Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ವಿದ್ಯೆಗಿಲ್ಲ ಬೇಲಿ ..ಶ್ರದ್ದೆಯೇ ಇಲ್ಲಿ ದಾರಿ..!

ಪೂರ್ವಿಕಾ

ವಿದ್ಯೆಗಿಲ್ಲ ಬೇಲಿ ..ಶ್ರದ್ದೆಯೇ ಇಲ್ಲಿ ದಾರಿ..!

Saturday January 23, 2016 , 2 min Read

ಭೂಮಿ ಮೇಲೆ ಕದಿಯೋದಕ್ಕೆ ಆಗದೇ ಇರೋ ವಸ್ತು ಅಂದ್ರೆ ಅದು ವಿದ್ಯೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ವಿದ್ಯೆಗೆ ಯಾವುದೇ ಹಂಗಿಲ್ಲ. ಶ್ರದ್ದೆಯೇ ಇದಕ್ಕೆ ಮೂಲ ದಾರಿ. ವಿದ್ಯೆ ಯಾವ ವಯಸ್ಸಿನಲ್ಲಿ ಯಾರಿಗೆ ಒಲಿಯುತ್ತೆ ಅನ್ನೋದು ತಿಳಿಯೋದಿಲ್ಲ. ಕೆಲ ಪುಟ್ಟ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ವಿದ್ಯೆಯಲ್ಲಿ ಸಾಧನೆ ಮಾಡಿದ್ರೆ ಇನ್ನು ಕೆಲವರು ಇಳಿವಯಸ್ಸಿನಲ್ಲಿ ಮೂರ್ನಾಲ್ಕು ಪದವಿ ಪಡೆದು ಜನರು ಆಶ್ಚರ್ಯ ಪಡುವಂತೆ ಮಾಡಿ ಬಿಡುತ್ತಾರೆ.

image


ಬಿಕ್ಷೆ ಬೇಡಿ ವಿದ್ಯೆ ಹಸಿವನ್ನ ನೀಗಿಸಿಕೊಂಡ..!

ವಿದ್ಯೆ ಇದ್ದರೆ ಸಾಕು ಎಂತಹವರು ಕೂಡ ಜೀವನ ಮಾಡಬಹುದು. ಅಂತಹದೇ ಒಂದು ಸತ್ಯ ಸಂಗತಿ ಅಂದ್ರೆ ಬಿಕ್ಷುಕನೊಬ್ಬಇಂದು ವಕೀಲನಾಗಿ ಹೊರಮ್ಮಿರೋದು. ಶಿವಸಿಂಗ್, 48 ವರ್ಷದ ಈತ ಜೈಪುರದ ಬಿಕ್ಷು. ಪ್ರತಿನಿತ್ಯ ಬಿಕ್ಷೆ ಬೇಡುತಿದ್ದ ಈತ ಈಗ ವಕೀಲನಾಗಿದ್ದಾನೆ. ಶಿವಸಿಂಗ್ ಗಂಗಾಪುರ್​​ನಲ್ಲಿ ತನ್ನ ಪದವಿಯನ್ನ ಮುಗಿಸಿದ್ದ. ನಂತ್ರ ಮದುವೆ ಮಾಡಿಕೊಂಡ . ಶಿವಸಿಂಗ್​​ ಎಷ್ಟೇ ಹುಡುಕಿದ್ರು ಕೆಲಸ ಸಿಗಲಿಲ್ಲ. ಕ್ರಮೇಣ ಶಿವಸಿಂಗ್ ಕೆಲಸವಿಲ್ಲದೆ, ಹಣ ಇಲ್ಲದೆ, ಮನೆ ಸಂಸಾರ ನಡೆಸಲು ಕಷ್ಟಪಟ್ಟ. ಶಿವಸಿಂಗ್ ಕೈನಲ್ಲಿ ಏನು ಆಗಲ್ಲ ಅಂತ ನಿರ್ಧಾರ ಮಾಡಿ ಶಿವಸಿಂಗ್ ಪತ್ನಿ ಹಾಗೂ ಮಕ್ಕಳು ಅವನನ್ನ ಬಿಟ್ಟುಹೋಗಿಬಿಟ್ರು. ಮುಂದೆ ಏನು ಮಾಡಬೇಕೆಂದು ತಿಳಿಯದ ಶಿವಸಿಂಗ್ ಜೀವನ ನಡೆಸೋದಕ್ಕಾಗಿ ಬಿಕ್ಷೆ ಬೇಡಲು ನಿರ್ಧರಿಸಿ, ಆ ಕಾಯಕವನ್ನು ಆರಂಭಿಸಿದ್ದರು.

image


ಬಿಕ್ಷೆಬೇಡಿ ಕಾಲೇಜಿಗೆ ಸೇರಿದ ಶಿವಸಿಂಗ್ ..!

image


ಬಿಕ್ಷೆ ಬೇಡಿದ ಹಣವನ್ನ ಕೂಡಿಟ್ಟ ಶಿವಸಿಂಗ್ ಅದೇ ಹಣದಿಂದ ಕಾನೂನು ಪದವಿ ಪಡೆಯುವ ಉದ್ದೇಶದಿಂದ ಕಾಲೇಜಿಗೆ ಪ್ರವೇಶ ಪಡೆಯುತ್ತಾರೆ. 48ವರ್ಷ ವಯಸ್ಸಾಗಿರೋ ಶಿವಸಿಂಗ್ ರಾಜಸ್ಥಾನದ ಸರ್ಕಾರಿ ಕಾಲೇಜಿನಲ್ಲಿ ತಮ್ಮ ವಕೀಲ ವೃತ್ತಿಗಾಗಿ ಶಿಕ್ಷಣವನ್ನ ಪಡೆಯಲು ಪ್ರಾರಂಭ ಮಾಡುತ್ತಾರೆ. ಬಿಕ್ಷೆ ಬೇಡಿ ಬಂದ ಹಣದಿಂದ ಪುಸ್ತಕಗಳನ್ನ ಕೊಂಡು ವಿದ್ಯಾಭ್ಯಾಸವನ್ನ ಮಾಡುತ್ತಿದ್ದಾನೆ. ಪ್ರತಿನಿತ್ಯ 3 ಗಂಟೆಯ ವರೆಗೂಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ನಂತ್ರ ಬಿಕ್ಷೆ ಬೇಡಲು ಹೋಗುತ್ತಾನೆ. ಎರಡು ವರ್ಷಗಳಿಂದ ಕಾಲೇಜಿಗೆ ಬರುತ್ತಿರೋ ಶಿವಸಿಂಗ್ ಇಲ್ಲಿ ತನಕ ಒಂದು ದಿನವೂ ಕಾಲೇಜಿಗೆ ತಪ್ಪಿಸಿಕೊಂಡಿಲ್ಲ. ಅಷ್ಟೇ ಅಲ್ಲದೆ ಒಂದು ಕ್ಲಾಸ್‍ ಅನ್ನೂ ಅಟೆಂಡ್ ಮಾಡದೆ ಬಿಟ್ಟಿಲ್ಲ. ಕ್ಲಾಸ್ ನಲ್ಲಿ ಯಾವ ವಿದ್ಯಾರ್ಥಿ ಇಲ್ಲದೆ ಇದ್ದರೂ ಶಿವಸಿಂಗ್ ಮಾತ್ರ ತರಗತಿಗೆ ಹಾಜರಾಗುತ್ತಾರೆ. ಅದೆಷ್ಟೋ ಸಲ ಇವರೊಬ್ಬರಿಗೆ ತರಗತಿ ತೆಗೆದುಕೊಂಡಿರೋದು ಉಂಟಂತೆ…! ಇನ್ನುಕಾಲೇಜು ರಜೆ ಇರೋ ದಿನಗಳಲ್ಲಿ ಶಿವಸಿಂಗ್ ಗ್ರಂಥಾಲಯದಲ್ಲಿಕೂತು ಓದಿಕೊಳ್ಳುತ್ತಾನೆ..ಬದುಕು ಕಲಿಸೋ ಪಾಠಯಾವ ಶಿಕ್ಷಕರು ಕಲಿಸೋದಕ್ಕೆ ಆಗೋಲ್ಲ ಅನ್ನೋ ಮಾತು ಅಕ್ಷರಶಃ ಸತ್ಯಅನ್ನೋದು ಇಂತಹ ಘಟನೆಗಳನ್ನ ನೋಡೊದ್ರೆತಿಳಿಯುತ್ತೆ. ಸದ್ಯ ಫೈನಲ್‍ ಇಯರ್​ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರೋ ಶಿವಸಿಂಗ್ ಇನ್ನು ಕೆಲವೇ ದಿನಗಳಲ್ಲಿ ವಕೀಲರಾಗಿ ಹೊರಹೊಮ್ಮುತ್ತಾರೆ. ಶಿವಸಿಂಗ್ ಬಗ್ಗೆ ಅಲ್ಲಿಯ ಪ್ರಾಧ್ಯಪಕರಿಗೂ ತುಂಬಾಗೆ ಹೆಮ್ಮೆ ಇದೆ. ಇಂತಹ ಒಬ್ಬ ವಿದ್ಯಾರ್ಥಿಗೆ ವಿದ್ಯೆ ಹೇಳಿಕೊಡುತ್ತಿರೋದು ಹಾಗೂ ಈ ವಯಸ್ಸಿನಲ್ಲಿ ಶಿವಸಿಂಗೆಗೆ ವಿದ್ಯೆ ಮೇಲಿರೋ ಆಸಕ್ತಿ ನೋಡಿ ತುಂಬಾನೇ ಖುಷಿ ಪಡುತ್ತಾರೆ.