ಗೋಲ್ಡ್, ರೋಲ್ ಗೋಲ್ಡ್ ಆಭರಣ ಬೊರ್ ಆಗಿದ್ಯಾ! ಹಾಗಾದ್ರೆ ಹೂವಿಂದ ತಯಾರದ ಡಿಫರೆಂಟ್ ಆಭರಣ ಟ್ರೈ ಮಾಡಿ
ಆರಾಧ್ಯ
ಇದು ಏನಿದ್ರೂ ಫ್ಯಾಶನ್ ಜಮಾನಾ.. ದಿನದಿಂದ ದಿನಕ್ಕೆ , ಈ ಫ್ಯಾಶನ್ ಬದಲಾಗ್ತಾನೇ ಇರುತ್ತೆ.. ಜನರೂ ಈ ಬದಲಾದ ಫ್ಯಾಶನ್ ಗೆ ತಕ್ಕಂತೆ ತಮ್ಮ ಟೇಸ್ಟನ್ನೂ ಬದಲಾಯಿಸ್ತಾರೆ.. ಮಾರ್ಕೆಟ್ಗೂ ಜನರ ಟೇಸ್ಟಿಗೆ ತಕ್ಕಂತೆ ಹೊಸ ಹೊಸ ಟ್ರೆಂಡ್ ಬರ್ತಾನೆ ಇರತ್ತೆ.. ಅದ್ರಲ್ಲೂ ಈಗ ಹೂವುಗಳಿಂದ ಮಾಡಿದ ಆಭರಣಗಳ ಜಮಾನಾ.. ಟ್ರೇಡಿಶನಲ್ ಲುಕ್ ಕೊಡೋ ಈ ಫ್ಲವರ್ ಆಭರಣಗಳಿಗೆ ನಮ್ಮ ಹೆಂಗೆಳೆಯರು ಫುಲ್ ಫಿದಾ ಆಗಿದ್ದಾರೆ… ನಿಮಗೂ ಬಗೆ ಬಗೆಯ ಹೂವುಗಳಿಂದ ತಯಾರದ ಆಭರಣಗಳು ಬೇಕು ಅಂದ್ರೆ ಜಸ್ಟ್ ಒಂದು ಕಾಲ್ ಮಾಡಿದ್ರೆ ಸಾಕು ನಿಮ್ಮ ಮನೆಗೆ ಫ್ಲವರ್ ಜ್ಯುವೆಲ್ಸ್ ಬಂದು ಬಿಡುತ್ತೆ…
ಇದನ್ನು ಓದಿ: ಅಪಘಾತ ತಪ್ಪಿಸಲು ಸ್ಮಾರ್ಟ್ ಡಿವೈಸ್ ಫಾರ್ ಸ್ಮಾರ್ಟ್ ಬಸ್
ಹೌದು ದಿನದಿಂದ ದಿನಕ್ಕೆ ಆನ್ ಲೈನ್ ಮೂಲಕವೇ ವಸ್ತುಗಳನ್ನು ಪೂರೈಕೆ ಮಾಡುವ ವೆಬ್ ಸೈಟ್ ಗಳು ಜನಪ್ರಿಯವಾಗುತ್ತಿದೆ.. ಅಂತಹದೇ ಒಂದು ನೂತನ ವೆಬ್ ಸೈಟ್ ಗೆ ಈಗ ಬಹಳ ಬೇಡಿಕೆ ಬಂದಿದೆ, ಅದು ಫ್ಲವರ್ ನಿಂದ (ಹೂಗಳಿಂದ) ತಯಾರದ ಆಭರಣಗಳ ವೆಬ್ ಸೈಟ್..
ಹೆಣ್ಣುಮಕ್ಕಳಿಗೆ ಆಭರಣಗಳು ಅಂದ್ರೆ ಪಂಚಪ್ರಾಣ ಇದನ್ನೇ ಮನಸ್ಸಲ್ಲಿಟ್ಟು ಕೊಂಡು ಆ ಆಭರಣಗಳಿಗೆ ಒಂದು ಹೂಸ ರೂಪಕೊಟ್ಟು, ಅದರ ಪೂರೈಕೆಗಾಗಿಯೇ ಜೆಪಿ ನಗರದಲ್ಲಿರುವ ರೇಣುಕಾ ಪ್ರಕಾಶ್ ಅವರು ಸುಮಾರು 100 ಕ್ಕೂ ಹೆಚ್ಚು ಬಗ್ಗೆಯ ಹೂವುಗಳ ಆಭರಣಗಳನ್ನ ವಿನೂತನವಾಗಿ ವಿನ್ಯಾಸಗೊಳಿಸಿ ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಆನ್ಲೈನ್ ಮೂಲಕ ನಿಮಗೆ ಬೇಕಾದ ಹೂವಿನ ಆಭರಣ ಬುಕ್ ಮಾಡಿದ್ರೆ ಸಾಕು.. ನಿಮ್ಮ ಮನೆ ಬಾಗಿಲಿಗೆ ಕೆಲವೇ ಗಂಟೆಗಳಲ್ಲಿ ನಿಮ್ಮ ಟ್ರೇಡಿಶನಲ್ ಲುಕ್ ಕೊಡೋ ಹೂವಿನ ಆಭರಣ ಬಂದು ಬಿಡುತ್ತೆ…
ನಿಶ್ಚಿತಾರ್ಥ, ಮೆಹೆಂದಿ, ಮದುವೆ, ಆರತಕ್ಷತೆ, ಸೀಮಂತ, ಹುಟ್ಟು ಹಬ್ಬಗಳಂತಹ ಸಮಾರಂಭಗಳಲ್ಲಿ ವಯಸ್ಸಿನ ಭೇದವಿಲ್ಲದೆ ಪುಟಾಣಿಗಳಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರೂ ಈ ಹೂವಿನ ಆಭರಣ ಇಷ್ಟಪಡುತ್ತಾರೆ. ಅಂತಹವರಿಗಾಗಿ ತಾಜಾ ಹೂವಿನಿಂದ ನಾನಾ ರೀತಿ ವಿನ್ಯಾಸಗೊಳಿಸಿರುವ ಕಿವಿಯೊಲೆ (ಇಯರಿಂಗ್), ನೆಕ್ ಚೈನ್, ಸೊಂಟಕ್ಕೆ ದಾಬು, ಉಂಗುರ, ಕೈ ಬಳೆ, ಬೈತಲೆ ಬೊಟ್ಟು, ತೊಳ್ಬಂದಿ, ಮಿಕ್ಸ್ ಅಂಡ್ ಮ್ಯಾಚ್ ಆಭರಣ ಹೀಗೆ ಗ್ರಾಹಕರು ಬಯಸುವ ಘಮ್ಮೆನ್ನುವ ಮಲ್ಲಿಗೆ, ಆಕರ್ಷಿಸುವ ಗುಲಾಬಿಗಳಷ್ಟೇ ಅಲ್ಲದೆ ಅಪರೂಪದ ಹೂವುಗಳನ್ನೆಲ್ಲಾ ಸೇರಿಸಿ ಇವರು ಆಭರಣ ತಯಾರಿಸುತ್ತಾರೆ. ನಿಮಗೆ ಯಾವ ಸ್ಟೈಲ್ ಇಷ್ಟವಾಗುತ್ತದೋ ಆ ಸ್ಟೈಲ್ನ ಆಭರಣ ಇವರು ತಯಾರಿಸಿ ಕೊಡುತ್ತಾರೆ.. ಈ ಆಭರಣಗಳನ್ನ ಚಿಕ್ಕಮಕ್ಕಳಿಂದ ಹಿಡಿದು ಮದುಮಗಳ ವರೆಗೂ ಎಲ್ಲರೂ ಧರಿಸಬಹುದು.. ಇನ್ನು ಮಕ್ಕಳಿಗೆ ಚಿನ್ನದ ಆಭರಣ ಹಾಕಿದ್ರೆ ಪೋಷಕರಿಗೆ ಒಂದು ರೀತಿ ಆತಂಕ ಇರುತ್ತೆ.. ಅದೇ ಈ ಹೂವಿನ ಆಭರಣ ಹಾಕಿದ್ರೆ, ಮಕ್ಕಳು ಖುಷಿ ಯಿಂದ ಇರ್ತಾರೆ.. ಜೊತೆಗೆ ಪೋಷಕರು ನಿಶ್ವಿತೆಯಿಂದ ಸಮಾರಂಭದಲ್ಲಿ ಭಾಗವಹಿಸಬಹುದು..
ಇನ್ನು ಈ ಆಭರಣ ಬುಕ್ ಮಾಡುವುದು ಕೂಡ ಅಷ್ಟೇ ಸುಲಭ ... ನೀವು, ಅವರ ಫೇಸ್ಬುಕ್ ಪೇಜ್ ಗೆ ವಿಸಿಟ್ ಕೊಟ್ಟು ನಿಮಗಿಷ್ಟದ ಹಾಗೂ ನಿಮಗೆ ಬೇಕಾದ ಮಾದರಿಯ ಆಭರಣ ಆರ್ಡರ್ ಮಾಡಬಹುದು. ಜೊತೆಗೆ ವಾಟ್ಸ್ ಆ್ಯಪ್ನಲ್ಲಿ ನಿಮ್ಮ ಸೀರೆಯ ಒಂದು ಫೋಟೋ ಕಳುಹಿಸಿದ್ರೆ ಸಾಕು… ಅದಕ್ಕೆ ಹೊಂದುವಂತಹ ಹಲವು ಆಭರಣದ ಫೋಟೋಗಳನ್ನ ನಿಮಗೆ ಕಳುಹಿಸುತ್ತಾರೆ.. ಅದರಲ್ಲಿ ನಿಮಗೆ ಇಷ್ಟವಾದ ಆಭರಣ ಆಯ್ಕೆ ಮಾಡಿ ಆರ್ಡರ್ ಮಾಡಿದ್ರೆ ಸಾಕು .. ಅವರೇ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ.
ಇನ್ನು ಈ ಆಭರಣಗಳ ಬೆಲೆ 1000 ರೂಪಾಯಿ ಯಿಂದ 3000 ರೂಪಾಯಿಯ ವರೆಗೂ ಲಭ್ಯವಾಗುತ್ತೆ.. ಯಾವುದೇ ರೀತಿಯ ಡಿಲೇವರಿ ಚಾರ್ಜ್ ಕೂಡ ಇವರು ಪಡೆಯುವುದಿಲ್ಲ. ಒಂದುವೇಳೆ ಗ್ರಾಹಕರು ಬೆಂಗಳೂರಿನಿಂದ ಹೊರಗಡೆ ಇದ್ದಲ್ಲಿ ಐಸ್ ಬಾಕ್ಸ್ ಸೌಲಭ್ಯ ಸಹ ನೀಡುತ್ತಾರೆ. ಹೂವಿನ ಆಭರಣಗಳನ್ನ ಐಸ್ಬಾಕ್ಸ್ನಲ್ಲಿ ಪ್ಯಾಕ್ ಮಾಡಿ ಅದನ್ನು ಮದುವೆ ನಡೆಯುವ ಮಂಟಪಕ್ಕೆ ತಲುಪಿಸುತ್ತಾರೆ. ಗ್ರಾಹಕರು ಒಂದು ವಾರ ಅಥವಾ 15 ದಿನ ಮುಂಚಿತವಾಗಿ ಆರ್ಡರ್ ನೀಡಬೇಕು. ಆರ್ಡರ್ ಕಡಿಮೆ ಇರುವ ವೇಳೆ ಮಾತ್ರ ಒಂದು ಅಥವಾ ಎರಡು ದಿನ ಮುಂಚಿತವಾಗಿ ನೀಡುವ ಆರ್ಡರ್ಗಳನ್ನು ಸ್ವೀಕರಿಸುತ್ತಾರೆ.
1. ಮುಂಬೈ ಮಹಾನಗರಿಯಲ್ಲಿ ಶಬ್ದಮಾಲಿನ್ಯ, ಮರಳುಗಾರಿಕೆ ವಿರುದ್ಧ ಸಿಡಿದೆದ್ದ ದಿಟ್ಟೆ..!
2. ಬ್ರೇಕ್‍ನ ನಂತರ ಮತ್ತೆ ಕೆಲಸಕ್ಕೆ - ಮಹಿಳೆಯರಿಗೆ ನೆರವಾಗುತ್ತಿರುವ 4 ಸಂಸ್ಥೆಗಳು
3. ಒಂದು ‘ಚಿಪ್ಸ್'ನ ಕಥೆ.. ಹಳ್ಳಿಯಿಂದ ಮೆಟ್ರೋವರೆಗೆ ಹಬ್ಬಿದ ಸ್ವಾದ.. !