ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವೈ-ಫೈ..!
ಎನ್.ಎಸ್. ರವಿ
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಬರುವ ತನಕ ಏನ್ ಮಾಡೋದು ಎಂಬ ಪ್ರಶ್ನೆ ಎಲ್ಲರನ್ನು ಒಂದಲ್ಲ ಒಂದು ಸಲ ಕಾಡುವುದು ಸಾಮಾನ್ಯ. ಯಾಕಂದ್ರೆ, ಬಸ್ ಸರಿಯಾದ ಸಮಯಕ್ಕೆ ಬರಲ್ಲ. ಅನೇಕ ಸಲ ನಾವೇ ಸಮಯಕ್ಕಿಂತ ಬೇಗ ಬಂದು ಬಸ್ಗಾಗಿ ಕಾಯುತ್ತ ಕುಳಿತಿರುತ್ತೇವೆ. ಏನಾದ್ರು ಮಾಡಬೇಕು ಅಂದ್ರೆ ಸರಿಯಾಗಿ ನೆಟ್ ಕೂಡ ವರ್ಕ್ ಆಗಲ್ಲ. ಆದರೆ ಈ ಎಲ್ಲ ಸಮಸ್ಯೆಗಳಿಗೆ ಸಾರಿಗೆ ಸಂಸ್ಥೆ ಈಗ ಪೂರ್ಣವಿರಾಮವಿಟ್ಟಿದೆ.
ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ರಾಜ್ಯದ 13 ಕೆಎಸ್ಆರ್ಟಿಸಿ ಬಸ್ನಿಲ್ದಾಣಗಳಲ್ಲಿ ಉಚಿತ ಇಂಟರ್ನೆಟ್ ಒದಗಿಸುವ ಮಹತ್ವದ ಕಾರ್ಯ ಪ್ರಾರಂಭಿಸಿದೆ. ಬಸ್ ನಿಲ್ದಾಣಗಳಲ್ಲಿ ಸರಿಯಾದ ಸಮಯಕ್ಕೆ ಬಸ್ ಬಾರದೆ ಇದ್ದಾಗ ಬೇಜಾರಾದ್ರೆ ಚಿಂತಿಸಬೇಕಿಲ್ಲಾ, ಯಾಕಂದ್ರೆ, ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ 13 ಬಸ್ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ನೀಡುತ್ತಿದೆ. ಉತ್ತಮ ಗುಣಮಟ್ಟದ ವೈಫೈ ಇದಾಗಿದ್ದು. ಹಲವು ಬ್ಯುಸಿನೆಸ್ಮೆನ್ಗಳು , ಮತ್ತು ಜನಸಾಮಾನ್ಯರು ಬಸ್ ನಿಲ್ದಾಣದಲ್ಲಿಯೇ ತಮ್ಮ ಕೆಲವನ್ನು ಮಾಡಿಕೊಳ್ಳಬಹುದು. ಬೇಜಾರ್ ಆದ್ರೆ, ಅಲ್ಲೇ ವಾಟ್ಸ್ಆ್ಯಪ್, ಫೇಸ್ಬುಕ್ನಂತಹ ಸಮಾಜಿಕ ವೆಬ್ ತಾಣಗಳಲ್ಲಿ ಸಮಯ ಕಳೆಯಬಹುದು.
ಇಂಟರ್ನೆಟ್ ಅವಶ್ಯಕತೆಯನ್ನು ಮನಗಂಡಿರುವ ಸಾರಿಗೆ ಸಂಸ್ಥೆ, ಈಗಾಗಲೇ ವೈಫೈ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ರಾಜ್ಯದ 13 ಕೆಎಸ್ಆರ್ಟಿಸಿ ಬಸ್ನಿಲ್ದಾಣಗಳಾದ, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣ ಹಾಗೂ ಹಾಸನ, ಮಂಡ್ಯ, ಮಡಿಕೇರಿಯಲ್ಲಿ ಈ ಸೇವೆ ಪ್ರಾರಂಭವಾಗಿದೆ.ಲ್ಯಾಪ್ಟಾಪ್,ಮೊಬೈಲ್, ಟ್ಯಾಬ್ಲೆಟ್ ಬಳಕೆದಾರರು ಈ ಸೇವೆಯನ್ನು ಉಪಯೋಗಿಸುತ್ತಿದ್ದಾರೆ. ಉತ್ತಮ ಸೇವೆಯಿಂದ ಜನರು ಸಂತಸ ಪಡುತ್ತಿದ್ದಾರೆ ಎಂತಾರೆ, ವ್ಯವಸ್ಥಾಪಕ ನಿರ್ದೇಶಕರಾದ, ಶ್ರೀ ರಾಜೇಂದರ್ ಕುಮಾರ ಕಟಾರಿಯಾ.
ವೈಫೈ ಬಳಕೆ ಮಾಡುವುದು ಹೇಗೆ..?
ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಗಳಲ್ಲಿ ಲಭ್ಯವಿರುವ ವೈ-ಫೈ ಸೇವೆಯನ್ನು ಪಡೆಯಲು ಐ-ಆನ್ ವೈ-ಫೈ ನೆಟ್ ವರ್ಕ್ ಅಥವಾ ಗೂಗಲ್ ಪ್ಲೇಸ್ಟೋರ್ನಿಂದ ಉಚಿತವಾಗಿ ಐ-ಆನ್ ವೈ-ಫೈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಬಸ್ ನಿಲ್ದಾಣಗಳಲ್ಲಿ ಮೊಬೈಲ್, ಲ್ಯಾಪ್ಟಾಪ್ ಅಥವಾ ಟ್ಯಾಬ್ಲೆಟ್ನಲ್ಲಿ ಲಭ್ಯವಿರುವ ವೈ-ಫೈನಲ್ಲಿ, ಐ-ಆನ್ ವೈ-ಫೈ ಆಯ್ಕೆ ಮಾಡಬೇಕು. ಅಲ್ಲಿ 10 ಅಂಕಿಯ ಮೊಬೈಲ್ ನಂಬರ್ ನೀಡಿ, ನೊಂದಣಿ ಮಾಡಿಕೊಂಡರೆ ವೈ-ಫೈ ಪಾಸ್ಪರ್ಡ್, ಎಸ್ಎಂಎಸ್ ರೂಪದಲ್ಲಿ ದೊರೆಯಲಿದೆ. ಪಾಸ್ವರ್ಡ್ ಹಾಕಿ ಉಚಿತ ಇಂಟರ್ನೆಟ್ ಸಂಪರ್ಕ ಪಡೆಯಬಹುದಾಗಿದೆ ಎಂದು ನಿಗಮ ತಿಳಿಸಿದೆ. ಕ್ಷಣಮಾತ್ರದಲ್ಲಿಯೆ ಇದೆಲ್ಲವೂ ಅಗಿಬೀಡುತ್ತದೆ.
ಈಗ ಸ್ಮಾರ್ಟ್ ಆಗಿರುವ ಪ್ರಯಾಣಿಕರಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ಈ ಮಹ್ವದ ಹೆಜ್ಜೆಗೆ, ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಉತ್ತಮ ಹೈ ಸ್ಪೀಡ್ ಇಂಟರ್ನೆಟ್ ಲಭ್ಯವಾಗುತ್ತಿರುವುದು ಸಂತಸದ ವಿಷಯ. ಉಚಿತ ವೈಫೈ ಆದ್ರೂ ಹೈಟೆಕ್ ಆಗಿದೆ. ಥಟ್ ಅಂತ ಬಳಸಲು ಯಾವುದೇ ತಲೆನೋವಿಲ್ಲ ಎನ್ನುತ್ತಾರೆ ವೈ-ಫೈ ಬಳಸಿದ ಪ್ರಯಾಣಿಕರು..
ಪ್ರಯಾಣಿಕರಿಗೆ ಬೇಸರವಾಗದಿರಲಿ, ಬಸ್ಸುಗಳು ಬರೋತನಕ, ಬಂದ್ ಬಸ್ ಬಿಡುವ ತನಕ, ಏನಾದ್ರು ಬೇಜಾರಾದ್ರೆ ಉಚಿತವಾಗಿ ವೈಫೈ ಬಳಸಿ ಮನರಂಜನೆ ಪಡೆಯಲು ಪ್ರಾಯೋಗಿಕವಾಗಿ ವೈಫೈ ಸೇವೆ ಆರಂಭಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲಿ ಈ ಸೇವೆ ಅತಿ ಶೀಘ್ರದಲ್ಲಿಯೆ ಲಭ್ಯವಾಗಲಿದೆ. ಸ್ಮಾರ್ಟ್ ಜನಿರಿಗಾಗಿ ಸ್ಮಾರ್ಟ್ ಸೇವೆ ನೀಡಲು ಪ್ರಯಾಣಿಕರನ್ನು ಸಾರಿಗೆ ಸಂಸ್ಥೆಯತ್ತ ಸೆಳೆಯಲು ಕೆಎಸ್ಆರ್ಟಿಸಿ ಉತ್ತಮ ಬಸ್ ಸೇವೆ ಜೊತೆಗೆ ವೈ-ಫೈ ಸೌಲಭ್ಯ ನೀಡುವ ಮೂಲಕ ಜನರಿಗೆ ಮತ್ತಷ್ಟೂ ಹತ್ತಿರವಾಗಿದೆ.