Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಅಡುಗೆ ಬರಲ್ಲ ಅನ್ನುವ ಟೆನ್ಷನ್​ ಬಿಟ್ಟುಬಿಡಿ- ಆ್ಯಪ್ ಡೌನ್​ಲೋಡಿ ಮಾಡಿ ಅಡುಗೆ ಕಲಿಯಿರಿ..!

ಟೀಮ್​​ ವೈ.ಎಸ್​. ಕನ್ನಡ

ಅಡುಗೆ ಬರಲ್ಲ ಅನ್ನುವ ಟೆನ್ಷನ್​ ಬಿಟ್ಟುಬಿಡಿ- ಆ್ಯಪ್ ಡೌನ್​ಲೋಡಿ ಮಾಡಿ ಅಡುಗೆ ಕಲಿಯಿರಿ..!

Monday January 30, 2017 , 2 min Read

ಮನುಷ್ಯ ಸದಾ ಆರಾಮವಾಗಿ ಇರಲು ಬಯಸುತ್ತಾರೆ. ಹರೆಯದಲ್ಲೇ ಸೋಮಾರಿತನಕ್ಕೆ ದಾಸರಾಗುವವರು ಹೆಚ್ಚು. ತಂತ್ರಜ್ಞಾನ ಬೆಳೆದಂತೆ ಮನುಷ್ಯ ಹೆಚ್ಚು ಅಲಸಿಯಾಗುತ್ತಿದ್ದಾನೆ. ವೃದ್ಧಾಪ್ಯಕ್ಕೆ ಕಾಲಿಟ್ಟರಂತೂ ಯಾವುದರಲ್ಲೂ ಆಸಕ್ತಿ ಇರುವುದಿಲ್ಲ. ಬುದ್ದಿ ಮಾತು ಹೇಳುತ್ತ ಕಾಲ ಕಳೆಯುವವರೇ ಹೆಚ್ಚು. ಇನ್ನು ಕೆಲವರೂ ವಯಸ್ಸಾದರೂ ವಯಸ್ಸು ಕೇವಲ ಸಂಖ್ಯೆ ಅಷ್ಟೇ ಅನ್ನುತ್ತಾ ಏನಾದರೊಂದು ಕೆಲಸದಲ್ಲಿ ಸಕ್ರಿಯರಾಗಿರುತ್ತಾರೆ. ಅಂಥವರಲ್ಲಿ ಒಬ್ಬರು ಚಿತ್ರಾ ವಿಶ್ವನಾಥನ್.

image


ತಮಿಳುನಾಡಿನ ಚೆನ್ನೈ ಬಳಿಯಿರುವ ಮೈಲಾಪುರ್ ನಿವಾಸಿ ಚಿತ್ರಾ ವಿಶ್ವನಾಥನ್. ಅವರಿಗೀಗ ಬರೋಬ್ಬರಿ 77 ವರ್ಷ. ಸದ್ಯ ಅವರು ಮೈಲಾಪುರ್ ಮಾಮಿ, ಇಂಟರ್​​ನೆಟ್ ಮಾಮಿ ಎಂದೇ ಜನಪ್ರಿಯರಾಗಿದ್ದಾರೆ. ಚಿತ್ರಾ ನೆಟ್‌ಲೋಕದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಇವರು ಸಿಗುವುದಿಲ್ಲ. ಇವರು ಸಖತ್ ಸಕ್ರೀಯವಾಗಿರುವುದು ಮೊಬೈಲ್ ಆ್ಯಪ್​ನಲ್ಲಿ. ಅದು ತಮ್ಮದೆಯಾದ ಆ್ಯಪ್​ನಲ್ಲಿ. ಅಡುಗೆಯ ರೆಸಿಪಿ ಹೊಂದಿರುವ ಈ ಆ್ಯಪ್‌ನ ಹೆಸರು Ask Chitvish. ಈ ಆ್ಯಪ್ ಮೂಲಕ ವಡೆ, ಪಾಯಸ, ಡಿಫರೆಂಟ್ ಇಡ್ಲಿ, ಕಡುಬು, ದೋಸೆ ಮೊದಲಾದ ಮನೆ ಅಡುಗೆಗಳ ಮಾಡುವ ಕ್ರಮದ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು.

image


ರುಚಿ ರುಚಿಯಾದ ಅಡುಗೆ ಮಾಡುವ ಚಿತ್ರಾ, ತಾವು ಕಲಿತಿರುವ ಎಲ್ಲ ಅಡುಗೆಯನ್ನು ಮುಂದಿನ ಜನಾಂಗಕ್ಕೆ ತಿಳಿಸಬೇಕು ಮತ್ತು ಆ ಅಡುಗೆಗಳು ನನ್ನಲ್ಲೇ ನನ್ನ ಪೀಳಿಗಿಗೆ ಮಾತ್ರ ಸೀಮಿತವಾಗಿರಬಾರದು. ಅವರು ಪರಿಚಯಿಸಿರುವ 3000 ಬಗೆಯ ಖಾದ್ಯಗಳ ಬಗೆಗಿನ ಮಾಹಿತಿ ಭವಿಷ್ಯದಲ್ಲೂ ಅಮರವಾಗಿರುಬೇಕು. ಉತ್ತಮ ಅಡುಗೆಗಳನ್ನು ಮಾಡುವ ಮೂಲಕ ಎಲ್ಲರೂ ಒಳ್ಳೆ ಬಾಣಸಿಗರಾಗಬಹುದು. ತಮ್ಮ ಕುಟುಂಬದವರನ್ನು ಸಂತಸ ಪಡಿಸಿಬಹುದು. ಮುಂದಿನ ಜನಾಂಗಕ್ಕೆ ಪಾಕ ವಿಧಾನ ದಾಟಿಸಲು ಆ್ಯಪ್ ಸಹಾಯ ಪಡೆದುಕೊಂಡಿದ್ದಾರೆ. ತಂತ್ರಜ್ಞಾನವನ್ನು ಯುವ ಜನಾಂಗ ಮಾತ್ರ ನೆಚ್ಚಿಕೊಂಡಿದೆ ಎಂಬ ಊಹೆಯನ್ನು ಬದಲಿಸಿ, ಆ್ಯಪ್ ಮೂಲಕ ಅಡುಗೆ ಕಲಿಸುವ ಚಿತ್ರಾ ಮಾಮಿ, ಹಲವು ಮುಸ್ಸಂಜೆ ವಯಸ್ಸಿನವರಿಗೆ ಪ್ರೇರಣೆಯಾಗಿದ್ದಾರೆ.

"2003 ರಲ್ಲಿ ನಾನು ಹಾಸಿಗೆ ಹಿಡಿದಿದ್ದೆ. ಆ ಸಮಯದಲ್ಲಿ ಮಗಳು ಉಷಾ ಮನೆಗೆ ಇಂಟರ್‌ನೆಟ್ ಸಂಪರ್ಕ ಕೊಡಿಸಿದಳು. ಹಾಗೆ ನನ್ನ ಮೊಮ್ಮಕ್ಕಳು ನನಗೆ ಕಂಪ್ಯೂಟರ್ ಬಳಕೆಯ ಬಗ್ಗೆ ಕಲಿಸಿ, ಗೂಗಲ್ ಬಗ್ಗೆ ತಿಳಿಸಿದರು. ನನ್ನ ಪತಿ ಕೆ.ಎಸ್ ವಿಶ್ವನಾಥನ್ ಕೂಡ ಈ ಇಳಿವಯಸ್ಸಿನಲ್ಲೂ ನನಗೆ ಸ್ಫೂರ್ತಿಯಾಗಿ ಆಗ ಬೆನ್ನಿಗೆ ನಿಂತ್ರು. ಆಮೇಲೆ ನಾನು ಹಿಂತಿರುಗಿ ನೋಡಲೇ ಇಲ್ಲ. ಈ ಆ್ಯಪ್ ಇಷ್ಟು ಹಿಟ್ ಆಗುತ್ತದೆ ಎಂದು ನಾನು ಕನಸು ಮನಸ್ಸಲ್ಲೂ ಅಂದುಕೊಂಡಿರಲಿಲ್ಲ" ಇಂದು ಭಾರತದಲ್ಲೇ ಅತ್ಯಂತ ಜನಪ್ರಿಯ ಆ್ಯಪ್ ಇದಾಗಿದೆ. ಯಾರಾದ್ರು ಉತ್ತರ ಭಾರತದವರು, ದಕ್ಷಿಣ ಭಾರತದವರನ್ನು ಮದುವೆಯಾದರೆ ಈ ಆ್ಯಪ್ ಅವರಿಗೆ ತುಂಬಾ ಸಹಾಯಕಾರಿಯಾಗಲಿದೆ."
- ಚಿತ್ರಾವಿಶ್ವನಾಥನ್​, ಅಡುಗೆ ತಜ್ಞೆ

ಚಿತ್ರಾ ಅವರ ವಿಶೇತೆಯಂದರೆ ಅವರು ಹೆಚ್ಚಾಗಿ ಅವರು ಸಾತ್ವಿಕ ಆಹಾರವನ್ನು ಪರಿಚಯಿಸಿದ್ದಾರೆ. ಎಲ್ಲ ಸ್ಮಾರ್ಟ್ ಜನರು ಈ ಆ್ಯಪ್‌ನ ಬಳಸಬಹುದು. ಇಲ್ಲಿ 3,000+ ರೆಸಿಪಿಗಳಿವೆ. ಪ್ರತೀ ದಿನ 6 ರಿಂದ 8 ಗಂಟೆಗಳ ಕಾಲ ಅವರು ಬ್ರೌಸಿಂಗ್‌ನಲ್ಲಿ ಕಾಲ ಕಳೆಯುತ್ತಾರೆ. ಸದಾ ಬ್ಯುಸಿಯಾಗಿರುವುದೆಂದರೆ ಅವರಿಗಿಷ್ಟ. ಬಳಕೆದಾರರು ಎಸ್​ಎಂಎಸ್, ವಾಟ್ಸ್​ಆ್ಯಪ್, ಫೇಸ್‌ಬುಕ್, ಇಮೇಲ್ ಅಥವಾ ಫೋನ್ ಮೂಲಕ ಪ್ರಶ್ನೆಗಳನ್ನು ಕೇಳಿದರೆ ಅವರಿಗೆ ತಕ್ಷಣವೇ ಪ್ರತಿಕ್ರೀಯಿಸುತ್ತಾರೆ. 

image


"ಮೊದ-ಮೊದಲು ನನ್ನ ಮಕ್ಕಳಿಗಾಗಿಯೇ ನಾನು ರೆಸಿಪಿ ಬರೆಯ ತೊಡಗಿದ್ದು, ಆದರೆ ಅದೀಗ ಆನ್ ಲೈನ್ ಮೂಲಕ ಎಲ್ಲರಿಗೂ ಸಿಗುತ್ತದೆ. ನನ್ನ ಆ್ಯಪ್​ನಲ್ಲಿ ಬಳಕೆದಾರರಿಗೆ ಹಂತ ಹಂತವಾಗಿ ಅಡುಗೆ ಮಾಡುವ ವಿಧಾನಗಳನ್ನು ಲಭ್ಯವಾಗುವಂತೆ ಮಾಡಿದ್ದೇನೆ".

ಇಷ್ಟೆಲ್ಲಾ ಕೆಲಸ ಮಾಡಿದ್ರು ಇವರಿಗೆ ಸುಸ್ತಾಗುದಿಲ್ಲವಂತೆ. ಇವರ ಜೀವನೋತ್ಸಾಹ ನೋಡಿದ್ರೆ, ಎಂತವರು ಬೆರಗಾಗಬೇಕು. ಪ್ರತಿದಿನ ಏನಾದ್ರು ಮಾಡಬೇಕು. ಕನಿಷ್ಠ ಪಕ್ಷ 10 ಜನಕ್ಕಾದ್ರು ಹೊಸ ಪಾಕ ವಿಧಾನಗಳು ಕಲಿಸುವುದು ಇವರ ಗುರಿಯಾಗಿದೆ. ಇವರಿಗೆ ಪುಸ್ತಕ ಬರೆಯುವುದರಲ್ಲಿ ಆಸಕ್ತಿಯಿಲ್ಲ. ಪುಸ್ತಕ ಬರೆದು ಪ್ರಕಾಶಕರನ್ನು ಹುಡುಕುವುದು ಕಷ್ಟ. ಪುಸಕ್ತದಲ್ಲಿ ಕನಿಷ್ಠ 50 ಹೆಚ್ಚೆಂದರೆ 100 ರೆಸಿಪಿಗಳು ಸಿಗಬಹುದು. ಆದರೆ ಈ ಆ್ಯಪ್​ನಿಂದ ಅಪರಿಮಿತವಾದ ಅಡುಗೆ ವಿಧಾನಗಳನ್ನು ಸುಲಭವಾಗಿ ಪರಿಚಯಿಸಬಹುದು. ನೇರವಾಗಿ ಗ್ರಾಹಕರೊಂದಿಗೆ ಸಂವಹನ ನಡೆಸಬಹುದು. ಹೆಚ್ಚು-ಹೆಚ್ಚು ಜನರಿಗೆ ಆರೋಗ್ಯವಾದ ರುಚಿ-ಶುಚಿಯಾದ ಖಾದ್ಯಗಳ ಪರಿಚಯಿಸುವ ಮೂಲಕ, ಜನರು ಅಡುಗೆ ಮಾಡುವಂತೆ ಪ್ರೇರೆಪಿಸುವುದು ಚಿತ್ರಾ ಅವರ ಗುರಿಯಾಗಿದೆ.

ಇದನ್ನು ಓದಿ:

1. 10,000 ಸಾಲದಿಂದ ಕೋಟ್ಯಾಧಿಪತಿಯಾದ ದಿಲೀಪ್​ ಶಾಂಘ್ವಿ ಕಥೆ..!

2. ಜರ್ಮನಿಯಲ್ಲಿ ತರಬೇತಿ ಪಡೆಯಲು ಆಯ್ಕೆಯಾದ ಮಿಝೋರಾಂನ 15ರ ಹರೆಯದ ಬಾಲಕ

3. ಎಂಜಿನಿಯರಿಂಗ್​ಗೆ ಬೈಬೈ- ಕುದುರೆ ಸವಾರಿಗೆ ಹಾಯ್ ಹಾಯ್​- ಹವ್ಯಾಸವೇ ಫುಲ್‍ ಟೈಂ ಜಾಬ್ ಆದ ಕಥೆ..!