತದಂತಹ ರಾಷ್ಟ್ರಗಳಲ್ಲಿ ಆಭರಣಗಳ ಬಳಕೆ ಹೆಚ್ಚು ಇಲ್ಲಿ ನನಗೆ ನಷ್ಟವಾಗುವುದೇ ಇಲ್ಲ ಎಂದು ಪ್ರಾರಂಭಿಸಿದ ಹರಳಿನ ಉದ್ಯಮ ಕೂಡಾ ನಷ್ಟದ ಹಾದಿ ಹಿಡಿಯಿತು. ಹೀಗೆ ಪ್ರಾರಂಭಿಸಿದ ಉದ್ದಿಮೆಗಳಿಂದ ಹೃತೇಶ್ ಅವರ ಜೇಬು ಸಂಪೂರ್ಣವಾಗಿ ಖಾಲಿಯಾಯಿತೇ ಹೊರತು ತುಂಬಲಿಲ್ಲ. ಹಾಕಿ ಬಂಡವಾಳದಲ್ಲಿ ಒಂದೇ ಒಂದು ರೂಪಾಯಿಯು ಸಹ ವಾಪಾಸ್ ಗಳಿಸಲು ಅವರಿಂದ ಸಾಧ್ಯವಾಗಲಿಲ್ಲ. ಈ ಮೂರು ಉದ್ಯಮಗಳಿಂದ ಹೃತೇಶ್ ಕಳೆದುಕೊಂಡಿದ್ದು ಲಕ್ಷಗಟ್ಟಲೆ ಹಣ.

ಆ ಮೂರು ಉದ್ಯಮಗಳಿಂದ ಕಳೆದುಕೊಂಡ ಲಕ್ಷಾಂತರ ಹಣವನ್ನು ಹೇಗಾದರೂ ಮಾಡಿ ಗಳಿಸಲೇಬೇಕು ಎಂದು ತೀರ್ಮಾನಿಸಿದ ಹೃತೇಶ್ ಬಟ್ಟೆಗಳಿಗೆ ಬಳಸುವ ವಾಷಿಂಗ್ ಪೌಡರ್‌ನ ಹೋಲ್‌ಸೇಲ್ ಮಾರಾಟ ಮತ್ತು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರು. ಇವರು ಉಳಸಿಕೊಂಡಿದ್ದ ಅಲ್ಪ ಸ್ವಲ್ಪ ಹಣವೂ ವಾಷಿಂಗ್ ಪೌಡರ್‌ನೊಂದಿಗೆ ನೀರಿನಲ್ಲಿ ಕೊಚ್ಚಿಹೋಗಿ ಮತ್ತೆ ನಷ್ಟವಾಯಿತು. ಅದರ ಪರಿಣಾಮ ಮತ್ತೆ ಮನೆಯಲ್ಲಿ ಖಾಲಿ ಕುಳಿತರು, ಕೈಯಲ್ಲಿ ಹಣವಿರಲಿಲ್ಲ, ಸಾಲ ಕೊಡುವವರಂತೂ ಯಾರು ಇಲ್ಲ. ಮುಂದೆ ಏನು ಮಾಡಬೇಕು ಎಂದು ದಿಕ್ಕು ತೋಚದೆ ಕುಳಿತಿದ್ದಿದ್ದಾಗ ಅವರ ಮನಸ್ಸಿಗೆ ಒಂದು ಉಪಯವೆಂದರೆ ಈ ಹಿಂದೆ ತಾವು ಆರಂಭಿಸಿ ನಷ್ಟ ಮಾಡಿಕೊಂಡ ಉದ್ಯಮಗಳ ಘನ ತ್ಯಾಜ್ಯವನ್ನು ಮಾರಾಟ ಮಾಡಿ ಅಲ್ಪ ಸ್ವಲ್ಪ ಹಣವನ್ನಾದರೂ ಪಡೆಯೋಣ ಎಂದು ಕೊಂಡು ಮಾರಾಟಕ್ಕಿಟ್ಟರೆ ಅದನ್ನು ಕೊಳ್ಳಲು ಸಹ ಯಾರು ಮುಂದೆ ಬರಲಿಲ್ಲ. ಇದೊಳ್ಳೆ ಸಹವಾಸವಾಯಿತಲ್ಲ ಎಂದುಕೊಂಡು ತಲೆ ಮೇಲೆ ಕೈ ಹೊತ್ತು ಕುಳಿತರು ಹೃತೇಶ್.

image


ಘನ ತ್ಯಾಜ್ಯಗಳಿಂದ ಅಲಂಕಾರಿಕ ವಸ್ತುಗಳು, ಪಿಠೋಪಕರಣಗಳ ಉದ್ದಿಮೆ

ಮನೆಯಲ್ಲಿ ಸುಮ್ಮನೆ ಕುಳಿತಿದ್ದ ಹೃತೇಶ್ ಅವರು ಸಮಯ ಕಳೆಯುದಕ್ಕಾಗಿ ತಮ್ಮದೇ ಉದ್ಯಮಗಳ ಆ ಘನತ್ಯಾಜ್ಯಗಳನ್ನು ಬಳಸಿಕೊಂಡು ಅಲಂಕಾರಿಕ ವಸ್ತುಗಳು, ಸುಂದರವಾದ ಕುರ್ಚಿಗಳು, ಮೇಜುಗಳನ್ನು ತಯಾರು ಮಾಡಿ ಅದನ್ನಾದರೂ ಮಾರಿ ಅದರಿಂದ ಹಣ ಗಳಿಸಿ ನೋಡುವ ಎಂಬ ಆಲೋಚನೆಯೊಂದಿಗೆ ಹೊಸ ಉದ್ಯಮಕ್ಕೆ ಕೈ ಇಟ್ಟರು. ಇವರ ಬಳಿಯೇ ಇದ್ದ ಘನ ತ್ಯಾಜ್ಯಗಳನ್ನು ಬಳಸಿಕೊಂಡಿದ್ದರಿಂದ ಇದಕ್ಕೆ ಬಂಡವಾಳದ ಅವಶ್ಯಕತೆ ಸಾಕಷ್ಟು ಕಡಿಮೆ ಇತ್ತು. ಸ್ವಲ್ಪ ಹಣದ ಅವಶ್ಯಕತೆಯಿದ್ದ ಕಾರಣ ಇವರ ಪತ್ನಿ ಪತಿಯ ಬೆನ್ನಲುಬಿಗೆ ನಿಂತು ತಮ್ಮ ಒಡವೆಗಳನ್ನೆಲ್ಲಾ ಮಾರಾಟ ಮಾಡಿದರು. ಅದರಿಂದ ಬಂದ ಹಣದಲ್ಲಿ ಪ್ರೀಟಿ ಇಂಟರ್‌ನ್ಯಾಷನಲ್ ಎಂಬ ಕಂಪೆನಿ ಆರಂಭಿಸಿದರು ಹೃತೇಶ್. ಈ ಕಂಪನಿ ಮೂಲಕ ತ್ಯಾಜ್ಯ ವಸ್ತುಗಳಿಂದ ಪೀಠೋಪಕರಣಗಳು, ಮಿಲಿಟರಿ ಟೆಂಟ್‌ಗಳು, ಬ್ಯಾಗ್‌ಗಳು, ಆಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಆರಂಭಿಸಿ. ಈ ಪಿಠೋಪಕರಣಗಳ ಉದ್ಯಮ ಹೃತೇಶ್ ಅವರನ್ನು ಕೈ ಹಿಡಿದುಇಂದು ಲಾಭದಾಯಕ ಉದ್ದಿಮೆಯಾಗಿ ಬೆಳೆದಿದೆ.

ವಿದೇಶಕ್ಕೂ ರಫ್ತು..

ಸತತ ಸೋಲುಗಳಿಂದ ಕಂಗೆಟ್ಟಿದ್ದ ಹೃತೇಶ್‌ರ ಪ್ರಿಟಿ ಇಂಟರ್‌ನ್ಯಾಷನಲ್‌ನ ವ್ಯಾಪಾರ ಇಂದು ಜೋರಾಗಿದೆ. ಇವರ ಅಲಂಕಾರಿಕ ವಸ್ತುಗಳು ಗ್ರಾಹಕರನ್ನು ಸಿಕ್ಕಾಪಟ್ಟೆ ಸೆಳೆಯುತ್ತಿದ್ದು,ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲದೇ ಇವರ ಕಂಪನಿಯ ವಸ್ತುಗಳಿಗೆ ವಿದೇಶಗಳಲ್ಲೂ ಮಾರುಕಟ್ಟೆ ಸೃಷ್ಟಿಯಾಗಿದೆ. ಹೃತೇಶ್ ನಾಲ್ಕಾರು ದೇಶಗಳಿಗೆ ಪ್ರಿಟಿ ಇಂಟರ್‌ನ್ಯಾಷನಲ್‌ನ ಅಲಂಕಾರಿಕ ವಸ್ತುಗಳನ್ನು ರಫ್ತು ಮಾಡುತ್ತಿದ್ದಾರೆ.

ಸತತ ಸೋಲುಗಳು, ಹಣಕಾಸಿನ ತೊಂದರೆ, ಅಂದುಕೊಂಡದ್ದು ಆಗದೇ ಹೋದರು ಧೃತಿ ಗೆಡದೆ ಮರಳಿ ಯತ್ನವ ಮಾಡು ಎಂಬ ಮಾತಿನಂತೆ ಹೊಸ ಉದ್ಯಮ ಸ್ಥಾಪಿಸಿಕೊಂಡು ಫಿನಿಕ್ಸ್ ಹಕ್ಕಿಯಂತೆ ಎದ್ದು ಬಂದು ಸಾರ್ಥಕ್ಯದ ಬದುಕು ಕಟ್ಟಿಕೊಂಡಿದ್ದಾರೆ ಹೃತೇಶ್ ಲೋಹಿಯಾ. ಸಾಕಷ್ಟು ಜನರಿಗೆ ಇವರು ಇಂದು ಮಾದರಿಯಾಗಿದ್ದಾರೆ.