Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಸೆಟ್ ದೋಸೆ ಫ್ಲೇನ್, ಬೆಣ್ಣೆ ದೋಸೆ ಆಯ್ತು..ಈಗ ಸಾಗು ಮಸಾಲೆ ದೋಸೆ...

ವಿಸ್ಮಯ

ಸೆಟ್ ದೋಸೆ ಫ್ಲೇನ್, ಬೆಣ್ಣೆ ದೋಸೆ ಆಯ್ತು..ಈಗ ಸಾಗು ಮಸಾಲೆ ದೋಸೆ...

Monday January 18, 2016 , 2 min Read

ಸಾಮಾನ್ಯವಾಗಿ ನೀವು ಮಸಾಲೆ ದೋಸೆ, ಸೆಟ್ ದೋಸೆ, ಪ್ಲೇನ್ ದೋಸೆ, ಬೆಣ್ಣೆ ದೋಸೆ, ಈರುಳ್ಳಿ ದೋಸೆ ಹೀಗೆ ಬಗೆ ಬಗೆಯ ದೋಸೆಗಳನ್ನ ಕೇಳಿರ್ತಿರಾ.. ಬಾಯಲ್ಲಿನೀರುರಿಸುವ ದೋಸೆಗಳ ರುಚಿಯನ್ನ ಸವಿದಿರುತ್ತಿರಾ.. ಘಮ ಘಮ ದೋಸೆಗೆ ಮರುಳಾಗದವರು ಯಾರು ಇಲ್ಲ ಬಿಡಿ. ಇಡೀ ಬೆಂಗಳೂರಿನ ಫೇಮಸ್ ಹೋಟೆಲ್‍ಗಳಲ್ಲಿ ಬಗೆ ಬಗೆಯ ದೋಸೆಗಳ ಸವಿಯನ್ನ ನೋಡಿರ್ತೀರಾ.. ಆದರೆ ಬೆಂಗಳೂರಿನ ಹೆಸರಾಂತ ಹೋಟೆಲ್‍ಗಳ ಪೈಕಿ ಉಡುಪಿ ಶ್ರೀ ಕೃಷ್ಣ ಭವನ ಕೂಡ ಒಂದು.

image


ಉಡುಪಿ ಶ್ರೀ ಕೃಷ್ಣ ಭವನದಲ್ಲಿ ಸಿಗುವ ಸಾಗು ಮಸಾಲೆ ದೋಸೆಗೆ ಎಲ್ಲಿಲ್ಲದ ಬೇಡಿಕೆ. ಜನ ಸಾಲುಗಟ್ಟಿ ತಿನ್ನಲು ಬರುತ್ತಾರೆ. ಅರೇ ಇದೇನಾಪ್ಪ ಸಾಗು ಮಸಾಲೆ ದೋಸೆನಾ ಅಂತ ಆಶ್ಚರ್ಯ ಆಗಬಹುದು. ಅದ್ರೆ ಇಲ್ಲಿನ ಸಾಗು ಮಸಾಲೆಯ ಗಮ್ಮತ್ತೆ ಹಾಗೇ ಬೆಂಗಳೂರಿನ ಸುತ್ತಮುತ್ತಲ ಜನ ಹುಡುಕಿಕೊಂಡು ಬರುತ್ತಾರೆ. 1926ರಲ್ಲಿ ಆರಂಭವಾದ ಉಡುಪಿ ಶ್ರೀ ಕೃಷ್ಣ ಭವನದಲ್ಲಿ ಸ್ಪೆಷಲ್ ತಿಂಡಿ ಅಂದರೆ ಅದು ಸಾಗು ಮಸಾಲೆ ದೋಸೆ.

1926ರಿಂದ ಸಾಗು ಮಸಾಲೆಯನ್ನೇ ಹೆಚ್ಚು ಮಾಡಿಕೊಂಡು ಬಂದಿರೋ ಈ ಹೋಟೆಲ್‍ನಲ್ಲಿ ಇಂದಿಗೂ ಅದೇ ಟೆಸ್ಟ್​ ಅನ್ನ ಉಳಿಸಿಕೊಂಡು ಬಂದಿದೆ. ಸಿನಿಮಾ ನಟ ನಟಿಯರು ಕೂಡ ಇಲ್ಲಿಗೆ ಬಂದು ಸಾಗು ಮಸಾಲೆ ದೋಸೆಯ ಸವಿಯನ್ನ ಸವಿದಿದ್ದಾರೆ. ಸಾಮಾನ್ಯವಾಗಿ ದೋಸೆ ಅಂದ್ರೆ ದೋಸೆಯ ಒಳಗೆ ಕೆಂಪು ಚಟ್ನಿ ಹಾಕಿ, ಆಲುಗಡ್ಡೆ ಪಲ್ಯ ಹಾಕಿ ನೀಡ್ತಾರೆ. ಆದ್ರೆ ಇಲ್ಲಿ ಮಾಡೋವ ದೋಸೆಗೆ ಆಲುಗಡ್ಡೆಯನ್ನ ಬಳಸುವುದಿಲ್ಲ. ಬದಲಿಗೆ ವಿವಿಧ ತರಕಾರಿಯನ್ನ ಸೇರಿಸಿ ಗಟ್ಟಿ ಸಾಗು ಮಾಡಿ ದೋಸೆ ಒಳಗೆ ಹಾಕಿಕೊಡಲಾಗುತ್ತೆ. ಜೊತೆಗೆ ಒಂದು ಸಣ್ಣ ತಟ್ಟೆಯಲ್ಲಿ ಚಟ್ನಿ ಹಾಕಿ ಕೊಡಲಾಗುತ್ತೆ. ಬಿಸಿ ಬಿಸಿ ದೋಸೆ, ದೋಸೆ ಒಳಗೆ ತರಕಾರಿ ಸಾಗು, ಅದರೊಂದಿಗೆ ಚಟ್ನಿ ವಾಹ್ ತಿಂದವರಿಗೆ ಗೊತ್ತು, ಸಾಗು ಮಸಾಲೆ ದೋಸೆಯ ಸವಿ..

image


ಗ್ರಾಹಕರು ಏನನ್ನುತ್ತಾರೆ..?

ಚಿಕ್ಕ ವಯಸ್ಸಿನಿಂದಲ್ಲೂ ತಂದೆಯೊಂದಿಗೆ ಸಾಗು, ಮಸಾಲೆ ದೋಸೆಯನ್ನ ಇಲ್ಲಿ ತಿನ್ನೊಕ್ಕೆ ಬರುತ್ತಿದೆ. ಇಲ್ಲಿ ಮಾಡುವ ಸಾಗು ಮಸಾಲೆ ಬೇರೆ ಎಲ್ಲೂ ಸಿಗೋಲ್ಲ. ಇಂದಿಗೂ ಅದೇ ಟೇಸ್ಟ್​ ಅನ್ನ ಉಳಿಸಿಕೊಂಡು ಬಂದಿದೆ. ವಾರ ವಾರ ಇಲ್ಲಿಗೆ ಬಂದು ಮಸಾಲೆದೋಸೆಯನ್ನ ತಿಂದು ಹೋಗುತ್ತೇನೆ ಅಂತಾರೆ ವಿಜಯನಗರದ ನಿವಾಸಿ ಶಾಂತಮೂರ್ತಿ..

ಈ ಹೋಟೆಲ್ ಇರೋದಾದ್ರೂ ಎಲ್ಲಿ..?

ಅಂದಹಾಗೇ ಸಾಗು ಮಸಾಲೆ ದೋಸೆ ಮಾಡುವ ಉಡುಪಿ ಶ್ರೀ ಕೃಷ್ಣ ಭವನ ಇರೋದು ಎಲ್ಲಿ ಅನ್ನೋ ಪ್ರಶ್ನೆ ಮೂಡದೇ ಇರೋಲ್ಲ. ಉಡುಪಿ ಶ್ರೀ ಕೃಷ್ಣ ಭವನ ಇರೋದು ಬೆಂಗಳೂರಿನ ಬಳೇಪೇಟೆಯಲ್ಲಿ. ಶಾಪಿಂಗ್ ಏರಿಯಾಗೆ ಫೇಮಸ್ ಆಗಿರೋ ಈ ಏರಿಯಾದಲ್ಲೇ ಉಡುಪಿ ಶ್ರೀ ಕೃಷ್ಣ ಭವನ ಇರುವುದು. 1926ರಲ್ಲಿ ಆರಂಭವಾದ ಉಡುಪಿ ಶ್ರೀ ಕೃಷ್ಣ ಭವನದಲ್ಲಿ ಎಲ್ಲ ರೀತಿಯ ಸಸ್ಯಾಹಾರಿ ತಿನಿಸಿಗಳನ್ನು ಮಾಡಲಾಗುತ್ತೆ. ಅವುಗಳಲ್ಲಿ ಹೆಚ್ಚು ಫೇಮಸ್ ಆಗಿದ್ದು ಇಡ್ಲಿ ಸಾಂಬರ್ ಮತ್ತು ಸಾಗು ಮಸಾಲೆದೋಸೆಗಳಿಂದ. ಉಡುಪಿ ಶ್ರೀ ಕೃಷ್ಣ ಭವನದ ಮಾಲೀಕರು ಹೇಳುವಂತೆ ಸಾಗು ಮಸಾಲೆಯನ್ನ ಮೊದಲು ಆರಂಭ ಮಾಡಿದ್ವರು ಇವರೇ. ಬೇರೆ ಎಲ್ಲೂ ಸಿಗದ ಈ ಸಾಗುಮಸಾಲೆ ದೋಸೆಗೆ ಎಲ್ಲಿಲ್ಲದ ಬೇಡಿಕೆ ಇದೆಯಂತೆ. ದಿನಕ್ಕೆ ಸಾವಿರಾರು ಜನ ಬಂದು ಇಲ್ಲಿ ಸಾಗುಮಸಾಲೆದೋಸೆಯನ್ನ ತಿನ್ನತ್ತಾರೆ.

image


ಗ್ರಾಹಕರ ಶಹಭಾಷ್ ಗಿರಿ..

ಸುಮಾರು ವರ್ಷಗಳಿಂದ ಇಲ್ಲಿಗೆ ಬರೋ ತಿಂಡಿ ಪ್ರೀಯರು ಉಡುಪಿ ಶ್ರೀ ಕೃಷ್ಣ ಭವನಕ್ಕೆ ಶಹಬಾಷ್ ಹೇಳತ್ತಾರೆ. ದಿನದಿಂದ ದಿನಕ್ಕೆ ವರ್ಷದಿಂದ ವರ್ಷ ಕಳೆದ್ರೂ ಅದೇ ಸ್ವಚ್ಚತೆ, ಅದೇ ರುಚಿಯನ್ನು ಕಾಪಾಡಿಕೊಂಡು ಬಂದಿದೆ. ಇನ್ನು 1926ರಲ್ಲಿ ಇದ್ದ ಕಟ್ಟಡ ಈಗಾಲು ಹಾಗೇಯೇ ಇದೆ. ತನ್ನ ಹಳೆಯ ರೂಪವನ್ನೇ ಪಡೆದುಕೊಂಡು ಬಂದಿದೆ ಅಂತಾರೆ ಬಳೇಪೇಟೆ ನಿವಾಸಿ ಮಹದೇವಪ್ಪ..

ಉಡುಪಿ ಶ್ರೀ ಕೃಷ್ಣ ಭವನದಲ್ಲಿ ಸಾಗು ಮಸಾಲೆಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಿತ್ಯ ಸುಮಾರು ಸಾವಿರಾರು ಆಹಾರ ಪ್ರಿಯರು ಇಲ್ಲಿಗೆ ಬಂದು ಸಾಗು ಮಸಾಲೆ ರುಚಿಯನ್ನ ಸವಿತ್ತಾರೆ. ನಿತ್ಯ ಸಾಗು ಮಸಾಲೆದೋಸೆಗಾಗಿಯೇ 5ಕೆಜಿಗೂ ಹೆಚ್ಚು ಅಕ್ಕಿಯನ್ನ ಬಳಸಲಾಗುತಂತ್ತೆ. ಒಟ್ಟಾರೆ ಇಷ್ಟು ದಿನ ಮಸಾಲೆ ದೋಸೆ, ಈರುಳ್ಳಿ ದೋಸೆ, ಅಂತ ತಿನ್ನದು ಬೇಜಾರು ಆಗಿರೋರು ಒಮ್ಮೆ ಉಡುಪಿ ಶ್ರೀ ಕೃಷ್ಣ ಭವನಕ್ಕೆ ಹೋಗಿ ಸಾಗುಮಸಾಲೆ ದೋಸೆಯನ್ನ ಟೇಸ್ಟ್ ಮಾಡಬಹುದು.