ಇ ಕಾಮರ್ಸ್ ನಲ್ಲಿ ಸಾವಯವ ಕ್ರಾಂತಿಗೆ ಮುನ್ನುಡಿ : ಶಾಪಿಯರ್.. ಬಿ ಹ್ಯಾಪಿಯರ್ ..!
ಸ್ವಾತಿ ಉಜಿರೆ
ಬದುಕು ಬದಲಾಗುತ್ತಿದೆ.. ಜೀವನಶೈಲಿಯೂ ದಿಕ್ಕುತಪ್ಪಿದೆ.. ತಂತ್ರಜ್ಞಾನದ ಹೆಸರಿನಲ್ಲಿ ಬೆಳೆಯುತ್ತಿರುವ ಆಧುನಿಕತೆ ಮತ್ತು ಅದರ ಶೈಲಿ ಸೃಷ್ಠಿಸಿರೋ ಬಿರುಗಾಳಿಯಿಂದಾಗಿ ಎಲ್ಲೂ ಅಯೋಮಯವಾಗುತ್ತಿದೆ. ಇದರ ಹೊಡೆತಕ್ಕೆ ಉಸಿರಾಡುವ ಗಾಳಿಯಿಂದ ಹಿಡಿದು ಕುಡಿಯುವ ನೀರಿನವರೆಗೂ ಎಲ್ಲವೂ ವಿಷಮಯ. ಅದರಲ್ಲೂ ನಮ್ಮ ಊಟದ ಬಟ್ಟಲಲ್ಲೂ ವಿಷವಿದೆ ಎಂಬ ಆಘಾತಕಾರೀ ವಿಷಯವನ್ನು ಕೇಳುತ್ತಿದ್ದೇವೆ. ಇನ್ನು ಕೃಷಿಯಲ್ಲಿ ನಾವು ಬಳಸುತ್ತಿರುವ ರಾಸಾಯನಿಕಗಳು ನಮ್ಮ ನೆಲ, ಜಲ, ಗಾಳಿಯನ್ನು ಸೇರಿವೆ. ರಾಸಾಯನಿಕ ವಿಷಕಾರಿಗಳು ನಾವು ಬಳಸುತ್ತಿರುವ ಆಹಾರ ಪದಾರ್ಥಗಳಲ್ಲೂ ಇವೆ. ಇಂತಹ ವಿಷಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದ ನಮ್ಮ ಆರೋಗ್ಯ ಕೆಡುತ್ತಿದೆ. ಗುಣಪಡಿಸಲಾಗದ ಭೀಕರ ರೋಗಗಳು ನಮ್ಮನ್ನು ಕಾಡುತ್ತಿವೆ. ಪ್ರಾಕೃತಿಕ ಸಮತೋಲನವೂ ತಪ್ಪುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಗರದ ಜನತೆ ಮತ್ತೆ ಸಾವಯವದತ್ತ ಹೊರಳುತ್ತಿದ್ದಾರೆ. ಸಾವಯವ ಉತ್ಪನ್ನಗಳತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ರಾಸಾಯನಿಕ ಗೊಬ್ಬರ, ರೋಗ-ಕೀಟನಾಶಕ ಬಳಕೆ ಮಾಡದ, ಕೃತಕವಾಗಿ ಹಣ್ಣು ಮಾಡದ, ರಾಸಾಯನಿಕ ಕಲಬೆರಕೆಯಿರದ, ಕೃತಕ ಹಾರ್ಮೋನ್ ಬಳಸದ ತಾಜಾ ಆರೋಗ್ಯಕರ ಸಾವಯವ ಉತ್ಪನ್ನಗಳ ಪೂರೈಕೆದಾರರಿಗಾಗಿ ಹುಡುಕಾಟ ಶುರುವಾಗಿದೆ. ಇಂತಹ ಹುಡುಕಾಟದಲ್ಲಿರುವವರು, ಸಾವಯುವ ಉತ್ಪನ್ನಗಳಿಗಾಗಿ ಪರದಾಡುತ್ತಿರುವವರಿಗೆ ಒಂದು ಪರಿಹಾರ ಸಿಕ್ಕಿದೆ. ಅದು ಇತ್ತೀಚೆಗೆ ಶುರುವಾಗಿರೋ ಸಾವಯವ ಉತ್ಪನ್ನಗಳ ಇ-ಕಾಮರ್ಸ್ ವೆಬ್‌ಸೈಟ್ ಶಾಪಿಯರ್..
ಶಾಪಿಯರ್ ಬೆಂಗಳೂರಿನ ಶಿವಪ್ರಸಾದ್ ಟಿ ಆರ್ ಅವರ ಕನಸಿನ ಕೂಸು. ಸ್ಟಾರ್ಟ್ ಅಪ್ ಮೇಲೆ ಒಲವು ಹೊಂದಿದ್ದ ಶಿವಪ್ರಸಾದ್ ಅವರಿಗೆ ಇ ಕಾಮರ್ಸ್ ನಲ್ಲೇ ಭಿನ್ನವಾದ ಐಡಿಯಾದೊಂದಿಗೆ ಬ್ಯುಸಿನೆಸ್ ಆರಂಭಿಸುವ ಲೆಕ್ಕಾಚಾರವಿತ್ತು. ಆಗ ಅವರ ಗಮನಕ್ಕೆ ಬಂದಿದ್ದು ನಗರದ ಜನತೆ ಸಾವಯವ ಉತ್ಪನ್ನಗಳಿಗಾಗಿ ಪಡುವ ಪಾಡು, ಪರದಾಟ. ಇದ್ರ ಬಗ್ಗೆ ಗಂಭೀರವಾದ ಅಧ್ಯಯನ ನಡೆಸಿ ಮಾರುಕಟ್ಟೆಯ ಸ್ಥಿತಿಗತಿಗಳನ್ನ ಅರಿತುಕೊಂಡ್ರು. ಅಲ್ಲದೆ ಸಾವಯುವ ವಸ್ತುಗಳಿಗೆ ಇರುವ ಬೇಡಿಕೆಗಳನ್ನೂ ಗುರುತಿಸಿದ್ರು.
“ ಇ ಕಾಮರ್ಸ್ ನಲ್ಲಿ ಹೊಸತನದ ಅವಕಾಶಗಳಿಗಾಗಿ ಹುಡುಕಾಡುತ್ತಿರುವಾಗ ಗಮನಕ್ಕೆ ಬಂದಿದ್ದು ಸಾವಯವ ಉತ್ಪನ್ನಗಳಿಗಿದ್ದ ಬೇಡಿಕೆ. ರಾಸಾಯನಿಕ ಬಳಸದೆ ಬೆಳೆದ ಮತ್ತು ತಯಾರಿಸಲ್ಪಟ್ಟ ವಸ್ತುಗಳನ್ನ ನೇರವಾಗಿ ಪಡೆಯಲು ಅದೆಷ್ಟೋ ಮಂದಿ ಪ್ರಯತ್ನಿಸುತ್ತಿದ್ರು. ಇದನ್ನೇ ಮಾರುಕಟ್ಟೆಯನ್ನಾಗಿ ಬದಲಾಯಿಸಿ ಇ ಕಾಮರ್ಸ್ ನಲ್ಲಿ ಪ್ರಯೋಗ ನಡೆಸಲು ಯೋಜನೆ ರೂಪಿಸಿದೆ. ಇದ್ರ ಬಗ್ಗೆ ಸ್ನೇಹಿತರು ಹಾಗೂ ಹಿರಿಯರ ಅಭಿಪ್ರಾಯ ಪಡೆದೆ. ಬಳಿಕ ಸತತ 9 ತಿಂಗಳ ಪರಿಶ್ರಮದಿಂದ ಕೊನೆಗೂ ಆರ್ಗಾನಿಕ್ ಉತ್ಪನ್ನಗಳನ್ನ ಪೂರೈಸುವ ಶಾಪಿಯರ್ ಶುರುವಾಗಿದೆ ”
ಶಿವಪ್ರಸಾದ್ ಟಿ ಆರ್, ಶಾಪಿಯರ್ ಸಂಸ್ಥಾಪಕ
ಶಾಪಿಯರ್ ನಲ್ಲಿ ವೈಯುಕ್ತಿಕ ಬಳಕೆಯ ಉತ್ಪನ್ನಗಳು, ಆರೋಗ್ಯ, ಆಹಾರಗಳು ಲಭ್ಯವಿದೆ. ಜೊತೆಗೆ ಸೌಂದರ್ಯವರ್ಧಕಗಳು, ಪರಿಶುದ್ಧ ತರಕಾರಿಗಳು, ಮಹಿಳೆ ಹಾಗೂ ಪುರುಷರ ವಸ್ತುಗಳುಗಳು ಸಿಗುತ್ತವೆ. ಸಾವಯವ ವಸ್ತುಗಳಿಂದ ತಯಾರಿಸಲ್ಪಟ್ಟ ಗೃಹಲಂಕಾರಿಕ ವಸ್ತುಗಳು, ಪೂಜಾ ಸಾಮಾಗ್ರಿಗಳನ್ನೂ ಶಾಪಿಯರ್ ಗ್ರಾಹಕರಿಗೆ ಒದಗಿಸಲು ಸಜ್ಜಾಗಿದೆ. ನಾಡಿನಲ್ಲಿ ಈಗಾಗಲೇ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಬ್ರಾಂಡ್ ಗಳೂ ಶಾಪಿಯರ್ ಜೊತೆಗೆ ಕೈಜೋಡಿಸಿವೆ. 21 ಪ್ರಮುಖ ಕಂಪನಿಗಳು ಈ ಆರ್ಗಾನಿಕ್ ಈ ಕಾಮರ್ಸ್ ಜೊತೆಗೆ ಪಾರ್ಟರ್ ಶಿಪ್ ಹೊಂದಿವೆ.
ಗ್ರಾಹಕರನ್ನ ಸುಲಭವಾಗಿ ತಲುಪಲು ಸಾಧ್ಯವಾಗುವಂತ ವೆಬ್ ಸೈಟನ್ನ ಶಾಪಿಯರ್ ಈಗಾಗಲೇ ಸಿದ್ಧಪಡಿಸಿದೆ. ಆಕರ್ಷಕ ವಿನ್ಯಾಸಗಳಿಂದ ಈಗಾಗಲೇ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಶಾಪಿಯರ್ ನಲ್ಲಿ ಆರ್ಡರ್ ಮಾಡಲು ಬಯಸುವ ಗ್ರಾಹಕರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಸ್ತುಗಳನ್ನ ವಿಭಾಗಿಸಲಾಗಿದೆ. ಭವಿಷ್ಯದ ಬಗ್ಗೆ ಈಗಾಗಲೇ ದೊಡ್ಡ ಕನಸುಗಳನ್ನ ಕಟ್ಟಿಕೊಂಡಿರುವ ಈ ಇ ಕಾಮರ್ಸ್ ನಲ್ಲಿ 30 ಮಂದಿ ಈಗಾಗಲೇ ನೌಕರರಿದ್ದಾರೆ. ಇನ್ನು ಮೊದಲ ಬಾರಿಗೆ ವೆಬ್ ಸೈಟ್ ಗೆ ಭೇಟಿ ಕೊಟ್ಟಿರುವ ಗ್ರಾಹಕರೂ ಇಲ್ಲಿರುವ ಸೇವೆಗಳಿಗೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ.
“ ಬೆಂಗಳೂರಿನಂತಹ ನಗರದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳು ಸಿಗುವುದೇ ಇಲ್ಲ. ಅದ್ರಲ್ಲೂ ತಿನ್ನೋದಿಕ್ಕೆ ರಾಸಾಯನಿಕ ರಹಿತ ಆಹಾರ ಪದಾರ್ಥಗಳು ಸಿಗುವುದಿಲ್ಲ. ಹೀಗಿರುವಾಗ ಹೊಸದಾಗಿ ಶುರುವಾಗಿರುವ ಶಾಪಿಯರ್ ನೀಡುತ್ತಿರುವ ಉತ್ಪನ್ನಗಳು ಖುಷಿ ಕೊಟ್ಟಿವೆ. ಅದ್ರಲ್ಲೂ ಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವುದು ಸ್ವಾಗತಾರ್ಹ ” ತೇಜಸ್,ಶಾಪಿಯರ್ ಗ್ರಾಹಕ
ಮಧ್ಯಮವರ್ಗದವರಿಗೆ ಸಾವಯವ ವಸ್ತುಗಳು ಸುಲಭವಾಗಿ ಕೈಗೆಟುಕುತ್ತಿಲ್ಲ. ಆರ್ಥಿಕವಾಗಿ ಶಕ್ತರಿರುವ ಮೇಲ್ಮಧ್ಯಮ ವರ್ಗದವರು ಮಾತ್ರ ಸಾವಯವ ಶೈಲಿಗೆ ಬದಲಾಗುವ ಆಸಕ್ತಿ ಹೊಂದಿದ್ದಾರೆ ಅನ್ನೋ ಆರೋಪವಿತ್ತು. ಆದ್ರೆ ಎಲ್ಲಾ ವಸ್ತುಗಳನ್ನೂ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಒದಗಿಸುವ ಮೂಲಕ ಶಾಪಿಯರ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಹೀಗಾಗಿ
ಸಾವಯವ ಉತ್ಪನ್ನಗಳನ್ನು ಬಯಸುವ ವರು http://www.shappier.com ವೆಬ್‌ಸೈಟ್ ಮೂಲಕ ಉತ್ಪನ್ನಗಳನ್ನು ಆರ್ಡರ್ ಮಾಡಬಹುದು.