ನೇಕಾರರ ಬದುಕು ಬದಲಿಸಿದ "ಹೀಯಾ"..!
ಪೂರ್ವಿಕಾ
ಅಲ್ಲಿಯ ಜನರಿಗೆ ಕೈಮಗ್ಗವೇ ಜೀವನಾಧಾರ. ಎಷ್ಟೇ ಅಂದವಾದ ಸೀರೆಗಳನ್ನು ನೇಯ್ದರು ಕೂಡ ಅದಕ್ಕೆ ಉತ್ತಮ ಬೆಲೆ ಹಾಗೂ ಮನ್ನಣೆ ಮಾತ್ರ ಲಭ್ಯವಾಗುತ್ತಿರಲಿಲ್ಲ. ಇಂತಹ ರೇಷ್ಮೇ ನೇಯ್ಗೆಯವರಿಗೆ ರಾಷ್ಟ್ರೀಯ ಮಾರುಕಟ್ಟೆಯ ಪರಿಚಯವೇ ಇರಲಿಲ್ಲ. ಇವರುಗಳ ಪರಿಶ್ರಮವೆಲ್ಲ ನೀರಲ್ಲಿ ಮಾಡಿದ ಹೋಮದಂತಾಗುತ್ತಿತ್ತು. ಅಲ್ಲೇ ಹುಟ್ಟಿ ಬೆಳೆದು, ಅಲ್ಲಿಯ ಸಾಂಸ್ಕೃತಿಕ ಸಂಕೇತವಾಗಿದ್ದ ಕೈಮಗ್ಗದಲ್ಲಿ ನೇಯ್ದ ರೇಷ್ಮೇಯನ್ನ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಬೇಕು ಅಂತ ದೃಡ ನಿರ್ಧಾರಕ್ಕೆ ಬಂದವರು ಜೋನಾಲಿ ಸೈಕ್ಯಾ.
ಜೋನಾಲಿ ಮೇಘಾಲಯದಲ್ಲಿ ಹುಟ್ಟಿ ಬೆಳೆದವರು. ಚಿಕ್ಕದಿನಿಂದ ಅಲ್ಲಿಯ ನೇಯ್ಗೆಯವರು ಪಡುತಿದ್ದ ಕಷ್ಟಗಳನ್ನ ನೋಡಿ, ಇದಕ್ಕೆ ಏನಾದ್ರು ದಾರಿ ಮಾಡಿಕೊಡಬೇಕು ಅನ್ನೋ ಆಸೆಯನ್ನಿಟ್ಟುಕೊಂಡಿದ್ರು. ಪಾರಂಪರಿಕ ರೇಷ್ಮೆಯನ್ನ ದೇಶದ ಜನರಿಗೆ ಪರಿಚಯಿಸೋ ಹಿನ್ನಲೆಯಲ್ಲಿ ಜೀವನಕ್ಕಾಗಿ ಮಾಡುತಿದ್ದ ಕೆಲಸವನ್ನ ಬಿಟ್ಟು ಹೀಯಾ ಅನ್ನೋ ಸಂಸ್ಥೆಯನ್ನ 2012 ರಲ್ಲಿ ಆರಂಭ ಮಾಡಿದ್ರು. ಇದರ ಮೂಲಕ ಮೇಘಾಲಯ ಹಾಗೂ ಅಸ್ಸಾಂನಲ್ಲಿನ ಜನರು ಕೈಮಗ್ಗದಿಂದ ನೇಯ್ದು ಕೊಡುವ ರೇಷ್ಮೇ ಹಾಗೂ ಅಲ್ಲಿನ ಕುಶಲಕರ್ಮಿಗಳ ಕೈಯಲ್ಲಿ ಅರಳೋ ವಸ್ತುಗಳನ್ನ ಮಾರಟ ಮಾಡೋದಿಕ್ಕೆ ಮಾರುಕಟ್ಟೆಯನ್ನ ಸೃಷ್ಠಿ ಮಾಡಿದ್ರು. ಇಂದಿನ ಜನರಿಗೆ ಬೇಕಾಗುವಂತೆ ಡಿಸೈನ್ಗಳನ್ನ ಬದಲಾಯಿಸಿ ಜನರಿಗೆ ರೇಷ್ಮೇಯಲ್ಲೂ ಆಯ್ಕೆಗಳು ಸಿಗುತ್ತವೆ ಅನ್ನೋದನ್ನ ತೋರಿಸಿಕೊಟ್ರು.
ಹೀಯಾ ಉದ್ದೇಶ…
ಹೀಯಾ ಸಂಸ್ಥೆಯ ಮೂಲ ಉದ್ದೇಶ ಪಾರಂಪರಿಕಾ ಉತ್ಪನ್ನಗಳನ್ನ ಬೆಳೆಸುವುದು ಹಾಗೂ ಇಂತಹ ಉತ್ವನ್ನಗಳನ್ನ ಮಾರುಕಟ್ಟೆಗೆ ಪರಿಚಯಿಸುವುದ. ನೇಕಾರರು ಹಾಗೂ ಮಾರುಕಟ್ಟೆಯ ಮದ್ಯೆ ಸೇತುವೆಯಾಗಿ ಕೆಲಸ ಮಾಡುತ್ತಿರೋ ಹೀಯಾ ಸಂಸ್ಥೇ, ಮುಖ್ಯವಾಗಿ ಅಸ್ಸಾಂ ಮತ್ತು ಈಶಾನ್ಯ ಭಾಗದಲ್ಲಿನ ರೇಷ್ಮೇ ನೇಕಾರರನ್ನ ರಾಷ್ಟ್ರೀಯ ಮಾರಿಕಟ್ಟೆಗೆ ಪರಿಚಯಿಸ್ತಿದೆ. ಹೀಯಾ ಬರುವ ಮುನ್ನ ಅಸ್ಸಾಂ ಮೂಲದ ನೇಕಾರರು ತಾವು ನೇಯ್ದ ರೇಷ್ಮೆಗೆ ಉತ್ತಮ ಬೆಲೆ ಸಿಗದೆ, ಸಾಕಷ್ಟು ವರ್ಷಗಳಿಂದ ಮಾರುಕಟ್ಟೆಯಿಂದ ದೂರ ಸರಿದಿದ್ರು. ಇಂತಹವರನ್ನು ಪುನಃ ಮಾರುಕಟ್ಟೆಗೆ ಪರಿಚಯಿಸಿ ಅವ್ರ ಉತ್ತಮ ಕೆಲಸ ಮತ್ತು ಪರಿಶ್ರಮಕ್ಕೆ ಇಲ್ಲಿ ಬೆಲೆ ಸಿಗುವಂತೆ ಮಾಡಿದ್ದಾರೆ ಜೋನಾಲಿ. ಪಾರಂಪರಿಕಾ ರೇಷ್ಮೆ, ಜೀವನಾಧಾರದ ಮೂಲಗಳಲ್ಲಿ ಇನ್ನೂ ಜೀವಂತವಾಗಿರೋ ಉದ್ದಿಮೆ. ಇಲ್ಲಿಯ ರೇಷ್ಮೆ ಬಟ್ಟೆಗಳು ಉತ್ತಮ ಗುಣಮಟ್ಟ ಹಾಗೂ ಒಳ್ಳೆಯ ಬಣ್ಣಗಳಿಂದ ಕೂಡಿರುತ್ತವೆ. ಕೆಮಿಕಲ್ ಮುಕ್ತ ಬಣ್ಣಗಳನ್ನ ಬಳಸಿ ಡೈಯಿಂಗ್ ಮಾಡಿ, ಸೀರೆಗಳ ಸೊಬಗನ್ನ ಹೆಚ್ಚಿಸೋದು ಹೀಯಾ ಬಟ್ಟೆಗಳ ಉದ್ದೇಶ.
ಮಹಿಳಾ ಸಬಲೀಕರಣದಲ್ಲಿ ಹೀಯಾ
ಮಹಿಳಾ ಸಬಲೀಕರಣಕ್ಕಾಗಿ ಹೀಯಾ ದುಡಿಯುತ್ತಿದೆ. ನಾರ್ತ್ ಇಂಡಿಯಾದಲ್ಲಿ ಹೆಚ್ಚಾಗಿ ಕೈಮಗ್ಗದಲ್ಲಿ ಕೆಲಸ ಮಾಡುವವರು ಮಹಿಳೆಯರಾಗಿದ್ದಾರೆ. ಈ ಹಿಂದೆ ಈ ಮಹಿಳೆಯರು ಮಾಡುತ್ತಿದ್ದ ಕೆಲಸಕ್ಕೆ ಸರಿಯಾದ ಮನ್ನಣೆಯಾಗಲಿ ಅಥವಾ ಹಣವಾಗಲಿ ಪಡೆಯುತ್ತಿರಲಿಲ್ಲ. ಉತ್ತಮ ಬೆಲೆ ಹಾಗೂ ಅವಕಾಶಗಳಿಂದ ಅಲ್ಲಿನ ಸಮಾಜದಲ್ಲಿ ಉತ್ತಮವಾದ ಬದಲಾವಣೆಗಳು ಹಾಗೂ ಅವಕಾಶಗಳು ಹೆಣ್ಣುಮಕ್ಕಳಿಗೆ ಸಿಗುತ್ತಿದೆ. ಹೀಯಾದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದು ಅವ್ರ ಸಂಪ್ರದಾಯದಂತೆ ನೇಯ್ದು ಕೊಡೋ ಸೀರೆಗಳಿಗೆ ಇಲ್ಲಿ ಹೆಚ್ಚಿನ ಬೇಡಿಕೆ ಇದೇ ಅನ್ನೋದು ಖುಷಿಯ ವಿಚಾರ. ಅಸ್ಸಾಂನಲ್ಲಿ ಪ್ರಸಿದ್ದಿ ಪಡೆದಿರೋ ಮಿಷಿಂಗ್ ಹಾಗೂ ಬೋಡೋ ಜನಾಂಗ ನೇಯ್ದು ಕೊಡೋ ರೇಷ್ಮೆ, ಹೀಯಾ ಆನ್ ಲೈನ್ ಸ್ಟೋರ್ ನಲ್ಲಿ ಲಭ್ಯವಾಗುತ್ತೆ. ಮಿಷಿಂಗ್ ರೇಷ್ಮೆಯಲ್ಲಿ ಸಾಕಷ್ಟು ವಿಧವಾದ ಬಣ್ಣಗಳು ಹಾಗೂ ಉತ್ತಮ ಗುಣಮಟ್ಟದ ರೇಷ್ಮೆ ಬಟ್ಟೆ ಸಿಗುತ್ತೆ. ಈ ಮಿಷಿಂಗ್ ರೇಷ್ಮೆ ಬಟ್ಟೆಗಳ ಡಿಸೈನ್ಗಳಿಗೆ ಪಕೃತಿಯೇ ಸ್ಪೂರ್ತಿ ಅನ್ನೋದು ಅಲ್ಲಿಯ ನೇಕಾರರ ಮಾತು. ಇನ್ನು ಇದ್ರ ಜೊತೆಯಲ್ಲಿ ಸಿಗೋ ಬೋಡೋ ಜನಾಂಗದ ಮಹಿಳೆಯರು ಅವ್ರದ್ದೆಯಾದ ಪರಂಪರೆಯ ವಿಧದಲ್ಲಿ ನೇಯ್ದುಕೊಡುವ ಬಟ್ಟೆ ಉತ್ತಮ ಗುಣಮಟ್ಟ ಹಾಗೂ ವಿವಿಧ ಬಣ್ಣಗಳಲ್ಲಿ ಲಭ್ಯ ಆಗುತ್ತೆ. ಸೀರೆಗಳ ಮಧ್ಯೆ ಹೂವಿನ ಚಿತ್ತಾರ ವಿರುವಂತೆ ನೇಯ್ದು ಕೊಡುತ್ತಾರೆ. ಇವೆರೆಡರ ಜೊತೆಯಲ್ಲಿ ಏರಿ ರೇಷ್ಮೇ ಅಸ್ಸಾಂ ನ 90 ರಷ್ಟು ಜನರ ಜೀವನಾಧಾರವಾಗಿದೆ. ಕೈಮಗ್ಗದಲ್ಲಿ ನೇಯುವಂತಹ ಈ ರೇಷ್ಮೆ ಇಲ್ಲಷ್ಟೇ ಅಲ್ಲದೆ ನಾರ್ತ್ ಈಸ್ಟರ್ನ್ ನಲ್ಲಿ ,ಚತ್ತೀಸ್ಘರ್ನಲ್ಲೂ ಹೆಚ್ಚಾಗಿ ನೇಯುತ್ತಾರೆ. ಇಂತಹ ರೇಷ್ಮೆಯನ್ನು, ಹೀಯಾ ಮೂಲಕ ದೇಶದ ಜನರಿಗೆ ಸಿಗುವಂತೆ ಮಾಡುತ್ತಿರೋದು ಜೋನಾಲಿ. ತಮ್ಮ ಊರಿನ ಜನರ ಜೀವನಕ್ಕಾಗಿ ಹೀಯಾ ಅನ್ನೋ ಸಂಸ್ಥೆಯನ್ನ ಕಟ್ಟಿಕೊಂಡಿರೋ ಜೊನಾಲಿ, ಈ ಉದ್ದಿಮೆಗೆ ದೇಶನ ಮೂಲೆ ಮೂಲೆಯಿಂದ ಕಸ್ಟಮರ್ಸ್ ಇದ್ದಾರೆ. ಇದರಿಂದ ಅಲ್ಲಿಯ ನೇಕಾರರಿಗೆ ಉತ್ತಮ ಕೆಲಸದ ಜೊತೆಗೆ ತಾವು ಪಟುತ್ತಿರೋ ಶ್ರಮಕ್ಕೆ ಒಳ್ಳೆ ಬೆಲೆ ಸಿಕ್ತಿದೆ ಅಂತ ಮುಗುಳ್ನಗುತ್ತಾರೆ.