Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

1000 ಸಿಸಿ ಹ್ಯಾಂಡ್​​ಮೇಡ್ ಬೈಕ್ ತಯಾರಿಸಿದ ರಿದ್ದೇಶ್ ಕಥೆ

ಟೀಮ್​​ ವೈ.ಎಸ್​. ಕನ್ನಡ

1000 ಸಿಸಿ ಹ್ಯಾಂಡ್​​ಮೇಡ್ ಬೈಕ್ ತಯಾರಿಸಿದ ರಿದ್ದೇಶ್ ಕಥೆ

Friday January 27, 2017 , 2 min Read

ವೇಗವಾಗಿ ಬೈಕ್ ಓಡಿಸಬೇಕು. ರಸ್ತೆಯಲ್ಲಿ ಝೂಮ್ ಅಂತ ಚಲಿಸಬೇಕು. ಇಂತಹ ಬೈಕ್ ಬೇಕು ಅಂದ್ರೆ ಖರ್ಚು ಕೂಡ ಹೆಚ್ಚು ಮಾಡಬೇಕು. ಯಾಕಂದ್ರೆ ವೇಗವಾಗಿ ಬೈಕ್ ಓಡಬೇಕು ಅಂದ್ರೆ ಅದು ಹೆಚ್ಚು ಪವರ್ ಹೊಂದಿರಬೇಕು. ಸರಿಸುಮಾರು 1000 ಸಿಸಿ ಪವರ್ನ ಬೈಕ್ಗೆ ಸುಮಾರು 10 ಲಕ್ಷ ರೂಪಾಯಿ ಖರ್ಚು ಬೀಳುತ್ತದೆ. ಇಷ್ಟೊಂದು ದೊಡ್ಡ ಮೊತ್ತ ವ್ಯಯಿಸಿ ಬೈಕ್ ಓಡಿಸುವುದು ಕಷ್ಟದ ಮಾತೇ. ಆದ್ರೆ ಗುಜರಾತ್ ರಾಜ್ಯದ ರಾಜ್​ಕೋಟ್​ನ ರಿದ್ದೇಶ್ ವ್ಯಾಸ್ ತಾನೇ 1000 ಸಿಸಿ ಬೈಕ್ ತಯಾರಿಸಿದ್ದಾನೆ. ಅಷ್ಟೇ ಅಲ್ಲ ಅದರ ಮೇಲೆ ಓಡಾಡುತ್ತಿದ್ದಾನೆ.

image


ರಿದ್ದೇಶ್ ತಯಾರು ಮಾಡಿರುವ ಬೈಕ್​ಗೆ “ದಿ ರಿದ್” ಅಂತ ಹೆಸರಿಟ್ಟಿದ್ದಾನೆ. ಈ ಬೈಕ್​ನಲ್ಲಿ 6 ಟ್ರಾನ್ಸ್​ಮಿಷನ್ ಇದ್ದು, ಹೈಡ್ರಾಲಿಕ್ ಕ್ಲಚ್, 4 ಸಿಲಿಂಡರ್ ಎಂಜಿನ್ ಇದೆ. ಗಂಟೆಗೆ 170 ಕಿಲೋಮೀಟರ್ ವೇಗದಲ್ಲಿ ಇದು ಓಡುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಪೆಷಲ್ ಬೈಕ್​ನ ಎತ್ತರ 8 ಫೀಟ್ 9 ಇಂಚು ಇದ್ದು, 450 ಕೆ.ಜಿ. ಭಾರವನ್ನು ಹೊಂದಿದೆ. ವೇಗವಾಗಿ ಓಡಬಲ್ಲ ರಿದ್ಧ್​ನ್ನು ಕೈಯಿಂದಲೇ ತಯಾರಿಸಲಾಗಿದೆ. ಎಂಜಿನ್, ಹೈಡ್ರಾಲಿಕ್ ಸಿಸ್ಟಮ್ ಮತ್ತು ಟೈಯರ್​ಗಳ ಕೆಲಸ ಮಾತ್ರ ಮಷಿನ್ ಮೂಲಕ ಮಾಡಲಾಗಿದೆ. "ರಿದ್" ತಯಾರು ಮಾಡಿರುವ ರಿದ್ದೇಶ್ ಮುಂದಿನ ದಿನಗಳಲ್ಲಿ ಮತ್ತಷ್ಟು ಹೈ ಸ್ಪೀಡ್ ಬೈಕ್ ತಯಾರು ಮಾಡುವ ಕನಸಿನಲ್ಲಿದ್ದಾರೆ.

ಇದನ್ನು ಓದಿ: ಸ್ಮಾರ್ಟ್​ಫೋನ್​ನಲ್ಲೇ ಆರೋಗ್ಯ ಸಮಸ್ಯೆಗೆ ಉತ್ತರ- ಇದು "ಡಾಕ್ಟರ್ಸ್​ ಲೈವ್​" ಮ್ಯಾಜಿಕ್​

ರಿದ್ದೇಶ್​ ಎಂಜಿನಿಯರಿಂಗ್ ಅಥವಾ ಡಿಸೈನಿಂಗ್​ನಲ್ಲಿ ಪದವಿ ಪಡೆದವರಲ್ಲ. ಆದ್ರೆ ಮೆಟಲ್ ಇಂಡಸ್ಟ್ರಿಯಲ್ಲಿ ಉತ್ತಮ ಅನುಭವ ಇತ್ತು. ಮೋಟಾರ್ ಸೈಕಲ್ ಸರ್ವೀಸಿಂಗ್ ಸೆಂಟರ್​ನಲ್ಲಿ ಕೆಲಸ ಮಾಡುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಇದೇ ಆತನಿಗೆ ಸ್ಪೂರ್ತಿ ಆಯಿತು. "ರಿದ್ಧ್" ಹುಟ್ಟುಹಾಕಲು ಪ್ರೇರಣೆ ನೀಡಿತು.

ರಿದ್ದೇಶ್​ಗೆ "ರಿದ್ಧ್" ಹುಟ್ಟುಹಾಕಲು ಸುಮಾರು 8 ವರ್ಷಗಳ ಸಮಯ ಹಿಡಿಯಿತು. ಅಷ್ಟೇ ಅಲ್ಲ ಈ ಬೈಕ್ ತಯಾರು ಮಾಡಲು ಸುಮಾರು 8 ಲಕ್ಷ ರೂಪಾಯಿ ಖರ್ಚು ಕೂಡ ಆಗಿದೆ. ಸದ್ಯ ರಿದ್ದೇಶ್ 1000 ಸಿಸಿಯ ಮೊದಲ ಹ್ಯಾಂಡ್​ಮೇಡ್ ಬೈಕ್ ತಯಾರಿಸಿದ್ದಕ್ಕಾಗಿ "ಲಿಮ್ಕಾ ಬುಕ್ ಆಫ್ ರೆಕಾರ್ಡ್" ಸೇರಿಕೊಂಡಿದ್ದಾರೆ. ರಿದ್ದೇಶ್ ಭವಿಷ್ಯದಲ್ಲಿ ಮತ್ತಷ್ಟು ಪ್ರಯೋಗಗಳನ್ನು ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ:

1. ಜರ್ಮನಿಯಲ್ಲಿ ತರಬೇತಿ ಪಡೆಯಲು ಆಯ್ಕೆಯಾದ ಮಿಝೋರಾಂನ 15ರ ಹರೆಯದ ಬಾಲಕ

2. ಡೆಬಿಟ್-ಕ್ರೆಡಿಟ್ ಕಾರ್ಡ್ ಇಲ್ಲದಿದ್ರು ವಹಿವಾಟು ಸಾಧ್ಯ- ಇದು ಡಿಜಿಟಲ್​ ಇಂಡಿಯಾ ಕಾನ್ಸೆಪ್ಟ್​ ಕನಸು

3. ಎಂಜಿನಿಯರಿಂಗ್​ಗೆ ಬೈಬೈ- ಕುದುರೆ ಸವಾರಿಗೆ ಹಾಯ್ ಹಾಯ್​- ಹವ್ಯಾಸವೇ ಫುಲ್‍ ಟೈಂ ಜಾಬ್ ಆದ ಕಥೆ..!