Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

"ಹೆಮ್ಮೆಯ ಕನ್ನಡಿಗ"ರು ಇಂದು ಎಂದು ಎಂದೆಂದೂ- ಎಲ್ಲೆಡೆ ಪಸರಿಸಲಿ ಕನ್ನಡ ನುಡಿ

ಟೀಮ್​ ವೈ.ಎಸ್​.ಕನ್ನಡ

"ಹೆಮ್ಮೆಯ ಕನ್ನಡಿಗ"ರು ಇಂದು ಎಂದು ಎಂದೆಂದೂ- ಎಲ್ಲೆಡೆ ಪಸರಿಸಲಿ ಕನ್ನಡ ನುಡಿ

Thursday October 13, 2016 , 3 min Read

ಪ್ರತಿಯೊಬ್ಬರಲ್ಲೂ ನಮ್ಮ ನಾಡು ನುಡಿಗಾಗಿ ಏನಾದ್ರು ಮಾಡಲೇ ಬೇಕು, ನಮ್ಮಿಂದ ನಮ್ಮ ನಾಡಿಗೆ ಚಿಕ್ಕ ಕಾಣಿಕೆಯಾದ್ರು ನೀಡಲೇ ಬೇಕು ಅನ್ನೋ ಅಭಿಪ್ರಾಯ ಇದ್ದೇ ಇರುತ್ತದೆ. ಅದೇ ರೀತಿ ಇಲ್ಲೊಂದು ತಂಡ ತಮ್ಮ ತಾಯಿ ನುಡಿಗಾಗಿ ತಲೆಯಲ್ಲಿರೋ ಬುದ್ದಿಯನ್ನ ಉಪಯೋಗಿಸಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ.

image


ಮೊದಲೆಲ್ಲ ಟಿ-ಶರ್ಟ್​ ಅಂದ ತಕ್ಷಣ ಫಾರಿನ್ ಬ್ರಾಂಡ್ ತೆಗೆದುಕೊಳ್ಳೋಣ ಅಂತ ಯೋಚನೆ ಮಾಡ್ತಿದ್ರು. ಆದ್ರೆ ಈ ತಂಡ ಈಗಿನ ಮತ್ತು ಇಲ್ಲಿನ ಜನತೆಗೆ ಗಾಂಚಲಿ ಬಿಡಿ ಕನ್ನಡ ಟಿ- ಶರ್ಟ್ ಹಾಕಿ ಅನ್ನೋ ಸಂದೇಶ ಸಾರುತ್ತಿದೆ. ಹೌದು, ಟಿ-ಶರ್ಟ್​ ಅಂದ ತಕ್ಷಣ ಎಲ್ಲಾ ವಿದೇಶಿ ಬ್ರಾಂಡ್​ಗಳೇ ಕಣ್ಣ ಮುಂದೆ ಬರುತ್ತವೆ. ಆದ್ರೆ ಕನ್ನಡಿಗರಾಗಿ ಕನ್ನಡಕ್ಕಾಗಿ ಯಾಕೆ ಅಪೇರಲ್​ಗಳಲ್ಲಿ ನಮ್ಮದೇಯಾದ ಬ್ರಾಂಡ್‍ ಇಲ್ಲ ಅನ್ನೋ ಯೋಚನೆ ನಮಗೆ ನಿಮಗೆ ಬಂದಿಲ್ಲ. ಇದೇ ಯೋಚನೆ ಕನ್ನಡಿಗರಿಗೆ, ಹೆಮ್ಮೆಯ ಕನ್ನಡಿಗ ಅನ್ನೋ ಬ್ರಾಂಡ್ ಹುಟ್ಟಿಕೊಳ್ಳಲು ನಾಂದಿ ಆಯ್ತು.

ಇದನ್ನು ಓದಿ: ಆಲ್ಕೋಹಾಲ್​, ಸಿಗರೇಟ್​ನಿಂದ ಹುಟ್ಟಿದ ವ್ಯಥೆ- ರೋಚಕವಾಗಿದೆ "ಬುಕ್​ ಮೈ ಶೋ" ಕಥೆ..!

ಕನ್ನಡವನ್ನ ರಾಷ್ಟ್ರಮಟ್ಟದಲ್ಲಿ ಪಸರಿಸೋ ಪ್ರಯತ್ನವಿದು

ಐಟಿ-ಬಿಟಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮತ್ತು ಸಾಪ್ಟವೇರ್‍ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಸಮೀರ್ ,ಮನೀಶ್ ಮತ್ತು ಮಹೇಶ್‍ ಕನ್ನಡವನ್ನ ರಾಷ್ಟರ ಮಟ್ಟದಲ್ಲಿ ತಮ್ಮದೇ ಸ್ಟೈಲ್​ನಲ್ಲಿ ಪ್ರಸಿದ್ದಿ ಮಾಡಲು ಮುಂದಾದರು. ಎರಡು ವರ್ಷಗಳ ಹಿಂದೆ ಚಿಕ್ಕದಾಗಿ ಶುರುವಾದ ಯುನೈಟೆಡ್ ಸ್ಕ್ವೇರ್ ಪ್ರೈವೆಟ್ ಲಿಮಿಟೆಡ್ ಈಗ ಹೆಮ್ಮೆಯ ಕನ್ನಡಿಗ ಅನ್ನೊ ಹೆಸರಿನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ. ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಯಲ್ಲೂ ಕನ್ನಡದ ಪದಗಳಿರೋ ಟಿ-ಶರ್ಟ್ ಲಭ್ಯವಿದೆ. ಆರಂಭದಲ್ಲಿ ಕೇವಲ ನಾಲ್ಕು ಜನರಿದ್ದ ಕಂಪನಿಯಲ್ಲಿ ಇಂದು 14 ಜನರು ಕೆಲಸ ಮಾಡ್ತಿದ್ದಾರೆ. ಪ್ರತಿ ವರ್ಷ 12 ಸಾವಿರಕ್ಕೂ ಹೆಚ್ಚು ಟಿ-ಶರ್ಟ್​ನ್ನು ಮಾರಾಟ ಮಾಡುತ್ತಿದ್ದಾರೆ.

image


ವಿಭಿನ್ನ ಪ್ರಯತ್ನಕ್ಕೆ ಮನಸೋತ ಕನ್ನಡಿಗರು

ಕನ್ನಡವನ್ನ ಮತ್ತು ನಮ್ಮ ಸಂಸ್ಕೃತಿಯನ್ನ ಪ್ರಸಿದ್ದಿ ಪಡಿಸಬೇಕು ಅನ್ನೋ ಉದ್ದೇಶ ಸಖತ್ತಾಗಿಯೇ ವರ್ಕ್​ಔಟ್‍ ಆಗಿದ್ದು ವಿದೇಶದಲ್ಲೂ ಹೆಮ್ಮೆಯ ಕನ್ನಡಿಗ ಟಿಶರ್ಟ್​ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸ್ಪೆಷಲ್ ಅಂದ್ರೆ ಮಧ್ಯ ಪ್ರದೇಶದಲ್ಲಿರೋ ಆರ್ಮಿ ಆಫೀಸರ್​ಗಳು ಕೂಡ ಈ ಟಿ-ಶರ್ಟ್ ಮತ್ತು ಅದ್ರ ಮೇಲಿರೋ ಕನ್ನಡ ಪದಗಳನ್ನ ಮೆಚ್ಚಿಕೊಂಡಿದ್ದಾರೆ. ಎರಡು ವರ್ಷದ ಹಿಂದೆ ಕೇವಲ ಬೆಂಗಳೂರಿನಲ್ಲಿ ಮಾತ್ರ ಮಾರಾಟವಿದ್ದ ಹೆಮ್ಮೆಯ ಕನ್ನಡಿಗ ಟಿ-ಶರ್ಟ್‍ಗಳು ಈ ದೇಶದ ಮೂಲೆ ಮೂಲೆಗೂ ತಲುಪಿವೆ.

image


 ಟ್ರೆಂಡಿ ಮತ್ತು ಡಿಫರೆಂಟ್

ಹೆಮ್ಮೆಯ ಕನ್ನಡಿಗ ಅಂದತಕ್ಷಣ ಟಿ-ಶರ್ಟ್​ಗಳ ಮೇಲೆ ಕನ್ನಡ ನಾಲ್ನುಡಿಗಳು, ಮಂಕುತಿಮ್ಮನ ಕಗ್ಗ ಹಾಗೂ ಜಿ.ಪಿ. ರಾಜರತ್ನಂ ಅವರ ಸಾಲುಗಳಿರೋ ಟಿ-ಶರ್ಟ್‍ಗಳು ಲಭ್ಯವಿದೆ. ಅಷ್ಟೇ ಅಲ್ಲದೆ ಇವುಗಳಿಗೆ ಸಖತ್‍ ಡಿಮ್ಯಾಂಡ್‍ ಇದೆ. ಇನ್ನು ಟಿ-ಶರ್ಟ್​ ಮಾತ್ರವಲ್ಲದೆ ಪುಲ್‍ಓವರ್,ಶ್ರಗ್​ಗಳು ಕೂಡ ಇಲ್ಲಿ ಸಿಗುತ್ತವೆ. ಆರಂಭದಲ್ಲಿ ರಾಜ್ಯೋತ್ಸವಕ್ಕೆ ಮಾತ್ರ ಟಿ-ಶರ್ಟ್ ಕೊಂಡು ಕೊಳ್ತಿದ್ದ ಕನ್ನಡಿಗರು ಈಗ ವರ್ಷದ 365ದಿನಗಳಲ್ಲೂ ಈ ಟಿ-ಶರ್ಟ್ ತೆಗೆದುಕೊಳ್ಳುವುದಕ್ಕೆ ಶುರು ಮಾಡಿದ್ದಾರೆ ಅನ್ನೋದೆ ಸ್ಪೆಷಲ್. ಟ್ರೆಂಡಿ ಮತ್ತು ಜನರು ಬದಲಾದ ಹಾಗೆ ಡಿಸೈನ್ಸ್​ ಕೂಡ ಬದಲಾಗಲೇ ಬೇಕು ಅನ್ನೋ ಕಾರಣಕ್ಕೆ ಕನ್ನಡ ಮತ್ತು ಚಲನಚಿತ್ರವನ್ನ ಸಮ್ಮಿಲನ ಮಾಡಿ ಫೇಮಸ್ ಸಿನಿಮಾ ಡೈಲಾಗ್​ಗಳನ್ನೂ ಟಿ-ಶರ್ಟ್‍ಗಳ ಮೇಲೆ ಪ್ರಿಂಟ್ ಮಾಡಿಸಲಾಗಿದೆ. ಉದಾಹರಣೆಗೆ ಶೂಟ್ ಮಾಡ್ಬೇಕ…?ಏನ್ ನಿಮ್ಮ ಪ್ರಾಬ್ಲಂ..? ಹೀಗೆ ಇನ್ನೂ ಅನೇಕ ಆಯ್ದ ಪದಗಳನ್ನ ಪ್ರಿಂಟ್​ಗೆ ಬಳಸಲಾಗಿದೆ ಅಷ್ಟೇ ಅಲ್ಲದೆ ಪ್ರತಿಯೊಬ್ಬರು ಇಷ್ಟ ಪಡುವ ಡಾ. ರಾಜ್​ಕುಮಾರ್ ಮತ್ತು ಶಂಕರ್ ನಾಗ್ ಭಾವಚಿತ್ರವಿರುವ ಟಿ-ಶರ್ಟ್‍ಗಳು ಇಲ್ಲಿ ಸಿಗುತ್ತೆ.

image


ಎಲ್ಲೆಲ್ಲೂ ಕನ್ನಡ–ಕನ್ನಡ

ಸದ್ಯ ಟಿ-ಶರ್ಟ್ ಮತ್ತು ಪುಲ್ ಓವರ್​ಗಳನ್ನ ಮಾಡಿರೋ ಹೆಮ್ಮೆಯ ಕನ್ನಡಿಗ ಟೀಮ್​ ಮುಂದಿನ ದಿನಗಳಲ್ಲಿ ಸರ್ವವೂ ಕನ್ನಡಮಯವನ್ನಾಗಿಸಲು ಮುಂದಾಗುತ್ತಿದೆ. ಮೊಬೈಲ್‍ ಕವರ್ ,ಲ್ಯಾಪ್​ಟಾಪ್‍ ಕವರ್, ಕಾಲೇಜ್ ಬ್ಯಾಗ್​ಗಳಲ್ಲಿ ಕನ್ನಡ ಪದಗಳ ಪ್ರಿಂಟಿಂಗ್‍ ಇರುವ ರೀತಿಯಲ್ಲಿ ಮಾಡಲು ಮುಂದಾಗಿದ್ದಾರೆ. ನಾಲ್ವರಿಂದ ಶುರುವಾದ ಹೆಮ್ಮೆಯ ಕನ್ನಡಿಗ ಕಂಪನಿ ಇಂದು 14 ಜನರಿಗೆ ಕೆಲಸ ನೀಡಿದೆ. ಅಷ್ಟೇ ಅಲ್ಲದೆ ಇಬ್ಬರು ಬೇರೆ ಭಾಷೆಯ ವ್ಯಕ್ತಿಗಳನ್ನ ಕೆಲಸಕ್ಕೆ ನೇಮಿಸಿಕೊಂಡು ಅವ್ರಿಬ್ಬರಿಗೂ ಕನ್ನಡವನ್ನ ಕಲಿಸಿದ್ದಾರೆ. ಇನ್ನು ಕನ್ನಡಿಗರಿಗೆ ಕೆಲಸಕ್ಕೆ ಮೊದಲ ಆದ್ಯತೆ ನೀಡಲಿದ್ದಾರೆ. ಟಿ-ಶರ್ಟ್​ಗಳು ಕೂಡ ಕಡಿಮೆ ಬೆಲೆಯಲ್ಲಿ ಸಿಗಲಿದ್ದು ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ. ನಿಮಗೇನಾದ್ರು ಬಲ್ಕ್ ನಲ್ಲಿ ಬೇಕು ಅಂದ್ರೆ ಆರ್ಡರ್‍ ಕೊಟ್ಟರೆ ಸಾಕು ಮುಂದಿನ ದಿನವೇ ನಿಮಗೆ ಬೇಕಾಗಿರೋ ಟಿ-ಶರ್ಟ್ ನಿಮ್ಮ ಕೈ ಸೇರುತ್ತದೆ. ಒಟ್ಟಾರೆ ಬರೀ ಬಾಯಿ ಮಾತಿನಲ್ಲಿ ಕನ್ನಡ ಕನ್ನಡ ಅಂತ ಜಪ ಮಾಡುವ ಬದಲು ಇಂತಹದೊಂದು ವಿಭಿನ್ನ ಪ್ರಯತ್ನಕ್ಕೆ ಈ ಯುವಕರು ಕೈ ಹಾಕಿರೋದು ವಿಶೇಷ ಅನ್ಸೋದ್ರಲ್ಲಿ ಅನುಮಾನವಿಲ್ಲ. ನಿಮಗೆ ಕನ್ನಡ ಪದಗಳು ನಿಮ್ಮ ಮೈಮೇಲೆ ರಾರಾಜಿಸಬೇಕು ಅಂದ್ರೆ ಜಸ್ಟ್​ ಕ್ಲಿಕ್ ಹೆಮ್ಮೆಯಕನ್ನಡಿಗ.ಕಾಮ್

ಇದನ್ನು ಓದಿ:

1. ಸ್ಟಾರ್​ಗಳಿಗೆ ಲುಕ್​ ಕೊಡುವ ಗಟ್ಟಿಗಿತ್ತಿ- ಪಾತರಗಿತ್ತಿಗೂ ಬಣ್ಣ ಹಚ್ಚೋ ಪವಿತ್ರರೆಡ್ಡಿ

2. ಆನ್​ಲೈನ್​ ಉದ್ಯಮದಲ್ಲಿ ಲಾಭಕ್ಕಾಗಿ ಪೈಪೋಟಿ- ಗ್ರಾಹಕರಿಗೆ "ಹಬ್ಬದೂಟ"ದ ಸಂಭ್ರಮ..!

3. ಮೈಸೂರಿನಿಂದ ಮುಂಬೈವರೆಗೆ- ಸ್ಯಾಂಡಲ್​ವುಡ್​ಗಿಂತಲೂ ಬಾಲಿವುಡ್​ನಲ್ಲಿ ಡಿಮ್ಯಾಂಡ್