Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

KSRTC ಬಸ್​ಗಳಿಗೆ ಬಯೋ ಟಾಯ್ಲೆಟ್ ಭಾಗ್ಯ..!-ದೇಶದ ನಂಬರ್​ ವನ್​ ಸಾರಿಗೆ ಸಂಸ್ಥೆಯಿಂದ ಹೊಸ ಪ್ರಯೋಗ

ಟೀಮ್​ ವೈ.ಎಸ್​. ಕನ್ನಡ

KSRTC ಬಸ್​ಗಳಿಗೆ ಬಯೋ ಟಾಯ್ಲೆಟ್ ಭಾಗ್ಯ..!-ದೇಶದ ನಂಬರ್​ ವನ್​ ಸಾರಿಗೆ ಸಂಸ್ಥೆಯಿಂದ ಹೊಸ ಪ್ರಯೋಗ

Tuesday December 13, 2016 , 2 min Read

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದೇಶದಲ್ಲೇ ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿದೆ. ವಿಭಿನ್ನ ಬಸ್​ಗಳು ಮತ್ತು ಪ್ರಯಾಣಿಕ ಸ್ನೇಹಿ ವಾತಾವರಣ ಕೆಎಸ್ಆರ್​ಟಿಸಿಯನ್ನು ದೇಶದಲ್ಲೇ ನಂಬರ್ ವನ್ ಮಾಡಿದೆ. ಈ ಮಧ್ಯೆ ಕೆಎಸ್ಆರ್​ಟಿಸಿ ಮತ್ತೊಂದು ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ. ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗಾಗಿ ಬಸ್​ನಲ್ಲೇ ಬಯೋ ಟಾಯ್ಲೆಟ್​ನ್ನು ನಿರ್ಮಾಣ ಮಾಡಿಕೊಡಲು ನಿರ್ಧರಿಸಿದೆ. ಕೆಎಸ್ಆರ್​ಟಿಸಿ ಬಸ್​ನಲ್ಲೇ ಬಯೋ ಟಾಯ್ಲೆಟ್​ನ ವ್ಯವಸ್ಥೆ ಮಾಡಿದ್ದೇ ಆದಲ್ಲಿ, ಬಸ್ ಪ್ರಯಾಣದ ಅವಧಿ ಕಡಿಮೆ ಆಗಲಿದೆ. ಜೊತೆಗೆ ಡಯಾಬಿಟಿಸ್ ಪೇಷಂಟ್​​ಗಳು ಕೂಡ ದೂರದ ಊರಿಗೆ ಆರಾಮವಾಗಿ ಪ್ರಯಾಣ ಬೆಳೆಸುವಂತಾಗುತ್ತದೆ. ಡಯಾಟಿಕ್ ಪೇಷಂಟ್​ಗಳು ಸಾಮಾನ್ಯವಾಗಿ ಹೆಚ್ಚು ಟಾಯ್ಲೆಟ್​ಗಳನ್ನು ಉಪಯೋಗಿಸುತ್ತಾರೆ. ಈಗ ಕೆಎಸ್ಆರ್​ಟಿಸಿ ಬಸ್​ಗಳಲ್ಲೇ ಟಾಯ್ಲೆಟ್ ವ್ಯವಸ್ಥೆ ಮಾಡಿದ್ರೆ, ಅವರಿಗೆ ಹೆಚ್ಚು ಅನುಕೂಲವಾಗಲಿದೆ.

image


ಈಗಾಗಲೇ ಬೆಂಗಳೂರು- ಮೈಸೂರು ನಡುವೆ ಚಲಿಸುವ 5 ಬಸ್​ಗಳಲ್ಲಿ ಟಾಯ್ಲೆಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಆದ್ರೆ ಬಸ್​​ಗಳಲ್ಲಿ ಟಾಯ್ಲೆಟ್​ಗಳನ್ನು ಮ್ಯಾನೇಜ್ ಮಾಡುವುದು ಅತೀ ಕಷ್ಟಕರವಾಗಿದೆ. ಕ್ಲೀನಿಂಗ್ ಮತ್ತು ಮೈಂಟೇನೆನ್ಸ್​ ಖರ್ಚು ಸಾರಿಗೆ ಸಂಸ್ಥೆಗೆ ದೊಡ್ಡ ತಲೆನೋವಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಬಯೋ ಟಾಯ್ಲೆಟ್​ಗಳನ್ನು ಬಸ್​ಗಳಲ್ಲಿ ಅಳವಡಿಸಲು ಪ್ಲಾನ್​ ಮಾಡಲಾಗಿದೆ. ಬಯೋ ಟಾಯ್ಲೆಟ್​ನಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಗೊಬ್ಬರವಾಗಿ ಪರಿವರ್ತಿಸಿ, ಅದನ್ನು ಅಗತ್ಯವಿದ್ದವರಿಗೆ ಮಾರಾಟ ಮಾಡುವುದೇ ಬಯೋ ಟಾಯ್ಲೆಟ್​ನ ಕಾನ್ಸೆಪ್ಟ್ ಆಗಿರಲಿದೆ.

“ ನಾವು ಈಗಾಗಲೇ ಬಸ್​ಗಳನ್ನು ತಯಾರಿಸುವ ಕಂಪನಿಗಳಾದ ಸ್ಕ್ಯಾನಿಯಾ, ವೋಲ್ವೋ ಮತ್ತು ಮರ್ಸಿಡೆಝ್​ಗಳಿಗೆ ಬಸ್​ನಲ್ಲೇ ಟಾಯ್ಲೆಟ್​ಗಳನ್ನು ನಿರ್ಮಿಸಿಕೊಡುವಂತೆ ಸೂಚಿಸಿದ್ದೇವೆ. ನಾವು ಯಾವ ಯಾವ ರೂಟ್​ಗಳಲ್ಲಿ ಸಂಚರಿಸುವ ಬಸ್​ಗಳಲ್ಲಿ ಟಾಯ್ಲೆಟ್​ನ ಅವಶ್ಯಕತೆ ಇದೆ ಅನ್ನೋದನ್ನು ತಿಳಿದುಕೊಳ್ಳುತ್ತೇವೆ. ಅದರಂತೆ ಬಸ್​ನಲ್ಲಿ ಬಯೋ ಟಾಯ್ಲೆಟ್​ನ ವ್ಯವಸ್ಥೆ ಮಾಡಿಕೊಡುತ್ತೇವೆ. ”
- ರಾಜೇಂದ್ರ ಕುಮಾರ್ ಕಠಾರಿಯಾ, ಎಂ.ಡಿ. ಕೆ.ಎಸ್. ಆರ್.ಟಿ.ಸಿ

ಕೇಂದ್ರ ಸರಕಾರ ಈಗಾಗಲೇ ಭಾರತವನ್ನು ಬಯಲು ಶೌಚ ಮುಕ್ತ ದೇಶ ಅಂತ ಘೋಷಿಸಲು ಪ್ಲಾನ್​ಗಳನ್ನು ಹಾಕೊಕೊಂಡಿದೆ. ಈ ಮಧ್ಯೆ ಭಾರತೀಯ ರೈಲ್ವೇ ಕೂಡ ಬಯೋ ಟಾಯ್ಲೆಟ್​ನ್ನು ರೈಲುಗಳಿಗೆ ಅಳವಡಿಸಿ, ಓಪನ್ ಪ್ಲೇಸ್​ಗಳಲ್ಲಿ ಮಲವಿಸರ್ಜನೆ ಮಾಡುವುದರ ವಿರುದ್ಧ ಜಾಗೃತಿ ಮೂಡಿಸುತ್ತಿದೆ. ಬಯೋ ಟಾಯ್ಲೆಟ್ ಮೂಲಕ ಸಂಗ್ರಹವಾಗುವ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಅದರಿಂದಲೂ ಉದ್ಯಮ ನಡೆಸುವುದು ಮತ್ತೊಂದು ಆಯಾಮವಾಗಿದೆ. ಈ ಮಧ್ಯೆ ಕೆ.ಎಸ್.ಆರ್.ಟಿ.ಸಿ ರೈಲ್ವೇ ಅಧಿಕಾರಿಗಳನ್ನು ಭೇಟಿಯಾಗಿ ಬಯೋ ಟಾಯ್ಲೆಟ್ ವ್ಯವಸ್ಥೆ ಮತ್ತು ಅದರಿಂದ ಸಿಗುವ ತ್ಯಾಜ್ಯ ಮತ್ತು ಗೊಬ್ಬರಗಳನ್ನು ಮಾರಾಟ ಮಾಡುವ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಿದೆ. ಒಟ್ಟಿನಲ್ಲಿ ಕೆ.ಎಸ್.ಆರ್.ಟಿ. ಸಿ ಇಟ್ಟಿರುವ ಹೆಜ್ಜೆ ದೇಶದ ಬಸ್ ಸಾರಿಗೆ ವ್ಯವಸ್ಥೆಯನ್ನೇ ಬದಲಿಸಬಹುದು ಅನ್ನುವುದು ತಜ್ಞರ ಅಭಿಮತ.

ಇದನ್ನು ಓದಿ:

1. ಜಾಹೀರಾತು ಲೋಕದ ದಿಗ್ಗಜೆ- ಮಾಡೆಲಿಂಗ್ ಅಂದ್ರೆ ನೀವಂದುಕೊಂಡೆ ಏನೂ ಇಲ್ಲ: ಅನಿಲಾ ಆನಂದ್

2. ಮೈಸೂರಿನಿಂದ ಮುಂಬೈವರೆಗೆ- ಸ್ಯಾಂಡಲ್​ವುಡ್​ಗಿಂತಲೂ ಬಾಲಿವುಡ್​ನಲ್ಲಿ ಡಿಮ್ಯಾಂಡ್

3. ಒಂದು ಕೆಲಸ- ಹಲವು ಕನಸು- ಇದು ಸ್ವಚ್ಛಭಾರತದ ಗೆಲುವು